ನ. 20 ’ವಿಶ್ವ ಮೂಲವ್ಯಾದಿ’ ದಿನಾಚರಣೆ ನಿಮಿತ್ತ ಲೇಖನ
ಆರ್ಯುವೇದದ ಮೂಲಮಂತ್ರ ಸ್ವಾಸ್ಥಸ್ಯ ಸ್ವಾಸ್ಥ ರಕ್ಷಣಂ” ಎಂದರೆ ಮುಖ್ಯವಾಗಿ ಆರೋಗ್ಯವಂತ ವ್ಯಕ್ತಿಯ ಆರೋಗ್ಯ ಕಾಪಾಡಿಕೊಳ್ಳುವುದು, ನಂತರ ರೋಗಿಯ ರೋಗವನ್ನು ಗುಣಪಡಿಸುವುದು. ಆಹಾರ ಪದ್ದತಿ ಮತ್ತು ಸ್ವಸ್ತ ಜೀವನಶೈಲಿಯು ಆರೋಗ್ಯ ಜೀವನದ ಸ್ತಂಭಗಳಾಗಿವೆ. ಇಂದಿನ ಬದಲಾದ ಪಾಶ್ವಿಮಾತ್ಯ ಜೀವನ ಶೈಲಿಯ ಅನುಕರಣೆಯು ಅನೇಕ ರೋಗಗಳಿಗೆ ಮೂಲ ಕಾರಣವಾಗಿದೆ. ಇಂತಹ ರೋಗಗಳ ಸಾಲಿಗೆ ಗುದಗತ ರೋಗಗಳು ಸೇರಿಕೊಳ್ಳುತ್ತವೆ. ಅವುಗಳಲ್ಲಿ ಮೂಲವ್ಯಾದಿಯು ಮೂಲಕ್ಕೆ ತೊಂದರೆ ಉಂಟು ಮಾಡುವ ಖಾಯಿಲೆಯಾಗಿದೆ. ಆಯುರ್ವೇದದಲ್ಲಿ ಈ ರೋಗದ ವಿವರವಾದ ಉಲ್ಲೇಖಗಳಿದ್ದು, ಅದಕ್ಕನುಗುಣವಾಗಿ ರೋಗ ಲಕ್ಷಣ ಹಾಗೂ ಸೂಕ್ತ ಚಿಕಿತ್ಸಾ ವಿಧಾನಗಳನ್ನು ವಿವರಿಸಲಾಗಿದೆ.
ಜಗತ್ತನ್ನು ಕಾಡುತ್ತಿರುವ ಈ ರೋಗವು ಮನುಷ್ಯನ ಜೀವನಕ್ಕೆ ಅಡ್ಡಿ ಉಂಟು ಮಾಡಿ ಅವನು ತನ್ನ ಮಾನಸಿಕ ಮತ್ತು ದೈಹಿಕ ಸಮತೋಲನ ಕಳೆದುಕೊಂಡ ಪರಿಣಾಮವಾಗಿ ಆತನು ವ್ಯಕ್ತಪಡಿಸಲು ಆಗದೆ ಸಹಿಸಲು ಸಾಧ್ಯವಾಗದೆ ಮುಜುಗುರದಿಂದ ಬದುಕುವಂತೆ ಮಾಡುತ್ತದೆ. ಈ ರೋಗವು ಪುರುಷ ಮತ್ತು ಮಹಿಳೆಯಲ್ಲಿ ಸಾಮಾನ್ಯವಾಗಿ ಕಂಡು ಬರುವುದು.
ಪೈಲ್ಸ್ ಎಂದರೇನು ?
