ಹುಬ್ಬಳ್ಳಿ-ಧಾರವಾಡ ಸುದ್ದಿ

5ಕ್ಕೆ ’ಹುಬ್ಬಳ್ಳಿ ಗಿಚ್ಚ ಐತಿ’ ಲೋಕಾರ್ಪಣೆ

ಹುಬ್ಬಳ್ಳಿ: ’ಹುಬ್ಬಳ್ಳಿ ಗಿಚ್ಚ ಐತಿ’ ವಿಡಿಯೋ ಹಾಡಿನ ಲೋಕಾರ್ಪಣೆ ಕಾರ್ಯಕ್ರಮ ದಿ. 5 ರಂದು ಗೋಕುಲರಸ್ತೆಯ ಕೆ.ಎಲ್.ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೆಡಿಯೋ ಜಾಕಿ ಮಾಹಿ (ಮಹೇಶ ಸುಭಾಷ್) ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018 ಸೆಪ್ಟೆಂಬರ್ 24 ರಂದು ಉತ್ತರ ಕರ್ನಾಟಕದ ಪ್ರಥಮ ಎಫ್.ಎಂ.ರೇಡಿಯೋ ಸ್ಟೇಷನ್ ನಲ್ಲಿ ರೆಡಿಯೋ ಜಾಕಿಯಾಗಿ ಮೊದಲ ಬಾರಿಗೆ ಮನದಾಳದಿಂದ ಹೇಳಿದ ಪದ ಹುಬ್ಬಳ್ಳಿ ಗಿಚ್ಚ್ ಐತಿ…ನಮ್ಮಂದಿಯಾಗ ಕಿಚ್ಚ್ ಐತಿ, ಅಂದು ಆರಂಭವಾದ ಜನರ ಭಾವನೆ ಮರೆಯಬಾರದು ಎಂಬ ಉದ್ದೇಶದಿಂದ ಹುಬ್ಬಳ್ಳಿ ಗಿಚ್ಚ ಐತಿ…ಎಂಬ ವಿಡಿಯೋ ಹಾಡನ್ನು ತಯಾರಿಸಲಾಗಿದೆ ಎಂದರು.


ಈ ವರ್ಣರಂಜಿತ ಹಾಡನ್ನು ಶಾಸಕ ಅರವಿಂದ ಬೆಲ್ಲದ ಲೋಕಾರ್ಪಣೆ ಮಾಡಲಿದ್ದು ಎಆರ್ ಸಿ ಮ್ಯೂಸಿಕ್ ಕನ್ನಡದ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಈ ವಿಡಿಯೋ ಹಾಡಿಗೆ ಪ್ರಮೋದ್ ಸ್ಟೀಪನ್ ಸಂಗೀತ ನೀಡಿದ್ದು, ಕಿರಣ ಬಾಕಳೆ (ಕಿರಣ ಸ್ಟುಡಿಯೊ) ಛಾಯಾಗ್ರಹಣ ಮಾಡಿದ್ದಾರೆ. ವಾಣಿಜ್ಯ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ ಹಾಡನ್ನು ಚಿತ್ರೀಕರಿಸಲಾಗಿದ್ದು,ಹಲವಾರು ಗಣ್ಯಮಾನ್ಯರು ವಿಡಿಯೋ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡು ಪ್ರತಿಯೊಬ್ಬ ಹುಬ್ಬಳ್ಳಿಗರಿಗೆ ಇಷ್ಟ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರಲ್ಲದೇ ಅಂದು ಹಾಡಿನ ಲೋಕಾರ್ಪಣೆ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಭವರಲಾಲ್ ಆರ್ಯ, ಕಿರಣ ಬಾಕಳೆ ಇದ್ದರು.

 

administrator

Related Articles

Leave a Reply

Your email address will not be published. Required fields are marked *