ಹುಬ್ಬಳ್ಳಿ-ಧಾರವಾಡ ಸುದ್ದಿ
ಜಿಎಸ್‌ಟಿ-ಕಸ್ಟಮ್ಸ್ ಮುಡಿಗೆ ’ರೋವರ್ಸ್ ಕಪ್’

ಜಿಎಸ್‌ಟಿ-ಕಸ್ಟಮ್ಸ್ ಮುಡಿಗೆ ’ರೋವರ್ಸ್ ಕಪ್’

ಮೈಸೂರಿನ ಡಿವೈಇಎಸ್ ಮಹಿಳಾ ತಂಡ ಚಾಂಪಿಯನ್

ರೋಮಾಂಚನಗೊಳಿಸಿದ ನವೀನ್, ಶೌಕೀನ ಶೆಟ್ಟಿ ಡಂಕ್ ಶೋ

ಧಾರವಾಡ: ಮೈಸೂರಿನ ರಾಜ್ಯ ಕ್ರೀಡಾ ಇಲಾಖೆಯ ವಸತಿ ನಿಲಯದ ಮಹಿಳಾ ತಂಡವು ಹಾಗೂ ಪುರುಷರ ಬೆಂಗಳೂರಿನ ಜಿಎಸ್‌ಟಿ-ಕಸ್ಟಮ್ಸ್ ತಂಡದವರು ರಾಜ್ಯ ಮತ್ತು ಜಿಲ್ಲಾ ಬಾಸ್ಕೆಟ್ ಬಾಲ್ ಸಂಸ್ಥೆ ಸಹಯೋಗದಲ್ಲಿ ರೋವರ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.

ನಗರದ ರೋವರ್ಸ್ ಬ್ಯಾಸ್ಕೆಟ್‌ಬಾಲ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಲೀಗ್ ಹಂತದ ಮೂರು ಪಂದ್ಯಗಳಲ್ಲಿ ಗೆದ್ದ ಮೈಸೂರು ಮಹಿಳಾ ತಂಡ ಈ ಸಾಧನೆ ಮಾಡಿದರು. ನಿಟ್ಟೆಯ ಕೆ.ಎಸ್.ಹೆಗ್ಡೆ ತಂಡದವರು ಎರಡು ಪಂದ್ಯಗಳಲ್ಲಿ ಜಯಗಳಿಸಿ ರನ್ನರ್ ಆಪ್ ಸ್ಥಾನ ಪಡೆದರು.

ಭಾನುವಾರ ನಡೆದ ಸೆಮಿಫೈನಲ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮೈಸೂರಿನ ಕ್ರೀಡಾ ಹಾಸ್ಟೆಲ್(ಡಿವೈಇಎಸ್) ತಂಡವು 60-53ಅಂಕಗಳಿಂದ ಬೆಂಗಳೂರಿನ ಬೀಗಲ್ಸ್ ತಂಡವನ್ನು ಸೋಲಿಸಿತು. ಕ್ರೀಡಾ ಹಾಸ್ಟೆಲ್ ತಂಡದ ಐಶ್ವರ್ಯಾ (19) ಹಾಗೂ ಬೀಗಲ್ಸ್ ತಂಡಸ ಚಂದನಾ (22) ಉತ್ತಮ ಆಟ ಆಡಿದರು. ಇದೇ ತಂಡದ ಚಂದನಾ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸೆಮಿಫೈನಲ್ ಲೀಗ್ ಹಂತದ ಐದನೇ ಪಂದ್ಯದಲ್ಲಿ ನಿಟ್ಟೆಯ ಕೆ.ಎಸ್.ಹೆಗ್ಡೆ ತಂಡವು 66-35 ರಿಂದ ಧಾರವಾಡದ ರೋವರ್ಸ್ ತಂಡದ ವಿರುದ್ಧ ಜಯಗಳಿಸಿತು. ಕೆ.ಎಸ್.ಹೆಗ್ಡೆ ತಂಡದ ದಿವ್ಯಾ (20) ಉತ್ತಮ ಪ್ರದರ್ಶನ ನೀಡಿದರು.

