ಕುಂದಗೋಳ: ಕೋವಿಡ್ ನಿಯಂತ್ರಿಸಬೇಕಾದರೆ ಪ್ರತಿಯೊಬ್ಬರು ಲಸಿಕೆ ಹಾಕಿಸಕೊಂಡಾಗ ಮಾತ್ರ ನಿಯಂತ್ರಣಕ್ಕೆ ಸಹಕಾರಿಯಾಗುವುದು ಈ ನಿಟ್ಟಿನಲ್ಲಿ ಯಾವುದೇ ಭಯವಿಲ್ಲದೆ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಓಡಿಸೋಣ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಪಟ್ಟಣದ ಪುರಶಾಲೆ, ಮರಾಠ ಭವನದಲ್ಲಿ ಸೇರಿದಂತೆ ತಾಲೂಕಿ ನಲ್ಲಿ 18 ಕೇಂದ್ರಗಳಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತ ದೇಶಕ್ಕೆ ಮಾರಕವಾಗಿರುವ ಕೋವಿಡ ನಿಯಂತ್ರಿಸಲು ಎಲ್ಲರು ಅಂತರ ಕಾಯ್ದುಕೊಂಡು ಮಾಸ್ಕುಗಳನ್ನು ಧರಿಸಿ ತಮ್ಮ ಅಗತ್ಯೆ ಕೆಲಸ ಕಾರ್ಯ ಗಳನ್ನು ಮಾಡಿಕೊಳ್ಳವ ಮೂಲಕ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಜನರಲ್ಲಿ ವಿನಂತಿ ಮಾಡಿಕೊಂಡರು.
ತಾಲೂಕಾ ವೈದ್ಯಾಧಿಕಾರಿ ಭಾಗೇರತಿ ಮಡ್ಲಿಗೇರಿ, ತಾಪಂ ಇ.ಓ ಮಹೇಶ ಕುರಿಯವರ, ಸಿಪಿಐ ಎಂ.ಎನ್.ದೇಶನೂರು, ಮಲ್ಲಿಕಾರ್ಜುನ ಕಿರೇಸೂರ ಸೇರಿದಂತೆ ಅನೇಕರಿದ್ದರು.
ಪಟ್ಟಣದ ಪ.ಪಂ. ಕಚೇರಿಯಲ್ಲಿ ಅಧ್ಯಕ್ಷ ವಾಸು ಗಂಗಾಯಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಮರಾಠ ಭವನದಲ್ಲಿ ಪೊಲೀಸ್ ಇಲಾಖೆ ಹಾಗೂ ಅವರ ಕುಟುಂಬದವರಿಗೆ ಲಸಿಕೆ ಹಾಕಲಾಯಿತು.