ಹುಬ್ಬಳ್ಳಿ-ಧಾರವಾಡ ಸುದ್ದಿ
ಪತ್ರಿಕೋದ್ಯಮ ನೈಟ್ ವಾಚಮನ್ ಕೂಡ: ಸಿಎಂ

ಪತ್ರಿಕೋದ್ಯಮ ನೈಟ್ ವಾಚಮನ್ ಕೂಡ: ಸಿಎಂ

‘ಸಂಜೆ ದರ್ಪಣ’ಕ್ಕೆ ಆಂದೋಲನ ಪ್ರಶಸ್ತಿ ಪ್ರದಾನ

ಬೆಂಗಳೂರು: ಪತ್ರಿಕೋದ್ಯಮ ವಾಚ್ ಡಾಗ್ ಅಷ್ಟೇ ಅಲ್ಲ. ನೈಟ್ ವಾಚಮನ್ ಕೂಡ. ಆ ರೀತಿಯ ಕೆಲಸವನ್ನು ನೀವು ಮಾಡಿದ್ದಿರಿ. ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಕರ್ನಾಟಕ ಮಾದ್ಯಮ ಅಕಾಡೆಮಿ ಹಾಗೂ ವಾರ್ತಾ ಇಲಾಖೆಯ ವತಿಯಿಂದ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ’ಸಂಜೆ ದರ್ಪಣ’ಕ್ಕೆ 2021ನೇ ಸಾಲಿನ ’ಆಂದೋಲನ’ ಪ್ರಶಸ್ತಿ ಸೇರಿದಂತೆ ಟಿಎಸ್ ಆರ್ ಸಹಿತ ವಿವಿಧ ಪ್ರಶಸ್ತಿಗಳನ್ನು 145ಕ್ಕೂ ಹೆಚ್ಚು ಪತ್ರಕರ್ತರಿಗೆ ವಿತರಿಸಿ ಮಾತನಾಡಿದರು.


ಪ್ರಶಸ್ತಿ ಸಿಗುವಂತಹದ್ದು ಇನ್ನಷ್ಟು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಲಿ ಅಂತ ಎನ್ನುವುದು ನನ್ನ ಭಾವನೆ. ನೀವು ಒಳ್ಳೆಯ ಕೆಲಸ ಮಾಡಿದ್ದಕ್ಕೆ ಗುರುತಿಸಿರುತ್ತಾರೆ. ಪ್ರಶಸ್ತಿಯ ಪಾವಿತ್ರ್ಯತೆ ಹೇಗೆ ಇದೆ ಎಂದರೆ, ನಿಮ್ಮ ವೃತ್ತಿಧರ್ಮವನ್ನು ಇನ್ನಷ್ಟು ಗಟ್ಟಿಯಾಗಿ ಪ್ರದಿಪಾದಿಸಬೇಕು ಅಂತ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಇಲ್ಲಿ ಪ್ರಶಸ್ತಿ ಪಡೆದ ಬಹುತೇಕರು ಮೂವತ್ತು ವರ್ಷದಿಂದ ಪರಿಚಯ. ಅವರು ಎಷ್ಟೊಂದು ಕಷ್ಟ ಪಟ್ಟು ಸುದ್ದಿ ಸಂಗ್ರಹಿಸುತ್ತಿದ್ದರು ಎನ್ನುವುದು ನನಗೆ ಅರಿವಿದೆ. ಧಾರವಾಡ, ರಾಯಚೂರು, ಮೈಸೂರಿನಲ್ಲಿ ಕೆಲಸ ಮಾಡುವ ಪತ್ರಕರ್ತರು ಎಷ್ಟು ಕೆಲಸ ಮಾಡುತ್ತಾರೆ ಎನ್ನುವುದು ನನಗೆ ಗೊತ್ತು. ಮಾಧ್ಯಮ ಅಕಾಡೆಮಿ ಕೇವಲ ಪ್ರಶಸ್ತಿ ಕೊಡುವ ಕೆಲಸ ಮಾಡದೇ, ಸಂಶೋದನೆ, ಹೊಸ ಪತ್ರಕರ್ತರಿಗೆ ಪ್ರೋತ್ಸಾಹ, ತಾಲ್ಲೂಕು, ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಹೆಚ್ಚಿನ ಪ್ರೊತ್ಸಾಹ ನೀಡಬೇಕು ಎಂದರು.


’ಸಂಜೆ ದರ್ಪಣ’ ಪತ್ರಿಕೆ ಪರವಾಗಿ ಸುದ್ದಿ ಸಂಪಾದಕ ಪ್ರಸನ್ನಕುಮಾರ ಹಿರೇಮಠ ಅವರು ಪ್ರಶಸ್ತಿ ಸ್ವೀಕರಿಸಿದರು. ಸಚಿವ ಆರ್. ಅಶೋಕ, ಉದ್ಯಮಿಗಳಾದ ವಿಜಯ ಸಂಕೇಶ್ವರ್, ಡಾ. ಸುಧಾಮೂರ್ತಿ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಸದಸ್ಯರಾದ ಶಿವಾನಂದ ತಗಡೂರ,ಕೂಡ್ಲಿ ಗುರುರಾಜ, ದೇವೇಂದ್ರಪ್ಪ ಕಪನೂರ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *