ಬಾದಾಮಿ: ಉದ್ಯಮಿ ಕಿರಣ ವಿಠ್ಠಲ ಕಟ್ಟಿಮನಿ ಮಾಲಿಕತ್ವದಲ್ಲಿ ಪ್ರಾರಂಭವಾಗಲಿರುವ ಅಗಸ್ತ್ಯ ಫಾರ್ಮರ್ಸ ಪ್ರೊಡ್ಯೂಸ್ ಕಂಪನಿ ಲಿಮಿಟೆಡ್ ಬಾದಾಮಿ ಹಾಗೂ ಪ್ರಾರ್ಥನಾ ಓಂ ಬಯೋಫ್ಯೂಲ್ಸ ಪ್ರೈವೈಟ್ ಲಿಮಿಟೆಡ್ ಬಾದಾಮಿ ಕಾರ್ಖಾನೆಗೆ ಭೂಮಿ ಪೂಜೆ ಮಾಡಲಾಯಿತು.
ತಾಲೂಕಿನ ಹೂಲಗೇರಿ, ಮಮ್ಮಟಗೇರಿ, ಚೋಳಚಗುಡ್ಡ, ಬೇಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಯ ಎಂ.ವಿ.ಪಿಗಳಾದ ಪ್ರದೀಪ ಪೂಜಾರ, ರಾಘವೇಂದ್ರ ರಾಮದುರ್ಗ, ಬಸವರಾಜ ಹಂಪಿಹೊಳಿಮಠ, ಬಸವರಾಜ ಗೊಗೇರಿ ಶುಭ ಹಾರೈಸಿದರು.
ರಂಗು ಗೌಡರ, ಹನಂತಗೌಡ ಹಲಕುರ್ಕಿ, ಕುಬೇರಗೌಡ ಗೌಡರ, ಮುತ್ತು ಪೂಜಾರ, ಅರುಣ ಟೆಂಗಿನಕಾಯಿ, ವಿರೇಶ ಭದ್ರಣ್ಣವರ, ಸಾಗರ, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.