ಪೈಲ್ಸ್ ಎನ್ನುವ ಈ ಲ್ಯಾಟಿನ್ ಪದದ ಅರ್ಥ ಬಾಲ್ ಅಥವಾ ಚೆಂಡಿನ ಆಕಾರ. ಇದ್ದನ್ನು ಇಂಗ್ಲೀಷಿನಲ್ಲಿ ಊಚಿemoಡಿಡಿhoiಜ ಎಂದರೆ, ಗುದಭಾಗದಿಂದ ರಕ್ತ ಸೋರುವಿಕೆ ಇದನ್ನು ಆಡು ಭಾಷೆಯಲ್ಲಿ ಮೂಲ್ಯವಾದಿ ಎಂದು ಕರೆಯಲ್ಪಡುತ್ತದೆ. ಇದು ಗುದಭಾಗದ ಗುದನಾಳಗಳ ಪದರುಗಳಲ್ಲಿ ಹಿಗ್ಗಿದ, ಉದಿಕೊಂಡ ರಕ್ತನಾಳಗಳಿಂದ ಕೂಡಿರುತ್ತದೆ. ಮೊಳಕೆಯಂತಹ ಗಂಟುಗಳು ಮಲವಿಸರ್ಜನೆ ಸಮಯದಲ್ಲಿ ಮಲವನ್ನು ಹೊರ ಹೋಗದ ಹಾಗೆ ಮಾಡಿ ಕೆಲವೊಮ್ಮೆ ಮಲದ್ವಾರದ ಹೊರಗೆ ಊದಿಕೊಂಡಂತೆ ಕಾಣುವದು.
ಆರೋಗ್ಯ ಸಮೀಕ್ಷೆಯ ಪ್ರಕಾರ ವಿಶ್ವದ ಪ್ರತಿಶತ ೫೦ರಷ್ಟು ಜನರು ಪೈಲ್ಸ್ ತೊಂದರೆಗೊಳಗಾಗುತ್ತಿದ್ದಾರೆ. ಇದು ಯುವ ಮತ್ತು ಮಧ್ಯಮ ವಯಸ್ಸರಲ್ಲಿ ಕಂಡು ಬರುತ್ತಿದ್ದು, ಪ್ರತಿಶತ ೫೦ರಷ್ಟು ಜನರು ಈ ರೋಗದ ಲಕ್ಷಣವನ್ನು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರು ಅನುಭವಿಸುತ್ತಾರೆ ! ಅಲ್ಲದೇ ಈ ರೋಗವು ಗರ್ಭಿಣಿ ಮತ್ತು ಹೆರಿಗೆ ನಂತರವೂ ಸಾಮಾನ್ಯವಾಗಿ ಕಂಡು ಬರುತ್ತದೆ.
ಪೈಲ್ಸ್ ಉಂಟಾಗುವುದಕ್ಕೆ ಕಾರಣಗಳೇನು ?
- * ಹಲವಾರು ಕಾರಣಗಳು ಅದರಲ್ಲಿ ನಾರಿನಾಂಶ (ತೊಪ್ಪಲು ಪಲ್ಯ) ಇಲ್ಲದ ಆಹಾರ ಸೇವನೆ
- *ಮಲ ವಿಸರ್ಜನೆಗೆ ಬಹಳ ಹೊತ್ತಿನವರೆಗೆ ಕೂಡುವುದು ಮತ್ತು ಅತಿಯಾಗಿ ತಿಣುಕುವುದು,
- *ಪಚನಕ್ರಿಯೆಗೆ ತೊಂದರೆ ಉಂಟು ಮಾಡುವಂತಹ ಜಂಕ್ ಫುಡ್ ವಿಶೇಷವಾಗಿ ಕರಿದ, ಶೇಖರಿಸಿದ ಪದಾರ್ಥಗಳು, ಗೋಬಿ ಮಂಚೂರಿ, ಗಿರಮಿಟ್, ಮಿರ್ಚಿ, ಚಾಟ್ಸ್, ಪಿಜ್ಜಾ, ಬರಗರ್, ಮಾಂಸ, ಮೊಟ್ಟೆ ಮುಂತಾದವುಗಳ ಅತಿಯಾದ ಸೇವನೆ, ಪದೇ ಪದೇ ಮಲಬದ್ದತೆ ಉಂಟು ಮಾಡುತ್ತದೆ.
- *ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು. ಹಸಿವಿಲ್ಲದೆ ಮೇಲಿಂದ ಮೇಲೆ ಊಟ ಮಾಡುವುದು.
- *ಅಜೀರ್ಣ, ಅಸಿಡಿಟಿ (ಗ್ಯಾಸ್ ಟ್ರಬಲ್) ಮತ್ತು ಲಿವರ್ ಸಂಬಂಧಿ ರೋಗಗಳು ಪೈಲ್ಸ್‌ಗೆ ಕಾರಣವಾಗುವುದು.
- *ಶುಚಿತ್ವದ ಕೊರತೆಯಿಂದ ಕೂಡ ಈ ತೊಂದರೆ ಬರುತ್ತದೆ.
- *ಕೆಲವರಲ್ಲಿ ಮೂಲವ್ಯಾಧಿಯು ಕುಟುಂಬದ ಹಿನ್ನೆಲೆಯುಳ್ಳದ್ದು (ಆನುವಂಶಿಕ)ವಾಗಿರುತ್ತದೆ.
- *ಗರ್ಭಿಣಿಯರು ಮತ್ತು ಹೆರಿಗೆ ನಂತರ ಸೇವಿಸುವ ವಿಶೇಷ ಆಹಾರ ಪದಾರ್ಥಗಳು, ಸ್ವಾಭಾವಿಕವಾಗಿ ಮನುಷ್ಯನು ನೇರವಾಗಿ ನಿಲ್ಲುವುದು ಸಹಜ ಸ್ವಭಾವ ಮೊದಲಾದ ಅಂಶಗಳು ಸಹ ಕಾರಣವಾಗಿರುತ್ತದೆ.
- *ಮಲದ್ವಾರದಲ್ಲಿ ಕೆರಳಿಕೆ, ಮಲದ್ವಾರದ ಸುತ್ತಲಿನ ಸ್ನಾಯುಗಳಲ್ಲಿ ಅಸಾಧಾರಣ ರಚನೆ, ಪೆಸ್ಸರಿಸ್‌ಗಳು ಮತ್ತು ಸಪೋಸಿಟರ್‌ಗಳನ್ನು ಅತೀಯಾಗಿ ಉಪಯೋಗಿಸುವುದು ಈ ರೋಗಕ್ಕೆ ಕಾರಣವಾಗಿದೆ.
- *ಬಹಳ ಸಮಯದವರೆಗೆ ಒಂದೇ ಕಡೆ ಕುಳಿತು ಅಥವಾ ನಿಲ್ಲುವುದರಿಂದ ಗುದದ್ವಾರದ ಮತ್ತು ಗುದನಾಗಳ ಸುತ್ತ ಇರುವ ರಕ್ತನಾಳಗಳ ಒತ್ತಡವು ಹೆಚ್ಚಿ ಈ ರೋಗ ಬರುವುದು.
- ಪೈಲ್ಸ್ ರೋಗ ಲಕ್ಷಣಗಳೇನು ?
- *ಮಲದ್ವಾರದಿಂದ ರಕ್ತಸ್ರಾವವು ಸಾಮಾನ್ಯ ರೋಗ ಲಕ್ಷಣವಾಗಿದೆ. ರಕ್ತವು ಹನಿ-ಹನಿಯಾಗಿ ಬೀಳುವುದು ಅಥವಾ ಗುದದ್ವಾರದಿಂದ ರಕ್ತ ಚಿಮ್ಮುವುದು.
- *ಮೂಲವ್ಯಾದಿಯಲ್ಲಿ ಗುದನಾಳದೊಳಗೆ ಅಥವಾ ಸುತ್ತಲೂ ಊತ, ಗುದದ್ವಾರದಿಂದ ಗಂಟು (ಮೊಳಕೆ) ಹೊರಗೆ ಬರುವುದು, ಮಲ ವಿಸರ್ಜನೆಯ ನಂತರ ಒಳ ಹೋಗುವದು.
- *ಕೆಲವೊಮ್ಮೆ ಮಲ ವಿಸರ್ಜನೆ ಸಮಯದಲ್ಲಿ ಮತ್ತು ನಂತರ ನೋವು ಕಾಣಿಸುವುದು, ಇದು ಆ ಭಾಗದಲ್ಲಿ ರಕ್ತ ಗಂಟು ಕಟ್ಟುವುದು ಈ ನೋವಿಗೆ ಕಾರಣ.
- *ಕೆಲವು ರೋಗಿಗಳಲ್ಲಿ ಗುದನಾಳಗಳು ತುಂಬಿದಂತಹ ಭಾವನೆ, ಲೋಳೆಯಂತಹ (ಒuಛಿous) ಪದಾರ್ಥ ವಿಸರ್ಜನೆಯಾಗುವದು. ಮತ್ತು ಪೈಲ್ಸ್‌ನ ಮೊಳಕೆಗಳು ಗುದನಾಳದ ಹೊರಗೆ ಕಾಣುತ್ತವೆ.
