ಕಲಘಟಗಿ: ಕೋವಿಡ್ ಮೃತಪಟ್ಟವರ ವಿವರ ನೀಡುವಲ್ಲಿ ತಾಲೂಕಾಡಳಿತ ವಿಫಲವಾಗಿದ್ದು, ಕೂಡಲೇ ಮರು ಪರಿಶೀಲನೆ ಮಾಡುವಂತೆ ಮಾಜಿ ಸಚಿವ ಸಂತೋಷ ಲಾಡ್ ಇಂದಿಲ್ಲಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಾನಿಕವಾಗಿ ಪರಿಶೀಲನೆ ಮಾಡಲಾಗಿದ್ದು, ಕೋವಿಡ್ನಿಂದ ಕಲಘಟಗಿ ತಾಲೂಕಿನ ೩೭೬ ಜನರು ಮೃತಪಟ್ಟಿದ್ದು, ಆದರೆ, ತಾಲೂಕಾಡಳಿತ ಕೇವಲ ೮೩ ಜನ ಸಾವಿಗೀಡಾಗಿ ದ್ದಾರೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿದರು.
ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ೧ ಲಕ್ಷ ರೂ. ಸಾಲದು, ಪರಿಹಾರ ವನ್ನು ೫ ಲಕ್ಷ ರೂ. ಗಳಿಗೆ ಹೆಚ್ಚಿಸುವಂತೆ ಲಾಡ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಎಸ್.ಆರ್.ಪಾಟೀಲ, ಮಂಜುನಾಥಗೌಡ ಮುರಳ್ಳಿ, ಜಮಾತ ಜಾಗೀರದಾರ, ಲಿಂಗರೆಡ್ಡಿ ನಡುವಿನಮನಿ, ಕುಮಾರ ಖಂಡೇಕರ, ಗಂಗಾಧರ ಚಿಕ್ಕಮಠ ಇತರರಿದ್ದರು.