ಸರ್ವ ಸಮಾಜದ ಏಳ್ಗೆಗೆ ಬಿಜೆಪಿ ಬೆಂಬಲಿಸಿ: ಅಮೃತ ದೇಸಾಯಿ
ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮತ್ತು ಬಿಜೆಪಿ ಸರಕಾರದ ಜನಪರ ಆಡಳಿತ ಮೆಚ್ಚಿ ಅನೇಕರು ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ತಾಲೂಕಿನ ಮಾರಡಗಿ ಗ್ರಾಮದ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ, ಉದ್ಯಮಿ ಮುತ್ತಣ್ಣ ಬಳ್ಳಾರಿ ಇತರರ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಆಡಳಿತದಿಂದ ಜನ ಬೇಸತ್ತಿದ್ದಾರೆ.ಇದರಿಂದ ಇಡೀ ದೇಶದಲ್ಲಿ ತಿರಸ್ಕಾರ ಗೊಂಡಿದೆ ಎಂದರು.ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಮಾತನಾಡಿ, ಮುತ್ತಣ್ಣ ಬಳ್ಳಾರಿ ಮತ್ತಿತರರು ಬಿಜೆಪಿ ಸೇರ್ಪಡೆಯಾಗಿರುವುದು ಹೆಚ್ಚಿನ ಬಲ ತಂದಿದೆ. ಮುಂಬರುವ ದಿನಗಳಲ್ಲಿ ಎಲ್ಲರ ಜೊತೆ ಕೂಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಮೇಯರ ಈರೇಶ ಅಂಚಟಗೇರಿ, ಬಸವರಾಜ ಕೊರವರ, ಡಾ.ಎಸ್.ಆರ್.ಜಂಬಗಿ, ಗುರುನಾಥ ಗೌಡರ, ಶರಣು ಅಂಗಡಿ ಇದ್ದರು.
ಸರ್ವ ಸಮಾಜದ ಏಳ್ಗೆಗೆ ಬಿಜೆಪಿ ಬೆಂಬಲಿಸಿ: ಅಮೃತ
ಧಾರವಾಡ: ಬಿಜೆಪಿ ಸರಕಾರದಲ್ಲಿ ಎಸ್ಸಿ-ಎಸ್ಟಿ ಹಾಗೂ ಕುರುಬ ಸಮಾಜ ಸೇರಿದಂತೆ ಎಲ್ಲ ಸಮಾಜಕ್ಕೂ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. ಬರುವ ದಿನಗಳಲ್ಲಿ ಎಲ್ಲ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುತ್ತೇವೆ ಎಂದು ಧಾರವಾಡ-71ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಹೇಳಿದರು.
ನಗರದ ಮರಾಠಾ ಕಾಲೊನಿ ರಸ್ತೆಯ ಬಿಜೆಪಿ ಪಕ್ಷದ ಪ್ರಚಾರ ಕೇಂದ್ರದ ಸಭಾಭವನ ದಲ್ಲಿ ಶನಿವಾರ ನಡೆದ ಧಾರವಾಡ-೭೧ರ ಕ್ಷೇತ್ರದ ಎಸ್ಸಿ,ಎಸ್ಟಿ ಹಾಗೂ ಕುರುಬ ಸಮಾಜದ ವಿವಿಧ ಸಂಘಟನೆ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಭೆ ಉದ್ಘಾಟಿಸಿ ಮಾತನಾಡಿ, ಕುರುಬ ಸಮಾಜ, ಎಸ್ಸಿ,ಎಸ್ಟಿ ಹಾಗೂ ಲಿಂಗಾಯತ ಸಮಾಜವು ಒಂದಾಗಿ ಏಕತೆಯ ಸಂದೇಶ ಸಾರುವ ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ಗೆಲುವಿಗೆ ಕಾರಣರಾಗಬೇಕು ಎಂದರು.
ಮುಖಂಡರಾದ ಜ್ಯೋತಿ ಗುರುನಾಥಗೌಡರ, ನಿಂಗಮ್ಮ ದೊಡ್ಡವಾಡ, ಸಾವಕ್ಕ ಗೋಸಾವಿ, ಮಂಜುಳಾ ತಿಮ್ಮಾಪೂರ, ಶಾಂತವ್ವ ಚಿಟ್ಟಿ, ಪಾರ್ವತಿ ಹಿರೇಮಠ, ಲಕ್ಷ್ಮೀ ಗಳಗಿ, ಸುವರ್ಣಾ ದಳವಾಯಿ, ಶಿವಲೀಲಾ ಸಾಲಿಮಠ ಇದ್ದರು.