- *ಕಷ್ಟದಿಂದ ಕಠಿಣವಾದ ಹಿಕ್ಕಿಯ ಹಾಗೆ ಮಲ ವಿಸರ್ಜನೆ.
- *ಗರ್ಭಾವಸ್ಥೆಯ ಸಮಯದಲ್ಲಿ ಗುದಪ್ರದೇಶದ ಮೇಲೆ ಒತ್ತಡದಿಂದ ಗುದದ್ವಾರ ಮತ್ತು ಗುದನಾಳಗಳ ರಕ್ತನಾಳಗಳಲ್ಲಿ ಊತ ಉಂಟಾಗಿ ಪ್ರಸವ ಸಮಯದಲ್ಲಿಯೂ ಇದೇ ರೀತಿ ಒತ್ತಡದಿಂದ ಮೂಲವ್ಯಾಧಿ ಅಥವ ಫಿಷರ್ ಕಾಣಿಸಿಕೊಳ್ಳುವದು.
- *ಮಾನಸಿಕ ಸಮತೋಲನ ಕಳೆದುಕೊಳ್ಳುವುದು.
ಪೈಲ್ಸ್‌ಗೆ ಆಧುನಿಕ ರೀತಿಯ ಚಿಕಿತ್ಸೆಗಳೇನು?
ಪೈಲ್ಸ್ ನಿವಾರಣೆಗೆ ಹಲವಾರು ವಿಧಾನಗಳು :
- *ಸ್ಲ್ಕಿರೋಥೆರಪಿ- ಒಂದು ರಾಸಾಯನಿಕ ದ್ರವವನ್ನು ಪೈಲ್ಸ್ ಕರಗಿಸುವ ಸಲುವಾಗಿ ಹಿಗ್ಗಿದ ರಕ್ತನಾಳದ ಸುತ್ತಲೂ ಇಂಜೆಕ್ಟ ಮಾಡಲಾಗುತ್ತದೆ.
- *ಕ್ರಯೋಥೆರಪಿ – ಇದರಲ್ಲಿ ಪೈಲ್ಸ್ ಮೊಳಕೆಯನ್ನು ಕುಗ್ಗಿಸಲು ಅತಿಶೈತ್ಯವನ್ನು ಅoಟಜ ಪ್ರಯೋಗಿಸಲಾಗುತ್ತದೆ. ಇದರಿಂದ ಆಗುವ ಅಡ್ಡಪರಿಣಾಮಗಳೆಂದರೆ ಊತ, ಅತಿಯಾದ ಸ್ರಾವ ಮತ್ತು ಕೀವು ತುಂಬುವುದು.
- *ರಬ್ಬರ್ ಬ್ಯಾಂಡ್ ಲೈಗೇಶನ್ ಸಹ ಮಾಡಲಾಗುತ್ತದೆ.
- *ಶಸ್ತ್ರ ಚಿಕಿತ್ಸೆಯ ಮೂಲಕ ಪೈಲ್ಸ್‌ನ್ನು ತೆಗೆಯಲಾಗುತ್ತದೆ.
- *ಗುದಭಾಗಕ್ಕೆ ಜೆಲ್ ಅಥವಾ ಆಯಿಂಟ್‌ಮೆಂಟ್ ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತ್ತದೆ.
- *ಬೆಚ್ಚನೆಯ ನೀರಿನಲ್ಲಿ ಡೆಟಾಲ್ ಹಾಕಿ ಕುಳಿತುಕೊಳ್ಳುವುದರಿಂದ ನೋವು, ಊತ ಕಡಿಮೆಯಾಗಿ ಸುಚಿತ್ವವಾಗಿರುತ್ತದೆ.
ಆಯುರ್ವೇದ ಚಿಕಿತ್ಸೆ :
ಮೂಲವ್ಯಾದಿ ಎಂದಾಕ್ಷಣ ಶಸ್ತ್ರಚಿಕಿತ್ಸೆಯ ಭಯದಿಂದಲೇ ಅನೇಕರು ಚಿಕಿತ್ಸೆಯನ್ನೇ ಉದಾಸೀನ ಮಾಡುವುದುಂಟು. ಖಂಡಿಯವಾಗಿಯೂ ಇದು ತಪ್ಪು. ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ರೋಗದ ಅವಸ್ಥಾನುಸಾರ ಚಿಕಿತ್ಸೆ ಮಾಡಲಾಗುತ್ತದೆ. ಇಲ್ಲಿ ಮಲಬದ್ಧತೆಯೇ ಮೂಲಕಾರಣವಾದ್ದರಿಂದ ಇದನ್ನು ಸರಿ ಮಾಡುವದರ ಜೊತೆಗೆ ಜೀರ್ಣ ಕ್ರಿಯೆಯಲ್ಲಿ ಸುಧಾರಣೆಯನ್ನು ಮಾಡಿಕೊಳ್ಳುವುದು ಮುಖ್ಯವಾಗಿದೆ. ತ್ರಿಪಲಾ ಗುಗ್ಗುಲು, ಸೂರಣವಟಕ, ಅರ್ಷಕುಟಾರ ರಸ, ಅಭಯಾರಿಸ್ಟ ಇತ್ಯಾದಿ ಔಷಧಿಗಳು.
- *ನಾಗಕೇಸರ ಮತ್ತು ಯಷ್ಠಿಮಧುಚೂರ್ಣ ಹಾಲಿನಲ್ಲಿ ಸೇವಿಸುವುದರಿಂದ ರಕ್ತಸ್ರಾವ ನಿಲ್ಲುತ್ತದೆ.
- *ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಹರಿತಕಿ ಚೂರ್ಣವನ್ನು ಮಜ್ಜಿಗೆ ಅಥವಾ ಹಾಗೂ ಜೇನು ತುಪ್ಪದಲ್ಲಿ ಸೇರಿಸಿ ಸೇವಿಸುವುದು.
- *ಹಿಂಗುಚೂರ್ಣವನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗುತ್ತದೆ.
- *ಪ್ರತಿದಿನ ರಾತ್ರಿ ಮಲಗುವಾಗ ತ್ರಿಫಲಾ ಅಥವಾ ಅವಿಪತ್ತಿಕರ ಚೂರ್ಣವನ್ನು ಬೆಚ್ಚಗಿನ ನೀರಿನಲ್ಲಿ ಸೇವಿಸುವುದರಿಂದ ಮಲಬದ್ದತೆ ಅಸಿಡಿಟಿ ನಿವಾರಣೆಯಾಗುತ್ತದೆ.
- *ತ್ರಿಫಲಾ ಕಷಾಯ ಅಥವಾ ಪಂಚ ವಲ್ಕಲ ಕಷಾಯವನ್ನು ಉಗುರ ಬೆಚ್ಚಗಿನ ನೀರನ್ನು ಚಿಕ್ಕ ಪಾತ್ರೆ ಅಥವಾ ತೊಟ್ಟೆಯಲ್ಲಿ ಹಾಕಿ ೫-೧೦ ನಿಮಿಷಗಳವರೆಗೆ ಕುಳಿತುಕೊಳ್ಳುವುದರಿಂದ ಉತ್ತಮ ನೋವು ನಿವಾರಕವಾಗಿ ಮತ್ತು ಬಾವು, ತೂರಿಕೆಯನ್ನು ಸಹ ಕಡಿಮೆಯಾಗಿ ಮಾಡುತ್ತದೆ.
- *ಕ್ಷಾರಕರ್ಮ ಚಿಕಿತ್ಸೆ, ಕ್ಷಾರ ಸೂತ್ರವು ಮೂಲವ್ಯಾಧಿ ಮತ್ತು ಭಗಂಧರ ರೋಗಗಳಲ್ಲಿ ಮ್ಯಾಜಿಕಲ್ ಥ್ರಡ್ ಆಗಿ ಕೆಲಸ ಮಾಡುತ್ತದೆ. ಅಗ್ನಿ ಕರ್ಮ ಚಿಕಿತ್ಸೆ ಇವು ಯಶಸ್ವಿ ಚಿಕಿತ್ಸೆಗಳು. ಇವುಗಳನ್ನು ಆಯಾ ಅವಸ್ಥಾನುಸಾರ ಚಿಕಿತ್ಸಿಸಬೇಕು. ಇವುಗಳಿಂದ ಬಹಳಷ್ಟು ರೋಗಿಗಳು ತಮ್ಮ ಸಮಸ್ಯೆಗೆ ಪರಿಹಾರ ಪಡೆಯುತ್ತಾರೆ.
