“ದಾಯಾದಿಗಳು”
ಇಂದು ಅಣ್ಣ ತಮ್ಮಂದಿರ ದಿನವಂತೆ
ಇಲ್ಲಿ ಹುಟ್ಟುತ್ತಾ ಹುಟ್ಟುತ್ತಾ
ಅಣ್ಣತಮ್ಮಂದಿರಂತೆ.
ಬೆಳೆಯುತ್ತಾ ಹೋದಂತೆ ದಯಾದಿಗಳು ಆಗುತ್ತಿರುವೆವು
ಒಣ ಅಹಂನಿಂದ ಈಗ ನಾವೆಲ್ಲಾ.
ನಾ ದೊಡ್ಡನು ಓದಿನಲ್ಲಿ
ನಾ ದೊಡ್ಡವನು ದುಡ್ಡಿನಲ್ಲಿ
ನಾ ದೊಡ್ಡವನು ಮನೆಯಲ್ಲಿ
ಹಿರಿಯರ ಮಾತು ಕೇಳದಾಗಿದೆ
ಈಗಿನ ಅಣ್ಣತಮ್ಮಂದಿರ ಒಣ ಪ್ರತಿಷ್ಠೆಗೆ.
ಅಂದು ಲಕ್ಷ್ಮಣ ಭರತನಿಗೆ ಶ್ರೀ ರಾಮನ ನಡೆ ನುಡಿಯೆ ವೇದವಾಕ್ಯದಂತೆ.
ಇಂದು ಆ ಮಾತುಗಳ ವರ್ಣನೆ ಪೇಸ್ ಬುಕ್ ವ್ಯಾಟಸಪ್ ನಲ್ಲಿ ವೇದವಾಕ್ಯವಂತೆ.
ಕಣ್ಣಿದ್ದು ಕುರುಡಾಗಿದೆ ಹಿರಿಯ ಜೀವಗಳು ಇಂದು ನಾವಾಗಬೇಕಿದೆ ಅವರುಗಳಿಗೆ ನಿಜವಾದ ಕಣ್ಣುಗಳು.
ನಾ ದೊಡ್ಡ ಚಿಕ್ಕವ ಬೇದ ಬಾವ ಮರೆಯೋಣ ಒಗ್ಗಟ್ಟಿನ ಬಲದಿಂದ ಒಂದಾಗಿ ಬಾಳೋಣ
ಇನ್ನಾದರೂ ಅಣ್ಣತಮ್ಮಂದಿರಂತೆ ಬದುಕೋಣ…
ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