ಹುಬ್ಬಳ್ಳಿ-ಧಾರವಾಡ ಸುದ್ದಿ
ರಾಜ್ಯ ಮಟ್ಟದ ಆಹ್ವಾನಿತ ಬಾಸ್ಕೆಟ್ ಬಾಲ್ ಟೂರ್ನಿಗೆ ಮೇಯರ್ ಚಾಲನೆ

ರಾಜ್ಯ ಮಟ್ಟದ ಆಹ್ವಾನಿತ ಬಾಸ್ಕೆಟ್ ಬಾಲ್ ಟೂರ್ನಿಗೆ ಮೇಯರ್ ಚಾಲನೆ

ಲೀಗ್ ಪಂದ್ಯದಲ್ಲಿ ಜಯ ಸಾಧಿಸಿದ ಬಿಗಲ್ಸ್, ವ್ಯಾನಗುರಡ್ಸ್, ವಿಜಾಪುರ, ಕೆಎಸ್‌ಪಿ

ಧಾರವಾಡ: ಅಚಿಂತ್ಯ(33) ಮತ್ತು (15) ಅವರ ಆಟದ ಬಲದಿಂದ ಬೆಂಗಳೂರಿನ ಬಿಗಲ್ಸ್ ತಂಡದವರು ರೋವರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಹಾಗೂ ಕರ್ನಾಟಕ ಸ್ಟೇಟ್ ಬಾಸ್ಕೆಟ್‌ಬಾಲ್ ಅಸೋಶಿಯೇಶನ್ ಸಹಯೋಗದೊಂದಿಗೆ ಆಯೋಜಿಸಿದ ರಾಜ್ಯ ಮಟ್ಟದ ಪುರುಷರ ಆಹ್ವಾನಿತ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ 74-54ರಿಂದ ಚಿಕ್ಕಮಗಳೂರು ಮಾರಿಯೇನ್ಸ್ ತಂಡವನ್ನು ಸೋಲಿಸಿತು.


ನಗರದ ಡಿ.ಸಿ.ಕಂಪೌಂಡ್‌ನಲ್ಲಿರುವ ರೋವರ್ಸ್ ಬಾಸ್ಕೆಟ್ ಬಾಲ್ ಮೈದಾನದಲ್ಲಿ ಗುರುವಾರ ಲೀಗ್ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ರಾಜು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಇತರೆ ಪಂದ್ಯಗಳಲ್ಲಿ ವ್ಯಾನಗುರಡ್ಸ್ 63-51 ರಿಂದ ಎಚ್‌ಬಿಆರ್ ತಂಡವನ್ನು ಸೋಲಿಸಿತು. ನಿಪುಣ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.


ನಗರದ ಮಲ್ಲಸಜ್ಜನ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿಜಾಪುರ ತಂಡ 46-34ರಿಂದ ವೈಸಿಬಿಸಿ ಬಳ್ಳಾರಿ ತಂಡವನ್ನು ಸೋಲಿಸಿತು. ಸಮೀರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಮತ್ತೊಂದು ಪಂದ್ಯದಲ್ಲಿ ಕೆಎಸ್‌ಪಿ 63-30ರಿಂದ ಕೋಲಾರ ಕನಕಾ ತಂಡವನ್ನು ಸೋಲಿಸಿತು. ರುದ್ರಪ್ಪಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಟೂರ್ನಿಗೆ ಚಾಲನೆ: ನಗರದ ಡಿ.ಸಿ. ಕಂಪೌಂಡ್ ನಲ್ಲಿರುವ ರೋವರ್ಸ್ ಬಾಸ್ಕೆಟ್ ಬಾಲ್ ಮೈದಾನದಲ್ಲಿ ರೋವರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಹಾಗೂ ಕರ್ನಾಟಕ ಸ್ಟೇಟ್ ಬಾಸ್ಕೆಟ್ ಬಾಲ್ ಅಸೋಶಿಯೇಶನ್ ಸಹಯೋಗದೊಂದಿಗೆ ಆಯೋಜಿಸಿದ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಆಹ್ವಾನಿತ ಬಾಸ್ಕೆಟ್ ಬಾಲ್ ಟೂರ್ನಿಗೆ ಹು-ಧಾ ಮೇಯರ್ ವೀಣಾ ಬರದ್ವಾಡ ಚಾಲನೆ ನೀಡಿದರು.


ನಂತರ ಮಾತನಾಡಿ, ಟೂರ್ನಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಬೆಳಿಗ್ಗೆ ಕಲಾಭವನದಿಂದ ಚಂಡಿ ವಾದ್ಯ ಹಾಗೂ ಕೆಲಗೇರಿಯ ಜಗ್ಗಲಿಗಿ ತಂಡದೊಂದಿಗೆ ಎಲ್ಲ ತಂಡಗಳ ಕ್ರೀಡಾಪಟುಗಳ ಮೆರವಣಿಗೆ ನಡೆಯಿತು.


ಮೆರವಣಿಗೆಯಲ್ಲಿ ಕ್ಲಬ್ ಅಧ್ಯಕ್ಷ ರಾಮ ದಾಸಣ್ಣವರ, ಮಹಾಪೋಷಕ ಮಹೇಶ ಶೆಟ್ಟಿ, ಉಪಾಧ್ಯಕ್ಷ ವಿಜಯ ಬಳ್ಳಾರಿ, ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುರೇಶ ಬೇದ್ರೆ, ರಮಾನಂದ ಶೆಟ್ಟಿ, ಹರ್ಷಕುಮಾರ ತುರಮರಿ, ರಾಜೇಂದ್ರ ಜಂಬಗಿ, ವೇಣುಗೋಪಾಲ ಉಡುಪಿ, ಶಿವಯೋಗಿ ಅಮಿನಗಡ, ಶ್ರೀಕಾಂತ ಕಂಚಿಬೈಲ್, ಅಶೋಕ ಕಂಚಿಬೈಲ್, ರಾಮ ನಾಯಕ, ನವೀನ ಶಿರಹಟ್ಟಿ, ಶಿವಯೋಗಿ ಬಳ್ಳಾರಿ, ಗುರುರಾಜ ಪುರಾಣಿಕ, ಅಶ್ವತ್ಥಾಮ ಕುಬಾಳ, ತೇಜಸ್ ಪೂಜಾರ, ಮಹಾಂತೇಶ ಬೆಲ್ಲದ, ವೈಷ್ಣವಿ ಚಿಂತಾಮಣಿ, ಕುಮಾರ ಚಿನಿವಾಲ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *