ಹುಬ್ಬಳ್ಳಿ-ಧಾರವಾಡ ಸುದ್ದಿ
ಸಾಲ ವಸೂಲಾತಿ: ಬಾದಾಮಿ ಪಿಕಾರ್ಡ್ ಪ್ರಥಮ

ಸಾಲ ವಸೂಲಾತಿ: ಬಾದಾಮಿ ಪಿಕಾರ್ಡ್ ಪ್ರಥಮ

ಬಾದಾಮಿ: ನಮ್ಮ ಪಿಕಾರ್ಡ ಬ್ಯಾಂಕ್ ಕಳೆದ ೨೦೨೦-೨೧ ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ ೯೫.೦೨ ರಷ್ಟು ಸಾಲ ವಸೂಲಾತಿ ಮಾಡಿರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದು ರಾಜ್ಯ ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ ತಿಳಿಸಿದರು.
ಅವರು ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಭಾಭವನದಲ್ಲಿ ಪಿಕಾರ್ಡ ಬ್ಯಾಂಕ್‌ನ ೨೦೨೦-೨೧ ನೇ ಸಾಲಿನ ಪ್ರಗತಿ ವರದಿ ತಿಳಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

sanjedarpana
ಮಹಾಂತೇಶ ಮಮದಾಪೂರ

ರಾಜ್ಯದ ೧೭೭ ಪಿಕಾರ್ಡ ಬ್ಯಾಂಕ್‌ಗಳ ಪೈಕಿ ನಮ್ಮ ಬಾದಾಮಿ ಬ್ಯಾಂಕ್ ಪ್ರಥಮ, ರಾಣೆಬೆಣ್ಣೂರ ದ್ವಿತೀಯ ಮತ್ತು ಶಿರಗುಪ್ಪ ತೃತೀಯ ಸ್ಥಾನ ಪಡೆದಿದೆ. ಬ್ಯಾಂಕ್‌ನಿAದ ಭೂಅಭಿವೃದ್ಧಿ, ಟ್ರಾö್ಯಕ್ಟರ್, ತೋಟಗಾರಿಕೆ, ಕುರಿ ಸಾಕಾಣಿಕೆ ಮತ್ತು ಎತ್ತು ಖರೀದಿ ಸೇರಿದಂತೆ ೧೯೦ ಜನರೈತರಿಗೆ ೩೬೯.೭೫ ಲಕ್ಷ ಸಾಲ ವಿತರಣೆ ಮಾಡಲಾಗಿದೆ ಎಂದರು.
ಸತತ ಎರಡನೇ ವರ್ಷ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ ರೈತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಳೆದ ಸಾಲಿನಲ್ಲಿ ೨೨೪ ಕೋಟಿ ಸಾಲ ನೀಡಲಾಗಿತ್ತು. ಪ್ರಸಕ್ತ ವರ್ಷ ೫೩೫ ಕೋಟಿ ಸಾಲ ವಿತರಣೆ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ರೈತರಿಗೆ ಸಾಲ ವಿತರಣೆ ಮಾಡುವಲ್ಲಿ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಯಿಂದ ೧೯ ಕೋಟಿ ರೂ. ರೈತರಿಗೆ ಸಾಲ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಸಾಲ ಮರುಪಾವತಿ ಮಾಡುವಲ್ಲಿ ನಿರ್ದೇಶಕ ಮಂಡಳಿ, ಬ್ಯಾಂಕ್ ಸಿಬ್ಬಂದಿ ಶ್ರಮದಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಸೂಲಾತಿಯಾಗಿದೆ. ಬರುವ ಅ.೫ ರಂದು ರಾಜ್ಯ ಪಿಕಾರ್ಡ ಬ್ಯಾಂಕ್ ಮೊದಲ ಸಾಮಾನ್ಯ ಸಭೆ ಜರುಗಲಿದ್ದು, ಹೆಚ್ಚಿನ ಸಾಲ ಹಂಚಿಕೆ ಮಾಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.
ಕಳೆದ ವರ್ಷ ನಮ್ಮ ಬ್ಯಾಂಕಿನಿAದ ೧೩.೨೨ ಕೋಟಿ ಠೇವಣಿ ಸಂಗ್ರಹ ಮಾಡಲಾಗಿದೆ. ಇದರಲ್ಲಿ ೮.೨೬ ಲಕ್ಷರೈತರಿಗೆ ಸಾಲ ವಿತರಣೆ ಮಾಡಲಾಗಿದೆ. ಉಳಿದಂತೆ ೭ ಕೋಟಿ ರೂ. ಕೇಂದ್ರ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ವ್ಯವಸ್ಥಾಪಕ ಪ್ರಕಾಶತಾಜಪೂರ, ಉಪಾಧ್ಯಕ್ಷ ರಮೇಶ ಮೊಖಾಶಿ, ನಿರ್ದೇಶಕರಾದ ಪ್ರಕಾಶ ಪಟ್ಟಣಶೆಟ್ಟಿ, ರವೀಂದ್ರ ಪಟ್ಟಣಶೆಟ್ಟಿ, ಎಸ್.ಬಿ.ಕಲಹಾಳ, ತಿಪ್ಪಣ್ಣ ಗಂಗಶೆಟ್ಟಿ, ರಂಗನಗೌಡ ವೆಂಕನಗೌಡ್ರ, ಸುನಂದಾ ಪಾಟೀಲ, ಆರ್.ಎಸ್.ನಿಲೂಗಲ್, ಈರವ್ವ ಅರಳಿಕಟ್ಟಿ, ಪರಸಪ್ಪ ನಾಯ್ಕರ, ಸಿ.ಎಂ.ಭೂಸನೂರಮಠ, ಬಾಲಪ್ಪ ಮಾದರ, ವ್ಯವಸ್ಥಾಪಕ ಪಿ.ಎಸ್.ಮಾಳವಾಡ ಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *