ಹುಬ್ಬಳ್ಳಿ-ಧಾರವಾಡ ಸುದ್ದಿ
ಅಡುಗೆ ಮನೆ ಕೆಲಸ ಎಂಬ ತಪಸ್ಸು

ಅಡುಗೆ ಮನೆ ಕೆಲಸ ಎಂಬ ತಪಸ್ಸು

ಈ ಸಲ ಮಹಿಳಾ ದಿನಾಚರಣೆಗೆ ಬರೆಯಬೇಕೆಂದು ಕುಳಿತಾಗ ನನ್ನ ಮಕ್ಕಳು ಬಂದು ಇವತ್ತು ಸಾಯಂಕಾಲ ಪಾವ-ಬಾಜಿ ಬೇಕೆಂಬ ಬೇಡಿಕೆ ಮುಂದೆ ಇಟ್ಟರು. ಆಯಿತು ಮಾಡುತ್ತೇನೆ ಎಂದು ಅವರ ಬೇಡಿಕೆಗನುಗುಣವಾಗಿ ಪಾವ ಬಾಜಿ ಮಾಡುವಾಗಲೆ ಅನಿಸಿದ್ದು ಈ ಸಾರಿ ಅಡುಗೆ ಮನೆ ಕೆಲ್ಸಾನೇ ಕೇಂದ್ರಿಕರಿಸಿ ಬರೆಯೋಣ ಎಂದು.
ಅಡುಗೆಮನೆ ಕೆಲ್ಸ ಅಂದ್ರೆ….ಎಂದು ರಾಗ ಎಳೆದು ಅದು ಏನೋ ಒಂದು ಬೇಯ್ಸೋದಷ್ಟೇ ಎಂಬ ಅಭಿಪ್ರಾಯ ಎಲ್ಲರದು.But it’s one type of management,administration and,the beautiful art.


ಒಂದು ಅಡಿಗೆಗೆ ಆ ದಿನ ಎಷ್ಟು ಬೇಳೆ ಹಾಕಬೇಕು,ಯಾವ ಬೇಳೆ ಹಾಕಬೇಕು. ಯಾವ ತರಕಾರಿ ಹಾಕಬೇಕು. ಯಾವ ಸಲಾಡ ಮಾಡಬೇಕು. ರೊಟ್ಟಿನೋ, ಚಪಾತಿನೋ. ಬೆಳಿಗ್ಗೆ ಯಾವ ಣiಜಿಜಿiಟಿ ಉಪ್ಪಿಟ್ಟೋ,ಇಡ್ಲಿ-ಸಾಂಬಾರೋ, ದೋಸೆಯೋ, ಪಡ್ಡೊ ಹಾಗೆ ಸಾಲು ಸಾಲು menu ನೆನಪಾಗುತ್ತವೆ. ಆದರೆ ಮಾಡುವುದು ಒಂದೇ ಅಲ್ಲವೇ ಆದರೆ ಅವತ್ತಿನ tiffin ನಿರ್ಧಾರವು ಒಂದು ಕಲೆ.
ಉಳ್ಳಾಗಡ್ಡಿ, ಕೊತ್ತಂಬರಿ- ಕರಿಬೇವು, ಮೆಣಸಿನಕಾಯಿ, ನಿಂಬೇಹಣ್ಣು, ಶುಂಠಿ ಸೊಪ್ಪು, ಎಲ್ಲ ತರಹದ ಕಾಯಿಪಲ್ಲೆ ಕೆಡದೇ ಇರೋ ಹಾಗೆ ಮ್ಯಾನೇಜ್ ಮಾಡೋ ಕಲೆ ಇರಬೇಕು. ವಾರಕ್ಕೊಮ್ಮೆ ಒಮ್ಮೆಲೇ ತರಕಾರಿ ತಂದಾಗ ಯಾವ್ಯಾವ ತರಕಾರಿ ಎಷ್ಟು ದಿನ ಫ್ರೆಷ್ ಇರುತ್ತೆ, ಯಾವುದು ಬೇಗ ಹಾಳಾಗುತ್ತೆ, ಅನ್ನೋದು ಗೊತ್ತಿರಬೇಕು.ಗೊತ್ತಿದ್ದರಷ್ಟೇ ಅಷ್ಟೇ ಅಲ್ಲ. ದಿನಾ ಒಂದೇ ತರ ಅಡುಗೆ ಮಾಡದೆ ವಿಧ ವಿಧವಾದ ಅಡುಗೆ ರುಚಿ ರುಚಿಯಾಗಿ ತಯಾರಿಸಿ ಅಡುಗೆ ಮನೆ ನಿಭಾಯಿಸೋ ಕಲೆ ಇರಬೇಕು.ಯಾವಯಾವ ದಿನಸಿ, ಎಷ್ಟೆಷ್ಟು ಬೇಕು, ಎಂಬ ಲೆಕ್ಕಾಚಾರ ಗೊತ್ತಿರಬೇಕು. ತಂದ ದಿನಸಿಯನ್ನು ಹಾಳಾಗದಂತೆ ಕಾಪಾಡುವ ಕಲೆ ಗೊತ್ತಿರಬೇಕು.