ಆಹಾರ ಪದ್ದತಿ : ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವದರ ಜೊತೆಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯು ಮುಖ್ಯವಾಗಿರುತ್ತದೆ. ಯಾವುದೇ ಕಾಯಿಲೆ, ಚಿಕಿತ್ಸೆಯಲ್ಲಿ ಔಷಧಿಯಷ್ಟೇ ಮುಖ್ಯ ಪಥ್ಯ. ಆಯುರ್ವೇದ ಶಾಸ್ತ್ರದಲ್ಲಿ ಹೇಳಿದ ಹಾಗೆ ರೋಗಕ್ಕನುಸಾರವಾಗಿ ಆಹಾರ ಕ್ರಮಗಳನ್ನು ಆಯಾ ರೋಗ ಚಿಕಿತ್ಸೆಯಲ್ಲಿ ಆಳವಡಿಸಿಕೊಳ್ಳುವುದು ಲಾಭಕಾರಿ.
ಇವುಗಳನ್ನು ಹೆಚ್ಚು ಸೇವಿಸಿರಿ :
- * ನಾರಿನಾಂಶ ಹೆಚ್ಚಿರುವ ಸಮತೋಲಿತ, ಸತ್ವಯುತ ಆಹಾರವನ್ನು ಸಾಕಷ್ಟು ಸೇವಿಸಿ
- ಉದಾ : ಹಸಿರು ತರಕಾರಿ, ಸೊಪ್ಪು, ಗಜ್ಜರಿ, ಮೂಲಂಗಿ, ಸೌತೆಕಾಯಿಯಿಂದ ತಯಾರಿಸಿದ ಸಲಾಡಗಳನ್ನು ಚೆನ್ನಾಗಿ ನುರಿಸಿ ಸೇವಿಸಿ.
- * ಹೆಚ್ಚು ಹೆಚ್ಚು ಪ್ರಮಾಣದಲ್ಲಿ ದ್ರವ ಪದಾರ್ಥ ಸೇವಿಸಿ.
- ಉದಾ : ನೀರು, ಎಳೆನೀರು, ಶರಬತ್ತು, ಮಜ್ಜಗೆಯ ಉಪಯೋಗ ಅತ್ಯಂತ ಪರಿಣಾಮಕಾರಿ.
- * ಆಯಾ ಋತುಗಳ ಅನುಸಾರವಾಗಿ ಹಣ್ಣುಗಳನ್ನು ಸೇವಿರಿಸಿ.
- ಉದಾ : ಬಾಳೆಹಣ್ಣು, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ಕಲ್ಲಂಗಡಿ, ಪೇರಲ ಹಣ್ಣು, ನಿಂಬೆ ಹಣ್ಣು ಇತ್ಯಾದಿ.
- * ಪ್ರತಿದಿನ ಕನಿಷ್ಠ 3-4 ಲೀಟರ್ ಕಾಯಿಸಿ ಉಗುರ ಬೆಚ್ಚಗಿನ ನೀರನ್ನು ಕುಡಿಯಬೇಕು.
- * ತಾಜಾ ಮಜ್ಜಿಗೆಯಲ್ಲಿ ಸ್ವಲ್ಪ ಹಸಿಶುಂಠಿ, ಹಿಂಗು, ಸೈಂದವಲವಣ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿಯಾದ ನಂತರ ಸೇವಿಸುವುದರಿಂದ ಅಸಿಡಿಟಿ, ಹೊಟ್ಟೆ ಊದಿಕೊಳ್ಳುವುದು, ವಾಕರಿಕೆ ಕಡಿಮೆಯಾಗುತ್ತದೆ.
- * ನಿಯಮಿತವಾದ ಯೋಗಾಸನ, ವಿಶೇಷವಾಗಿ ಸರ್ವಾಂಗಾಸನ, ಪವನಮುಕ್ತಾಸನ, ಅಶ್ವಿನಿಮುದ್ರಾ ಮಾಡುವುದರಿಂದ ರೋಗ ಬರದಂತೆ ನೋಡಿಕೊಳ್ಳಬಹುದು.
