ಹುಬ್ಬಳ್ಳಿ-ಧಾರವಾಡ ಸುದ್ದಿ

ಜೈವಿಕ ಇಂಧನ, ಸಾವಯವ ಕೃಷಿಗೆ ಉತ್ತೇಜನ

ಬಾದಾಮಿ: ಎಂ.ಸಿ.ಎಲ್.ವತಿಯಿಂದ ಪ್ರತಿ ತಾಲೂಕಿನಲಿ ಜೈವಿಕ ಇಂಧನ ಹಾಗೂ ಸಾವಯವ ಕೃಷಿಯ ಬೆಳವಣಿಗೆಯ ಜೊತೆಗೆ ಈ ಬಂಜರು ಭೂಮಿಯ ಕೃಷಿ ಬಳಕೆಗೆ ಮಾರ್ಪಾಡು ಮಾಡಿ ವಿಕಸನಗೊಳ್ಳುವುದಕ್ಕೆ ಉತ್ತೇಜಿಸಲಾಗುತ್ತಿದೆ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಅಗಸ್ತ್ಯ ಪಾರಮರ್ಸ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಮುಖ್ಯಸ್ಥ ಕಿರಣ ಕಟ್ಟೀಮನಿ ಹೇಳಿದರು.


ಅವರು ಸಮೀಪದ ಶಿವಪೂರ ಗ್ರಾಮದ ರೆಸಾರ್ಟನಲ್ಲಿ ರೈತರ ವಿಚಾರ ಸಂಕೀರ್ಣ ಉದ್ದೇಶಿಸಿ ಮಾತನಾಡಿ, ಸಾವಯವ ಕೃಷಿಗೆ ಉತ್ತೇಜನ ನೀಡುವ ಜೊತೆಗೆ ಬೆಳೆದ ಬೆಳೆಗೆ ಉತ್ತೇಜನ ನೀಡುವುದು, ಆರ್ಥಿಕವಾಗಿ ಸದೃಢಗೊಳಿಸುವುದು.ಕೃಷಿ ಕೂಲಿ ಕಾರ್ಮಿಕರಿಗೆ ಆರ್ಥಿಕ ಸ್ವಾವಲಂಬನೆ, ಶಿಕ್ಷಣ ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುವುದು.2030ರ ವರೆಗೆ ಭಾರತ ದೇಶಕ್ಕೆ ಇಂಧನದಲ್ಲಿ ಸ್ವಯಂಪೂರ್ಣ ಮಾಡುವದು. ಬರುವ ದಿನಗಳಲ್ಲಿ ಸುಮಾರು 5500 ತಾಲೂಕುಗಳಲ್ಲಿ ಸಂಸ್ಥೆಯ ಶಾಖೆ ಗಳನ್ನು ಹೊಂದಲಿದ್ದು, ಕೆಲವೇ ತಿಂಗಳುಗಳಲ್ಲಿ ಶಾಖೆಯನ್ನು ಆರಂಭಿಸ ಲಾಗುವುದು ಎಂದರು.
ಈ ಕಂಪನಿಯ ಸಹಕಾರದಿಂದ ಪ್ರತಿ ತಾಲೂಕಿನಲ್ಲಿ ಪರ್ಯಾವರಣ, ಭೂಮಿಯ ಫಲವತ್ತತೆ ಕಾಪಾಡುವುದು. ಸುತ್ತಮುತ್ತಲು ಉತ್ತಮ ವಾತಾವರಣ ಸೃಷ್ಟಿಸುವುದು. ವಿದ್ಯುತ್ ಉತ್ಪಾದನೆ, ಮತ್ತು ಬಹುಜನರ ಸಷ್ಕಮತೆಗಾಗಿ ಕಟಿಬದ್ಧವಾಗಿದೆ ಎಂದರು.
ಮುಖಂಡ ಮುತ್ತಣ್ಣ ಯರಗೊಪ್ಪ ಮಾತನಾಡಿ, ಎಂಸಿಎಲ್ ಯೋಜನೆ ಯಿಂದ ತಾಲೂಕಿನಲ್ಲಿ ಸುಮಾರು 2500 ರಿಂದ 3000 ಜನರಿಗೆ ಉದ್ಯೋಗ ದೊರೆಯಲಿದೆ. ಇದರಿಂದ ನಿರುದ್ಯೋಗವನ್ನು ಹೋಗಲಾಡಿಸಿ ಸ್ವಾವಲಂಬಿ ಬದುಕಿಗೆ ದಾರಿಯಾಗಲಿದೆ. ಸಾವಯವ ಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಮಾರಕ ರೋಗಗಳನ್ನು ತಡೆಯ ಬಹುದು. ಕೃಷಿ ಮಾಲಿನ್ಯ, ಹವೆ ಪ್ರದೋಷಣೆ ತಡೆಯಲು ಸಹಾಯಕಾರಿ ಯಾಗಲಿದೆ. ಸಾವಯವ ಕೃಷಿಗೆ ಉತ್ತೇಜನ, ಕೃಷಿ ಉತ್ಪನ್ನ ಹೆಚ್ಚಳ, ಉದ್ಯೋಗ ಸಿಗುತ್ತದೆ. ಕಡಿಮೆ ದರದಲ್ಲಿ ಬೀಜಗಳನ್ನು ಪೂರೈಸಲಾಗುತ್ತದೆ. ಎಂಸಿಎಲ್ ಕಂಪನಿಯ ಸದಸ್ಯರಾಗಲು ಮಾಹಿತಿಗಾಗಿ ಮೊ; 97397 48924, 9449821652, 9731662626, 9008422687, 72046 21973 ಸಂಪರ್ಕಿಸಬಹುದಾಗಿದೆ ಎಂದರು. ತಾಲೂಕಿನ ಹಲಕುರ್ಕಿ ಗ್ರಾಮದ ಪ್ರಗತಿಪರ ರೈತರು ಮಹಾರಾಷ್ಟ್ರ ರಾಜ್ಯದ ಜತ್ತ ಗ್ರಾಮಕ್ಕೆ ಭೇಟಿ ನೀಡಿದ ಅನುಭವಗಳನ್ನು ಹಂಚಿಕೊಂಡರು.

administrator

Related Articles

Leave a Reply

Your email address will not be published. Required fields are marked *