ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ದಂಪತಿಯನ್ನು ಬುಧವಾರ ಬೀರೇಶ್ವರ ಮಲ್ಟಿಸ್ಟೇಟ್ ಸಹಕಾರಿ ಪತ್ತಿನ ಸಂಘದ(ಬ್ಯಾಂಕ್) ಧಾರವಾಡ ಶಾಖೆಯಲ್ಲಿ ಸನ್ಮಾನಿಸಲಾಯಿತು. ಧಾರವಾಡ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ರಾಮಚಂದ್ರ ದಾಸಣ್ಣವರ, ಸದಸ್ಯರಾದ ಲೋಚನೇಶ ಹೂಗಾರ, ದೇವರಾಜ ಕಂಬಳಿ, ಮಹೇಶ ಮಾಸಾಳ, ಮುರಿಗೆಪ್ಪ ಶರಣ್ಣವರ, ಚಂದ್ರಶೇಖರ ಹುಣಸ್ಯಾಳ, ಶಾಖೆಯ ವ್ಯವಸ್ಥಾಪಕ ರಮೇಶ ಮಾಲಾಯಿ, ಗ್ರಾಹಕರಾದ ಶ್ರೀಶೈಲ ನಾಗಮೋತಿ, ರಾಜೇಶ್ವರಿ ನಿಡಗುಂದಿ, ಸಾವಿತ್ರಿ ದೊಡವಾಡ ಹಾಗೂ ಬ್ಯಾಂಕಿನ ಸಿಬ್ಬಂದಿ ಇದ್ದರು.