ಇವುಗಳನ್ನು ಕಡಿಮೆ ಸೇವಿಸಿ :
- * ಮೊದಲೆ ತಯಾರಿಸಿ ಶೇಖರಿಸಿದ ಆಹಾರ ಪದಾರ್ಥಗಳು
- * ಕಡಲೆಹಿಟ್ಟಿನಿಂದ ತಯಾರಿಸಿದ ಎಣ್ಣೆಯಲ್ಲಿ ಕರಿದ ಮತ್ತು ಬೇಕರಿ ಪದಾರ್ಥಗಳು
- * ಹಸಿಮೆಣಸಿನಕಾಯಿ, ಆಲೂಗಡ್ಡೆ, ಬದನೆಕಾಯಿ ಇತ್ಯಾದಿ
- * ಅತಿಯಾದ ಚಹಾ, ಕಾಫಿ, ಕೋಲ್ಡಡ್ರಿಂಕ್ಸ್, ಮಾಂಸ, ಮೊಟ್ಟೆ ಇತ್ಯಾದಿ
- * ನಿತ್ಯ ಮದ್ಯಸೇವನೆ, ಧೂಮ್ರಪಾನ, ತಂಬಾಕು ಸೇವನೆ ಬೇಡ.
ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು :
- *ಮೂಲವ್ಯಾದಿಯು ನಿವಾರಿಸಲಾಗದ ಕಾಯಿಲೆಯೇನಲ್ಲ.
- *ಮಲಬದ್ದತೆಯೇ ಎಲ್ಲ ಗುದಗತ ರೋಗಗಳಿಗೆ ಕಾರಣವಾಗಿರಬಹುದು. ಅಥವಾ ಒಂದು ಲಕ್ಷಣವಾಗಿರಬಹುದು. ಇದರ ನಿವಾರಣೆಗಾಗಿ ವೈದ್ಯರ ಸಲಹೆ ಮೇರೆಗೆ ಆಹಾರ ಮತ್ತು ಔಷಧಿಗಳನ್ನು ಸೇವಿಸುವುದರಿಂದ ಮೂಲವ್ಯಾದಿ ರೋಗವನ್ನು ತಡೆಗಟ್ಟಬಹುದು.
- *ಗುದ ಪ್ರದೇಶದಲ್ಲಿ ಕಂಡು ಬರುವ ವ್ಯಾದಿಗಳೆಲ್ಲ ಮೂಲವ್ಯಾದಿ ಆಗಿರುವುದಿಲ್ಲ. ಏನಾದರೂ ತೊಂದರೆ ಕಂಡು ಬಂದಲ್ಲಿ ಅಸಹ್ಯಪಡದೇ ಪರೀಕ್ಷಿಸಿಕೊಂಡು ರೋಗವನ್ನು ಖಚಿತಪಡಿಸಿ ಮತ್ತು ಗುಣಪಡಿಸಿಕೊಳ್ಳಿ.
ಕಿವಿಮಾತು :
ಮೂಲವ್ಯಾದಿಗೆ ನಿಜವಾದ ಕಿವಿಮಾತೆಂದರೆ ನಾರಿನಾಂಶಯುಕ್ತ ಆಹಾರ ಸಮಯಕ್ಕೆ ಸರಿಯಾಗಿ ಸೇವನೆ, ಸಾಕಷ್ಟು ನೀರು ಕುಡಿಯುವುದು, ನಿರಾಳ ನಿದ್ರೆ ಮತ್ತು ಮಾನಸಿಕ ನೆಮ್ಮದಿ ಮುಖ್ಯ.
ತಾಮ್ರದ ಉಂಗುರ ಹಾಕಿಕೊಳ್ಳುವುದು, ಬರೆ ಹಾಕಿಸುವುದು, ಬಳ್ಳಿ ಹಾಕಿಸುವುದು ಇವು ಶಾಶ್ವತ ಪರಿಹಾರಗಳಲ್ಲ.
ಗುದಗತಗಳಲ್ಲಿ ಕಂಡು ಬರುವ ರೋಗಗಳೆಲ್ಲ ಮೂಲವ್ಯಾದಿ ಅಲ್ಲ. ಕ್ಯಾನ್ಸರ್ ಕೂಡ ಆಗಿರಬಹುದು.
ಶಕ್ತಿ ಅನುಸಾರ ಯೋಗ ಪ್ರಾಣಾಯಾಮ ಜೊತೆಗೆ ಸರಿಯಾದ ಆಹಾರ ಪಾಲನೆ ಮುಖ್ಯ.