ಹುಬ್ಬಳ್ಳಿ-ಧಾರವಾಡ ಸುದ್ದಿ
ನರಗುಂದ: ಶಿವಾಜಿ ಪ್ರತಿಮೆ ದಿಢೀರ್ ಪ್ರತಿಷ್ಠಾಪನೆ ಯತ್ನ!

ನರಗುಂದ: ಶಿವಾಜಿ ಪ್ರತಿಮೆ ದಿಢೀರ್ ಪ್ರತಿಷ್ಠಾಪನೆ ಯತ್ನ!

ಸಚಿವರ ಭರವಸೆ: ಪ್ರತಿಭಟನೆ ಹಿಂದಕ್ಕೆ

ನರಗುಂದ: ಸ್ಥಳೀಯ ಮರಾಠಾ ಸಮಾಜದವರು ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ದಿಢೀರ್ ಆಗಿ ಸ್ಥಾಪಿಸಲು ಮುಂದಾದಾಗ ಅದಕ್ಕೆ ಅವಕಾಶ ನೀಡದೇ ಪ್ರತಿಮೆಯನ್ನು ಪೊಲೀಸ್ ಠಾಣೆ ಆವರಣದಲ್ಲಿ ಇರಿಸಲಾಗಿದೆ.


ಕಳೆದ ಅನೇಕ ವರ್ಷಗಳಿಂದ ಶಿವಾಜಿ ಪುತ್ಥಳಿ ಸ್ಥಾಪಿಸಬೇಕೆಂಬುದು ಸಮಾಜ ಬಾಂಧವರ ಬೇಡಿಕೆಯಾಗಿದ್ದು ಪುರಸಭೆಯವರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆಯಾಗಿಲ್ಲ. ಈ ಹಿಂದೆ ಬಿ.ಆರ್.ಯಾವಗಲ್ ಶಾಸಕರಾಗಿದ್ದಾಗ ಸಾರಿಗೆ ಡಿಪೋ ಬಳಿ ಸ್ಥಾಪಿಸುವಂತೆ ಸಹ ಒತ್ತಾಯ ಕೇಳಿ ಬಂದಿತ್ತು.


ಮರಾಠಾ ಸಮುದಾಯದ ಯುವಕರು ಹಾಗೂ ಮುಖಂಡರು ಈ ಬಾರಿ ಕೂಡ್ರಿಸಲೇ ಬೇಕೆಂದು ನಿರ್ಧರಿಸಿ ನಿನ್ನೆ ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿವಾಜಿ ಸರ್ಕಲ್‌ಗೆ ಶಿವಾಜಿ ಪ್ರತಿಮೆಯನ್ನು ತಂದಿದ್ದು ಗೊತ್ತಾಗುತ್ತಿದ್ದಂತೆಯೆ ಪೊಲೀಸರು ಅವಕಾಶ ನೀಡದೇ ಠಾಣೆಗೆ ತಂದು ಸಮಾಜದ ಮುಖಂಡರ ಜತೆ ಮಾತುಕತೆ ನಡೆಸಿದರೂ ಸೊಪ್ಪು ಹಾಕದೇ ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ.


ಈ ವಿಷಯ ಸಚಿವ ಸಿ.ಸಿ.ಪಾಟೀಲರ ಗಮನಕ್ಕೆ ಬಂದು ಪ್ರತಿಭಟನೆ ಬೇಡ ತಾವು ಬಂದ ನಂತರ 3 ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆನ್ನಲಾಗಿದೆ.
ನರಗುಂದಕ್ಕೆ ಡಿವೈಎಸ್‌ಪಿ ವೈ.ಎನ್. ಏಗನಗೌಡ್ರ, ಸಿಪಿಐ ಮಲ್ಲಯ್ಯ ಮಠಪತಿ, ಎಎಸ್‌ಐ ವಿ.ಜಿ.ಪವಾರ
ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.

administrator

Related Articles

Leave a Reply

Your email address will not be published. Required fields are marked *