ಹುಬ್ಬಳ್ಳಿ-ಧಾರವಾಡ ಸುದ್ದಿ
ಜೀವದ ಜೀವ, ಭಾವದ ಭಾವ ’ಅಪ್ಪ’

ಜೀವದ ಜೀವ, ಭಾವದ ಭಾವ ’ಅಪ್ಪ’

ನಾವೆಲ್ಲಾ ದಿನಕ್ಕೆ ಒಂದು ಸಾರಿಯಾದರೂ ಕನ್ನಡಿ ನೋಡುತ್ತೇವೆ. ಆಗ ನನ್ನ ಮುಖ ಚಂದ ಇದೆ ಎಂದು ಅಂದುಕೊಳ್ಳುತ್ತೇವೆ. ನಮಗೆ ಯಾವ ಹೀರೋಯಿನ್ ಅಥವಾ ಹೀರೋ ಕಾಣಿಸುವುದಿಲ್ಲ. ನಾನೇ ಸುಂದರ ಎನಿಸಿಬಿಡುತ್ತೇವೆ. ಅಂದರೆ ನನ್ನನ್ನ ಮೀರಿಸುವವರು ಜಗತ್ತಿನಲ್ಲಿ ಯಾರು ಇಲ್ಲ ಎಂದೆನಿಸುವ ಆ ಮನಸ್ಸೇ ನನ್ನ ಬಗ್ಗೆ ನನಗಿರುವ ಗೌರವವನ್ನು ಹೆಚ್ಚಿಸುತ್ತದೆ.

ಹುಟ್ಟುವುದು ದೈವ ನಿರ್ಣಯವಾದರೆ, ಜೀವಿಸುವುದು ನನ್ನ ಪ್ರಯತ್ನದ ಫಲ. ಹಾಗೆ ನಮಗೆ ಈವರೇ ತಂದೆ ತಾಯಿ ಆಗಬೇಕೆಂದು ಬಯಸಿ ಹುಟ್ಟುವುದಿಲ್ಲ. ಆದರೆ ಅದು ನಮಗೆ ಪ್ರಕೃತಿದತ್ತವಾಗಿ ಬರುವಂತಹ ದು. ಆದರೆ ಈ ಜೀವನದಲ್ಲಿ ನನಗೊಬ್ಬ ತಂದೆ, ನನಗೊಬ್ಬ ತಾಯಿ, ನನ್ನ ಜೀವನವನ್ನ ರೂಪಿಸುವ ಶಿಲ್ಪಿಗಳು ಅವರೇ, ನನ್ನ ದೇವರು. ಈ ಒಂದು ಭಾವ ನಮ್ಮ ಭಾರತೀಯ ಸಂಸ್ಕೃತಿಯ ಅತ್ಯಂತ ಹಿರಿದಾಗಿರುವ ಹೆಜ್ಜೆ.

ಹಿಂದೆಲ್ಲ ಒಂದು ಸಂಪ್ರದಾಯವಿತ್ತು. ತಂದೆ ಎಂದರೆ ಭಯ: ತಂದೆ ಎಂದರೆ ಗೌರವ :ತಂದೆ ಎಂದರೆ ಏನೋ ಒಂದು ಅಪರಿಚಿತವಾಗಿರುವ ಭಾವ. ಆದರೆ ಈಗ ಆ ಪರಿಕಲ್ಪನೆ ಬದಲಾವಣೆಯಾಗಿದೆ. ತಂದೆ ಎಂದರೆ ಅವರೊಬ್ಬ ಗೆಳೆಯ, ತಂದೆ ಎಂದರೆ ಅವರೊಬ್ಬ ಮಾರ್ಗದರ್ಶಕ. ತಂದೆ ಎಂದರೆ ಅವನೊಬ್ಬ ಗುರು. ತಂದೆ ಎಂದರೆ ಅವನೇ ನನ್ನ ಜಗತ್ತು. ಮುಖ್ಯವಾಗಿ ಹೆಣ್ಣು ಮಕ್ಕಳಿಗಂತೂ ತಂದೆ ತನ್ನ ಜೀವದ ಜೀವ ಎನ್ನುವ ಮಟ್ಟಿಗೆ ಭಾವ ಬದಲಾಗಿದೆ. ಪ್ರತಿ ವ್ಯಕ್ತಿಯ ಜೀವನದ ಈ busy ಯಾಗಿರುವ ಈ ವೇಳೆಯಲ್ಲಿ ಒಬ್ಬರೇ ಕಾಲ ಕಳೆಯುವುದು ಏಕಾಂತ. ಏಕಾಂತ ಯಾರು ನನ್ನನ್ನು ಸೇರಿಸಿಕೊಳ್ಳಲಿಲ್ಲ ಎಂಬುವ ಆ ಭಾವ ಒಂದು ಕ್ಷಣ ಎಲ್ಲರಿಗೂ ಬಂದೇ ಬರುತ್ತದೆ, ಆ ಒಂದು ಕ್ಷಣದಲ್ಲಿ ನನಗೆ ನೆನಪಾಗುವುದು ನನ್ನ ಮಟ್ಟಿಗೆ ನನ್ನ ತಂದೆ. ನಮ್ಮ ಆರು ಮಕ್ಕಳನ್ನ ಅಗಲಿದ ಐದು ವರ್ಷದ ಈ ಅವಧಿಯೊಳಗೆ ನನ್ನ ತಂದೆ ನನ್ನ ಜೊತೆ ಇರುತ್ತಾರೆಂದರೆ, ಈ ಬರವಣಿಗೆ ಮೂಲಕವೇ ಈ ಬರವಣಿಗೆಯ ಹವ್ಯಾಸ ಕಲಿಸಿದವರು ನನ್ನ ತಂದೆ. ಆ ಬರವಣಿಗೆಯನ್ನ ಮುಂದಕ್ಕೆ ಬೆಳೆಸಿದವರು ನನ್ನ ಮಕ್ಕಳ ತಂದೆ ನನ್ನವರು. ಹೀಗೆ ಪ್ರತಿ ವ್ಯಕ್ತಿಯು ಅವರದೇ ಆಗಿರುವ ಒಂದು ಸಾಧನೆಯಲ್ಲಿ ತಾಯಿಯಷ್ಟೇ ತಂದೆಯೂ ಕೂಡ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ.ನನ್ನತಂದೆ ನನ್ನಗಲಿದರೂ ನನ್ನಬರವಣಿಗೆಯಲ್ಲಿ ಇರುತ್ತಾರೆ ಎಂಬ ಆ ಭಾವ ನನಗೆ ಖುಷಿಯನ್ನು ತಂದು ಕೊಡುತ್ತದೆ. ಪ್ರತಿ ವ್ಯಕ್ತಿಗೂ ಅವರ ತಂದೆ ಒಂದು ರೀತಿಯ ಸ್ಪೂರ್ತಿ ನೀಡುತ್ತಿರುತ್ತಾರೆ. ಅಂತಹ ಒಂದು ದೇವರಿಗೆ ತಂದೆಯ ದಿನದ ನೆನಪಿಗಾಗಿ ಹೃತ್ಪೂರ್ವಕವಾಗಿರುವ ಶುಭಾಶಯಗಳು. Happy Fathers day.

bhagyajyoti

ಡಾ.ಭಾಗ್ಯಜ್ಯೋತಿ ಕೋಟಿಮಠ

 

administrator

Related Articles

Leave a Reply

Your email address will not be published. Required fields are marked *