ಟೂರ್ನಿಯ ಪುರುಷ ವಿಭಾಗದಲ್ಲಿ ಬೆಂಗಳೂರಿನ ಜಿಎಸ್‌ಟಿ-ಕಸ್ಟಮ್ಸ್ ತಂಡದವರು ಚಾಂಪಿಯನ್ ಆದರು. ಮಂಗಳೂರಿನ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವು ರನರ್ ಆಪ್ ಸ್ಥಾನ ಪಡೆದುಕೊಂಡರು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಜಿಎಸ್‌ಟಿ-ಕಸ್ಟಮ್ಸ್ ತಂಡವು ಮಂಗಳೂರಿನ ಬಿ.ಸಿ ತಂಡವನ್ನು ೬೫-೬೪ಅಂಕಗಳಿಂದ ಸೋಲಿಸಿತು. ಕಸ್ಟಮ್ಸ್ ತಂಡ, ರೋವರ್ಸ್ ಕ್ಲಬ್‌ನ ಕೋಚ್ ಅಶೋಕ ಕಂಚಿಬೈಲ್ ಅವರೊಂದಿಗೆ ವಿಜಯೋತ್ಸವ ಮಾಡಿದರು. ಜಿಎಸ್‌ಟಿ-ಕಸ್ಟಮ್ಸ್ ತಂಡದ ಧೀರಜ್ (೩೫) ಜಯಕ್ಕೆ ಕಾಣಿಕೆ ನೀಡಿದರು. ಜಿಎಸ್‌ಟಿ-ಕಸ್ಟಮ್ಸ್ ತಂಡದ ವಾಗೀಶ ಪಂದ್ಯ ಶ್ರೇಷ್ಠರಾದರು. ಜಿಎಸ್‌ಟಿ-ಕಸ್ಟಮ್ಸ್ ನವೀನ್ ಹಾಗೂ ಮಂಗಳೂರಿನ ಶೌಕೀನ ಶೆಟ್ಟಿ ಅವರ ಡಂಕ್ ಶೋ ಜನರ ಮೆಚ್ಚುಗೆಗೆ ಪಾತ್ರ ಆಯಿತು. ಧೀರಜ್ ರೆಡ್ಡಿ, ಮೇಘನಾ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಕ್ಲಬ್ ಅಧ್ಯಕ್ಷ ರಾಮ ದಾಸಣ್ಣವರ, ಮಹಾಪೋಷಕ ಮಹೇಶ ಶೆಟ್ಟಿ ವಿಜೇತ ಪುರುಷರ ತಂಡಕ್ಕೆ 50ಸಾವಿರ ನಗದು ಹಾಗೂ ಟ್ರೋಫಿ, ಮಹಿಳಾ ವಿಜೇತ ತಂಡಕ್ಕೆ 40ಸಾವಿರ ನಗದು ಹಾಗೂ ಟ್ರೋಫಿ ವಿತರಿಸಿದರು.

ರಾಮಕೃಷ್ಣ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಉಪಾಧ್ಯಕ್ಷ ವಿಜಯ ಬಳ್ಳಾರಿ, ಹರ್ಷಕುಮಾರ ತುರಮರಿ, ರಾಜೇಂದ್ರ ಜಂಬಗಿ, ವೇಣುಗೋಪಾಲ ಉಡುಪಿ, ಶಿವಯೋಗಿ ಅಮಿನಗಡ, ಶ್ರೀಕಾಂತ ಕಂಚಿಬೈಲ್, ಅಶೋಕ ಕಂಚಿಬೈಲ್, ರಾಮ ನಾಯಕ, ನವೀನ ಶಿರಹಟ್ಟಿ, ಶಿವಯೋಗಿ ಬಳ್ಳಾರಿ, ಗುರುರಾಜ ಪುರಾಣಿಕ, ಅಶ್ವತ್ಥಾಮ ಕುಬಾಳ, ತೇಜಸ್ ಪೂಜಾರ, ಮಹಾಂತೇಶ ಬೆಲ್ಲದ, ರಾಜಾರಾಮ ಮೊಕಾಶಿ, ವೈಷ್ಣವಿ ಚಿಂತಾಮಣಿ, ಕುಮಾರ ಚಿನಿವಾಲ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *