ಮಳೆಯ ಕವನ ಬರೆಯಲೆಂದು ಕುಳಿತೆ
ನೆನಪುಗಳ ಹನಿಯಲ್ಲಿ ತೊಯ್ದು ಹೋದೆ
ಇಳೆಯ ಕನಸನು ನನಸಾಗಿಸುವಾ ಮಳೆ
ಹಸನಾಗಿ ತೊಳೆದು ತುಂಬುವುದು ಜೀವಸೆಲೆ
ಬಾಲ್ಯದಲಿ ತೇಲಿಬಿಟ್ಟ ಕಾಗದದ ದೋಣಿ
ಪ್ರತಿಸಲ ವರ್ಷಧಾರೆಯಲಿ ತೇಲಿ ಬರುತಿದೆ
ಬದುಕಿನ ಬಿಸಿಲಿಗೆ ಬಳಲಿದ ಮನಕೆ
ಸವಿ ನೆನಪಿನಾ ಸಿಂಚನ ತಂಪಾಗಿಸಿದೆ
ತುAತುರು ಹನಿಯ ಮೇಘದ ಆಲಾಪಕೆ
ಹೊಸೆದಿದೆ ಹೃದಯ ಹೊಸದೊಂದು ರಾಗ
ಸುರಿಯುವ ಹನಿಯಲಿ ನೀನುಲಿದ ದನಿ
ನೆನಪಿನ ದೋಣಿಯಲಿ ಹೊತ್ತು ತರುತಿದೆಕಾರ್ಮೋಡ ಕರಗಿ ಮಳೆಯಾಗಿ ಸುರಿದು
ಬೆಳೆಯಲಿ ಪ್ರೀತಿಯ ಹುಲುಸಾದ ಬೆಳೆ
ಹಗುರಾಗಲಿ ಮನದ ದುಃಖ ದುಮ್ಮಾನ ಅನುರಣಿಸುತಿರಲಿ ಒಲುಮೆಯ ಮಳೆ ಕವನ.