“ನಮ್ಮ ನಾಳೆಗಳು”
ನಾವಾಗ ಬೇಕಿದೆ ನಮ್ಮ
ನಾಳೆಗಳ ನಾಯಕರು
ನಾವಾಗ ಬೇಕಿದೆ
ನಮ್ಮೂರಿನ ಹೆಬ್ಬಾಗಿಲು
ನಾವಾಗ ಬೇಕಿದೆ
ಬಡವರ ಕಣ್ಣೊರೆಸುವ
ಕೈಗಂನಡಿಯ ಬೆಳಕುಗಳು
ನಾವಾಗ ಬೇಕಿದೆ
ನಮ್ಮ ನಾಡಿನ
ಆರೋಗ್ಯದ ನಾವಿಕರು
ನಾವಾಗ ಬೇಕಿದೆ
ನಮ್ಮ ನೆಲದ ಹಸಿರು ಉಸಿರು
ಬೆಳೆಸುವ ಶ್ರೀ ಗಂಧದ ಸಸಿಗಳು
ನಾವಾಗ ಬೇಕಿದೆ
ಅಮಾನವಿಯತೆಯ
ತೊಡೆದು ಹಾಕವ ಕೈಗಳು
ನಾವಾಗ ಬೇಕಿದೆ
ಅಶಕ್ತರ, ಅಂಧರ
ಬಾಳಿನ ದಾರಿದೀಪಗಳು
ಏನಾಗದಿದ್ದರು ಸರಿ ಇನ್ನೊಬ್ಬರ
ಕಾಲೆಳೆಯುವ, ಕೈತುತ್ತುನು ಕಸೆಯುವ
ದುರಂಕಾರಿಗಳು ಆಗದಿದ್ದರೆ
ಅದೇ ನಮ್ಮೆಲ್ಲರ ಒಲವು ಗೆಲುವು.
ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ.