ದೇವರಿಲ್ಲ ಗುಡಿಯಲ್ಲಿ ಈಗ ನಮ್ಮ ಪ್ರಾಣ ದೇವರಾದ
ಆಪತ್ಭಾಂದವ ಇವರು,
ಜಾತಿ ಮತ ಧರ್ಮದ ಹಂಗಿಲ್ಲದೆ
ನಮ್ಮ ಜೀವ ಜೀವನ ಉಳಿಸುವ ಯೋಗಿ ಇವರು,
ಕಣ್ಣಿಗೆ ಕಾಣದ ಭಯಾನಕ ವೈರಸ್ ಹಿಮ್ಮೆಟ್ಟಿಸಿ
ತಮ್ಮ ಜೀವ ಮುಡಿಪಾಗಿಟ್ಟ ನಮ್ಮ ಆರೋಗ್ಯದ ಸಂಜೀವಿನಿ ಇವರು,
ಭೂಮಿ ಋಣ ತಾಯಿ ಋಣಕ್ಕಿಂತಲು ಮಿಗಿಲಾಗಿದೆ
ಈಗ ವೈದ್ಯನಾರಾಯಣನ ಋಣವು,
ತಂದೆ ತಾಯಿ ಮಗ ಮಕ್ಕಳು ಬಂಧು ಭಾಂದವರು ಮರೆತು ದೂರ ನಿಂತರೂ,
ತಮ್ಮ ಕುಟುಂಬದಿಂದ ದೂರ ನಿಂತು ನಮ್ಮ ಜೀವ ರಕ್ಷಿಸಿದ ಮನೆದೇವರಿಗೆ ಕೋಟಿ ಕೋಟಿ ನಮನಗಳು.
ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ.


