ಹುಬ್ಬಳ್ಳಿ-ಧಾರವಾಡ ಸುದ್ದಿ

ಸಂಸತ್‌ನತ್ತ ರಜತ್ ಚಿತ್ತ: ವಿವಿಧ ಮಠದ ಸ್ವಾಮೀಜಿಗಳ ಬೆಂಬಲ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಯುವ ಮುಖಂಡ, ಕಳೆದ ವಿಧಾನಸಭೆ ಚುನಾವಣೆ ವೇಳೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ರಜತ್ ಉಳ್ಳಾಗಡ್ಡಿಮಠ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಮಧ್ಯೆಯೇ ಧಾರವಾಡ ಜಿಲ್ಲೆಯ ವೀರಶೈವ ಲಿಂಗಾಯತ ಮಠಾಧೀಶರು, ಸ್ವಾಮೀಜಿಗಳ ಬೆಂಬಲ ಹಾಗೂ ಆಶೀರ್ವಾದ ಪಡೆಯಲು ರಜತ್ ಮುಂದಾಗಿದ್ದಾರೆ.


ಅದಕ್ಕೆ ಸಾಕ್ಷಿ ಎಂಬಂತೆ ’ಅವರ ಸಮಾಜ ಸೇವೆ ಸದಾ ಮುನ್ನಡೆಯಲಿ’ ಎಂದು 50ಕ್ಕೂ ಹೆಚ್ಚು ಸ್ವಾಮೀಜಿಗಳು ಆಶೀರ್ವದಿಸಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳ ಸಹಕಾರದೊಂದಿಗೆ ಕೈ ಹೈ ಕಮಾಂಡ್‌ಗೆ ಬೇಡಿಕೆ ಸಲ್ಲಿಸುವ ಮಾತುಗಳು ಕೇಳಿಬರುತ್ತಿವೆ.


ರಜತ್ ಜನ್ಮ ದಿನ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡು ಹರಸಲಿದ್ದಾರೆ. ಈ ಮೂಲಕ ಶಕ್ತಿ ಸಮಾವೇಶ ನಡೆಸಲೂ ತಯಾರಿ ನಡೆದಿದೆ ಎನ್ನಲಾಗಿದೆ.
ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್ ಅವರು ರಜತ್ ಸಂಭ್ರಮದಲ್ಲಿ ಭಾಗಿಯಾಗುವವರಿದ್ದಾರೆ.


ಲಕ್ಷ್ಮೇಶ್ವರ ಮುಕ್ತಿಮಂದಿರ ಶ್ರೀ, ಧಾರವಾಡ ಮುರಘಾಮಠ ಶ್ರೀ, ಮಹಾಂತ ಸ್ವಾಮೀಜಿ ಕಲ್ಮಠ ಬಂಕಾಪುರ ಸವಣೂರ, ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಸಂಸ್ಥಾನ ಪಂಚಗ್ರಹ ಹಿರೇಮಠ ನವಲಗುಂದ, ಚನ್ನಬಸವ ದೇವರು ವೀರಕ್ತಮಠ ಸಂಶಿ, ಅಭಿನವ ರೇವಣಸಿದ್ಧೇಶ್ವರ ಶ್ರೀ ರಾಯನಾಳ ಸೇರಿ ವಿವಿಧ ಮಠಾಧೀಶರು ರಜತ್‌ಗೆ ಬೆಂಬಲ ಸೂಚಿಸಿದ್ದಾರೆ.

ಉತ್ತಮ ಸಂಘಟನಾ ಚತುರ

ಯುವ ಧುರೀಣ ರಜತ್ ಉಳ್ಳಾಗಡ್ಡಿಮಠ ಅವರ ತಂದೆ ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಧಾರವಾಡ ಜಿಲ್ಲೆಗೆ ಚಿರಪರಿಚಿತರು. ತಂದೆಯ ಆದರ್ಶ ಇಟ್ಟುಕೊಂಡು ರಜತ್ ಅವರು ಸಮಾಜ ಸೇವೆಗೆ ಅಣಿಯಾಗಿದ್ದಾರೆ. ಇವರು ಕೂಡ ಜನನಾಯಕರಾಗಿ ಬೆಳೆಯಲಿ. ಹೆಚ್ಚಿನ ಸಮಾಜ ಸೇವೆ ಮಾಡಲಿ, ಅವರಲ್ಲಿ ಉತ್ತಮ ಸಂಘಟನಾ ಸಾಮರ್ಥ್ಯ ಇದೆ. ಅವರ ಮೇಲೆ ಶ್ರೀ ರೇವಣಸಿದ್ಧೇಶ್ವರರ ಆಶೀರ್ವಾದ ಸದಾ ಇರಲಿದೆ.

ಲಕ್ಷ್ಮೇಶ್ವರ ಮುಕ್ತಿಮಂದಿರ ಶ್ರೀ, ಧಾರವಾಡ ಮುರಘಾಮಠ ಶ್ರೀ, ಮಹಾಂತ ಸ್ವಾಮೀಜಿ ಕಲ್ಮಠ ಬಂಕಾಪುರ ಸವಣೂರ, ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಸಂಸ್ಥಾನ ಪಂಚಗ್ರಹ ಹಿರೇಮಠ ನವಲಗುಂದ, ಚನ್ನಬಸವ ದೇವರು ವೀರಕ್ತಮಠ ಸಂಶಿ, ಅಭಿನವ ರೇವಣಸಿದ್ಧೇಶ್ವರ ಶ್ರೀ ರಾಯನಾಳ

 

administrator

Related Articles

Leave a Reply

Your email address will not be published. Required fields are marked *