ಬೆಂಗಳೂರು: ಮಾದಕ ಜಾಲದಲ್ಲಿ ಸ್ಯಾಂಡಲ್‌ವುಡ್ ನಂಟು ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ರಾಗಿಣಿ, ಸಂಜನಾ ಸೇರಿ ಹಲವರು ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದ್ದು, ಮತ್ತೆ ಸಂಕಷ್ಟ ಎದುರಾಗಿದೆ.
ಹೇರ್ ಫಾಲೀಕ್ ಟೆಸ್ಟ್ ನಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ. ರಾಗಿಣಿ ಮತ್ತು ಸಂಜನಾ ಸೇರಿ ಹಲವರ ಕೂದಲು ಸ್ಯಾಂಪಲ್ ಅನ್ನು ಹೈದರಾಬಾದ್‌ನ ಎಫ್‌ಎಸ್‌ಎಲ್‌ಗೆ ಸಿಸಿಬಿ ಕಳುಹಿಸಿತ್ತು. ಸಿಸಿಬಿ ಕಳೆದ ೧ ವರ್ಷದಿಂದ ರಿಪೋರ್ಟ್ ಗಾಗಿ ಕಾದು ಕುಳಿತ್ತಿತ್ತು. ಸದ್ಯ ಈSಐ ಅಧಿಕೃತ ವರದಿ ಸಿಸಿಬಿ ಕೈ ಸೇರಿದ್ದು, ಈ ವರದಿಯಲ್ಲಿ ನಟಿಮಣಿಯರು ಸೇರಿ ಹಲವರು ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ.
ಪಾರ್ಟಿ ಆಯೋಜಕ ವಿರೇನ್ ಖನ್ನಾ, ರವಿಶಂಕರ್, ರಾಗಿಣಿ, ಸಂಜನಾ ಮತ್ತು ಪೆಡ್ಲರ್ ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ವರದಿ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ.
ಕಳೆದ ೧ ವರ್ಷದ ಅವಧಿಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣಗಳ ಹೇರ್ ಸ್ಯಾಂಪಲ್ ಪರೀಕ್ಷೆ ನಡೆದಿತ್ತು. ಇದೀಗ ಹಲವು ಆರೋಪಿಗಳ ಡ್ರಗ್ ಸೇವಿಸಿರುವುದು ಧೃಡವಾಗಿದೆ. ಪ್ರಕರಣ ದಾಖಲಾದ ಬಳಿಕ ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದರು. ಒಂದು ವೇಳೆ ಬಂಧಿಸಿದ್ರೆ ಡ್ರಗ್ಸ್ ಸೇವನೆ ಬಗ್ಗೆ ಕುರುಹು ಸಿಗಲ್ಲ ಅಂತಾ ಸ್ವಲ್ಪ ದಿನ ತಲೆಮರೆಸಿಕೊಳ್ಳುತ್ತಿದ್ರು. ಆದ್ರೆ ಸಿಸಿಬಿ ಹೊಸ ರೀತಿಯಲ್ಲಿ ತನಿಖೆಗೆ ಮುಂದಾಗಿತ್ತು. ಹೀಗಾಗಿಯೇ ಹೆರ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಹಿಂದೆ ಡ್ರಗ್ಸ್ ಪ್ರಕರಣಗಳಲ್ಲಿ ರಕ್ತ, ಮೂತ್ರ ಪರೀಕ್ಷೆ ಮಾತ್ರ ಮಾಡಲಾಗ್ತಿತ್ತು. ಆದರೆ ಮೊದಲ ಬಾರಿಗೆ
ಆರೋಪಿಗಳ ಹೆರ್ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಯ ವರದಿ ಬಂದಿದ್ದು, ಆರೋಪಿಗಳ ಡ್ರಗ್ಸ್ ಸೇವನೆ ಧೃಡವಾಗಿದೆ.
ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಮೂತ್ರವನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅದರಲ್ಲಿ ಡ್ರಗ್ಸ್ ಸೇವಿಸಿ ಒಂದೆರಡು ದಿನದೊಳಗೆ ಪರೀಕ್ಷೆ ಮಾಡಿದರೆ ಮಾತ್ರ ಪಾಸಿಟಿವ್ ಬರುತ್ತದೆ. ಆದ್ದರಿಂದ ಆರೋಪಿಗಳ ಕೂದಲನ್ನು ಕಳೆದ ವರ್ಷ ಹೈದರಾಬಾದ್ ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ನಿರೀಕ್ಷಣಾ ಜಾಮೀನು ಪಡೆದಿದ್ದ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ
ಹುಬ್ಬಳ್ಳಿ: ಅಂತರರಾಷ್ಟಿçÃಯ ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಬಂಧಿಸ ಲಾಗಿದ್ದ ತುಪ್ಪದ ಹುಡುಗಿ ರಾಗಿಣಿ ಜತೆ ನಿಕಟ ಸಂಪರ್ಕ ಹೊಂದಿದ್ದ ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ಈ ಹಿಂದೆ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಬಂಧನ ಭೀತಿಯಿಂದ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ (ಕ್ರಿಮಿನಲ್ ಮಿಸಿಲೇನಿಯಸ್ 526/2020) ಸಲ್ಲಿಸಿ ಕೊನೆಗೆ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದ.ಆ ಸಂದರ್ಭದಲ್ಲಿ ಇಂತಹ ಡ್ರಗ್ಸ್ ಜಾಲದಲ್ಲಿ ಹೆಸರು ಕೇಳಿ ಬಂದಿರುವವರನ್ನು ಪಕ್ಷದಿಂದ ಉಚ್ಛಾಟನೆಗೂ ಅನೇಕ ಮುಖಂಡರು ಆಗ್ರಹಿಸಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಗಿರೀಶನ ಕ್ಯಾಸಿನೋ ಪಾಲುದಾರಿಕೆ, ವ್ಯವಹಾರ ಕುರಿತಂತೆ ಎರಡು ದಿನ ವಿಚಾರಣೆ ನಡೆಸಿದ್ದ ಹುಬ್ಬಳ್ಳಿ ಸಿಸಿಬಿ ಹಾಗೂ ಆರ್ಥಿಕ ಅಪರಾಧ ಠಾಣೆಯವರು ಅನೇಕ ದಾಖಲೆಗಳನ್ನು ಪಡೆದಿದ್ದರು. ಗೋವಾದ ಕ್ಯಾಡಿಲಾಕ್ ಕ್ಯಾಸಿನೋಗೆ ತೆರಳಿದ ಪರಿಶೀಲಿಸಿದ ಪೊಲೀಸ ತಂಡ ಸಿಸಿಟಿವಿ ಫೂಟೇಜ್ ಸಹಿತ ಅನೇಕ ಮಹತ್ವದ ಸಂಗತಿ ಸಂಗ್ರಹಿಸಿ ಕೊಂಡು ಬಂದಿತ್ತು.
ಈಗ ಮತ್ತೆ ರಾಗಿಣಿ ಡ್ರಗ್ಸ್ ಸೇವನೆ ಸಾಭೀತಾದ ಹಿನ್ನೆಲೆಯಲ್ಲಿ ಮತ್ತೆ ಈತನಿಗೂ ಕಂಟಕ ಎದುರಾದರೂ ಅಚ್ಚರಿಯಿಲ್ಲ.