ಮನೆಯ ಸದಸ್ಯರ ಇಷ್ಟಗಳ ಸರಿಯಾದ ತಿಳಿವಳಿಕೆ ಇರಬೇಕು. ಬೇಯಿಸುವ, ರುಬ್ಬುವ, ಹುರಿಯುವ, ಪುಡಿಮಾಡುವ, ಯಾವ-ಯಾವ ಚಟ್ನಿ ಪುಡಿ ಎಷ್ಟೆಷ್ಟು ಶ್ಯಾಲೋ-ಫ್ರೈ , ಡೀಪ್-ಫ್ರೈ ಮಾಡಬೇಕು, ಕುಕ್ಕರ್ ಕೂಗಿಸಬೇಕು. ಹಬ್ಬಗಳು ಬಂದಾಗ ಯಾವ ಸಿಹಿ ತಿಂಡಿ ಮಾಡಬೇಕು. ಕರಿದ ತಿನಿಸುಗಳನ್ನು ಯಾವಾಗ ಮಾಡಬೇಕು. ಅತಿಥಿಗಳು ಬಂದಾಗ ಅವರ ಇಷ್ಟಕ್ಕನುಸಾರವಾಗಿ,ಗೊತ್ತಿಲ್ಲವಾದರೆ ನಮ್ಮದೇ special ಎನಿಸುವ ಅಡಿಗೆ ಮಾಡುವುದು. ಅಷ್ಟೇ ಅಲ್ಲತೊಳೀಬೇಕು, ಬಳೀಬೇಕು, ಸಾರಿಸಬೇಕು, ಒಪ್ಪಓರಣ ಮಾಡಬೇಕು, ಅಚ್ಚುಕಟ್ಟು ಮಾಡಬೇಕು.


ಬಡಿಸೋಕ್ಕೆ ಗೊತ್ತಿರಬೇಕು. ಮಿಕ್ಕಿದ್ದನ್ನ ಖಾಲಿ ಮಾಡಿ ಬೇರೇದಕ್ಕೆ ಹಾಕಿಡೋ ಸ್ಪೇಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು. ವಿಧವಿಧವಾದ ಕರೆಗಳಿಗೆ ಸ್ಪಂದಿಸುತ್ತಲೇ ಅಂದುಕೊಂಡ ಸಮಯಕ್ಕೆ ಅಚ್ಚುಕಟ್ಟಾಗಿ ಎಲ್ಲಾ ಮಾಡಿಡೋ ಬಹು ಕೆಲಸದ ಕಲೆ ಗೊತ್ತಿರಬೇಕು. ಅಡುಗೆ ಎಂದರೆ ಕೈ ಸುಡುವದು,ಬೆರಳು ಹೆಚ್ಚುವದು,ಸಾಮಾನ್ಯ ಅವನ್ನು ನಿಭಾಯಿಸಿ ಅಡುಗೆ ಮುಂದುವರಿಸುತ್ತಲೇ ಇರಬೇಕು. ಇಷ್ಟೆಲ್ಲಾ ಆದರೆ ಮುಗಿಯಲಿಲ್ಲ, ನಾವು ಮಾಡಿದ ಎಲ್ಲವನ್ನೂ ಪ್ರೀತಿ ಬೆರೆಸಿ ನೀಡುವ ಕಲೆ ಗೊತ್ತರಬೇಕು. ಮಕ್ಕಳು ಅದು ಬೇಡ ,ಇದು ಬೇಡ ಅಂದಾಗ, ಪ್ರೀತಿಯಿಂದ ರಮಿಸಿ ತಿನ್ನಿಸುವ ಕಲೆಯು ಬೇಕು.


ಇವೆಲ್ಲಾ ಯಾವುದೇ ಕೋರ್ಸಿಗೆ ಹೋಗದೇ ತಲೆತಲೆಮಾರುಗಳಿಂದ ಕಲಿತು ಮಾಡ್ತಾ ಬಂದಿರೋ,ಅತ್ಯಂತ ಪ್ರಾಮಾಣಿಕ ಕೆಲಸ. ಅಡುಗೆಮನೆ ಕೆಲ್ಸಾನಾ. ಅದೇನ್ ಮಹಾ ಎನ್ನುವ ಹಾಗಿಲ್ಲ.ಅದು ಎಲ್ಲರ ಅವಶ್ಯಕತೆ. ಅದು ಎಲ್ಲರ ಜೀವನಾಧಾರ. ಅಡುಗೆ ಮನೆ ಕೆಲಸ….ಅದೊಂದು ತಪಸ್ಸು,ಪ್ರೀತಿ,ತಾಳ್ಮೆ,ಕಲೆ, ವಿಜ್ಞಾನ,ಸೇವೆ,ಎಲ್ಲದರ ಸಮ್ಮಿಳಿತ.
ಅಡುಗೆಯನ್ನ ಪುರುಷರು ಮಾಡುತ್ತಾರೆ. ಅದು hotel ಗಳಲ್ಲಿ,  function ಗಳಲ್ಲಿ, ಆದರೆ ಅವರ ಮನೆಯಲ್ಲೂ ಅಡುಗೆ ಮಾಡುವವರು ಮಹಿಳೆಯರೆ.(ಅವರು ಉದ್ಯೋಗಸ್ಥರಿದ್ದರೂ) ಹೀಗಾಗಿ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಅವರೆಲ್ಲರಿಗೊಂದು ಸಲಾಂ.

ಡಾ.ಭಾಗ್ಯಜ್ಯೋತಿ ಕೋಟಿಮಠ

administrator

Related Articles

Leave a Reply

Your email address will not be published. Required fields are marked *