ಹುಬ್ಬಳ್ಳಿ-ಧಾರವಾಡ ಸುದ್ದಿ
ಈ ವೈದ್ಯ

ಈ ವೈದ್ಯ

ಭ್ರೂಣ ಬಸಿರೊಳು ಮೂಡಿ, ತಾಣ ಪಡೆದಂದಿನಿಂದಲೂ
ಪ್ರಾಣ ಪಡೆದು ಪ್ರಾಣಿಯಾಗಿ, ಜಗದ ಜೀವಿಯಾಗಿ
ಬಾಳಿ ಬದುಕಿ, ಜೀವನ ಮುಗಿಸಿ ಪ್ರಾಣತೆತ್ತು
ಏನಿಲ್ಲವಾಗುವ ಪಯಣದಿ ಪ್ರಮುಖ ಪಾತ್ರಧಾರಿ ಈ ವೈದ್ಯ |
ತಾಯಿಯ ಒಡಲಿನಲೇ ಬಸಿರಬಯಕೆಯ ಪ್ರಾರಂಭ
ಬೇಕೆಲ್ಲ ಎನಗೆಂಬ ಮನಸು, ಮೋಹ ಆಸೆಯ ಬಿಂಬ
ಬಿಂಬದೊಡಗೂಡಿ ಬೆಳೆಯುತಿಹ ದಿಂಬದಾಸೆಗೆ ಇಲ್ಲ ಕಡಿವಾಣ
ಆಸೆ ಬಲಿತಂತೆಲ್ಲ, ಬಲಿತು ಮಲೆತಂತೆಲ್ಲ ಬೇಕಿತ ಈ ವೈದ್ಯ |
ನೋಡಿ ತಣಿಯಲು ನೇತ್ರ ರುಚಿಯ ಚಪಲತೆಗೆ ರಸನ
ಇವೆ ಎಂದ ಮೇಲೆ ಬಳಸಲೇಬೇಕಾದ ಅವಯವಗಳು
ತಪ್ಪೇನಿಲ್ಲ, ಇದ್ದುದಾದರೂಯಾತಕ್ಕೆ ಅನಿಭವಿಸದಿರೆ ಬಂದೇನು ಫಲ
ರಂಬ ಮತಿ ಅತಿಯಾಗಿ ಗತಿ ತಪ್ಪಿಆಗಂತೂ ಅತೀ ಮುಖ್ಯ ಈ ವೈದ್ಯ|
ಸ್ಥೂಲ ಕಾಯಕೂ ಬೇಕು, ಬಡಕುಲಕೆ ಬಹು ಮುಖ್ಯ
ದೇಹದಿಚ್ಛೆಗಳು ಹೆಚ್ಚಾದರೂ, ತುಚ್ಛೀಕರಿಸಿ ಕೊಚ್ಚಿಹೋದರೂ
ಮುಚ್ಚು ಮರೆಯಿಲ್ಲದೆ ಬೆಚ್ಚಗಿರಲು, ಎಚ್ಚತ ತಪ್ಪಿದಾಗಂತೂ
ಹುಚ್ಚುತನವ ನಿಚ್ಛಳಾಗಿಸಲು, ಸ್ವಚ್ಛಮಾಡಲೂ ಬೇಕು ಈ ವೈದ್ಯ |
ಶರೀರ ಸ್ವಾಸ್ಥ್ಯಕೂ ಸಖ್ಯ, ಮನದ ಮರ್ದನಕೂ ಮುಖ್ಯ
ಗೋಳಾಟ ಹೊಯ್ದಾಟ, ಬಿದ್ದಾಟ ಗುದ್ದಾಟ ಗೆದೆಯಲು ಬೇಕೀತ
ವಿದ್ಯೆ ಬುದ್ದಿಯ ಬೆರೆಸಿ, ಅಭ್ಯಸಿಸಿ ವ್ಯಾದಿಗಳ ಕಳೆಯಲು
ರೋಗ ಹೊಡೆದೋಡಿಸಲು ಆರೋಗ್ಯ ಕೊಡಲು ಪ್ರತಿ ಜೀವಿಗೂ ಬೇಕೀತ ಈ ವೈದ್ಯ |
ವೈದ್ಯೋ ನಾರಾಯಣೋ ಹರಿ, ಎಂಬ ಮಾತು ಸತ್ಯ
ಕೊರೊನಾ ಕಾಲದಲಂತೂ ಸಾಕ್ಷಿಯಾಯಿತು ನಿತ್ಯ
ನುಂಗಿ ತಮ್ಮೆಲ್ಲ ಕಷ್ಟಗಳ, ಸೇವೆ ಸಲ್ಲಿಸಿದ್ದು ಅತಿ ಸ್ತುತ್ಯ
ಧನ್ಯೋಸ್ಮಿ ವೈದ್ಯರೆ, ದೇವ ದೂತರೆ ಈ ತತ್ಯ ಸತ್ಯ ನಮೋ ನಮಃ, ನಮೋ ನಮಃ |


ಜೀವಿ
ಗದಿಗೆಯ್ಯಾ ವಿ.ಹಿರೇಮಠ

administrator

Related Articles

Leave a Reply

Your email address will not be published. Required fields are marked *