ಹುಬ್ಬಳ್ಳಿ-ಧಾರವಾಡ ಸುದ್ದಿ

ಹೊಸ ವರ್ಷಕ್ಕೊಂದು ಹೊಸ ಪಯಣ

ಹಿಂದೆ ನಡೆದ ಸಂವತ್ಸರಗಳ ಕಹಿ ಸಿಹಿ ಅನುಭವದ ಮೂಟೆಯಿಂದ ನನ್ನದೊಂದಿಷ್ಟು ತಿಳುವಳಿಕೆಯಿಂದ ಈ ವರ್ಷದ ಪಯಣ ಪ್ರಾರಂಭಿಸೋಣ ಎನ್ನುವುದೇ ಪ್ರತಿ ವ್ಯಕ್ತಿಯ ಆಶಯ. ಅದನ್ನೇ ಮಂಕುತಿಮ್ಮ ಕಗ್ಗದಲ್ಲಿ ಡಿವಿಜಿಯವರು ಈ ರೀತಿ ಹೇಳುತ್ತಾರೆ. ’ಪ್ರತಿದಿನವೂ ಹೊಸ ಬೆಳಗು ಹಳೆ ಸೂರ್ಯ,ಹಳೆಚಂದ್ರ,ಹಳೆ ಭೂಮಿ, ಹಳೆ ನೀರು/ಹಳೆ ಹಿಮಾಚಲ, ಗಂಗೆ ಹಳೆ ವಂಶ ಚರಿತೆ/ ಹಳೆಯ ವಿವು ನೀನಿ ದರೊಳಗಾವುದನು ಕಳೆದಿಯೋ/ ಹಳತು ಹೊಸತರರೊಳಿದೆ ಮಂಕುತಿಮ್ಮ’


ಹಾಗಾದರೆ ಹೊಸತನ್ನು ಹುಡುಕುವುದು ಎಂದರೆ ನಮ್ಮನ್ನ ನಾವು ಹುಡುಕಿಕೊಳ್ಳಬೇಕು. ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಹೊಸ ಸಂಕಲ್ಪಗಳನ್ನ ಮಾಡುವುದು ನಮ್ಮ ಆಸೆಗಳನ್ನ ಮತ್ತೊಮ್ಮೆ ಮರು ಮೌಲ್ಯಮಾಪನ ಮಾಡಿಕೊಳ್ಳುವುದು. ನಮ್ಮಲ್ಲಿರುವ ನಕಾರಾತ್ಮಕ ಭಾವನೆಗಳ ಹಿಂದಿನ ಕಾರಣವಾದಂತಹ ದುರಾಸೆ, ದ್ವೇಷ ಅಸೂಯೆಗಳಿಂದ ಮುಕ್ತಿ ಹೊಂದಿ ನಾವು ಪ್ರೀತಿಯನ್ನ ಹರಡೋಣ. ಮನುಷ್ಯರಾದ ನಮಗೆ ವ್ಯಕ್ತಿಯು ಮುಖ್ಯ: ವ್ಯಕ್ತಿತ್ವವು ಮುಖ್ಯ. ಅದು ನಿಜವೂ ಹೌದು ಹೂವಿನ ಬಣ್ಣಕ್ಕಿಂತ ಪರಿಮಳವೇ ಶ್ರೇಷ್ಠ ಹಾಗಾಗಿ ವ್ಯಕ್ತಿಯ ಆತನ ಆಲೋಚನೆಗಳ ವಸ್ತುರೂಪವಾಗಿರುತ್ತದೆ ನಮ್ಮಲ್ಲಿನ ವ್ಯಕ್ತಿತ್ವ ವಿಕಸನಕ್ಕೆ ನಾವೇ ಮೊದಲ ಗುರು. ಅದಕ್ಕೆ ಮುಖ್ಯವಾಗಿ ನನಗೆ ಜೀವನದ ಪ್ರೀತಿ ಅವಶ್ಯ. ಪ್ರೀತಿ ಇರುವಲ್ಲಿ ಪ್ರೀತಿಯೇ ಅರಳಿ ಬೆಳಗುವುದೇ ವಿನ ಬೇರಾವ ಕೊಳೆಯು ಅಲ್ಲಿ ನಿಲ್ಲುವುದಿಲ್ಲ.

ಕೆಲವೊಮ್ಮೆ ಚಿಕ್ಕ ಚಿಕ್ಕ ಘಟನೆಗಳು ಕೂಡ ನಮ್ಮ ಜೀವನದಲ್ಲಿ ಮಹತ್ತನ್ನ ಸಾಧಿಸಲು ಸಹಕಾರಿಯಾಗುತ್ತವೆ ಒಮ್ಮೆ ರೋಮ್ ಅಂದರೆ ಪಕ್ಕದ ರಾಜ್ಯದ ಮೇಲೆ ಅನೇಕ ಬಾರಿ ಯುದ್ಧ ಮಾಡಿದನು. ಆದರೆ ಪ್ರತಿ ಬಾರಿಯೂ ಯುದ್ಧದಲ್ಲಿ ಸೋಲನ್ನೇ ಅನುಭವಿಸಿದ ಕೊನೆಗೆ ರಾಜ ಕಾಡನ್ನ ಸೇರಿ ಒಂದು ಗುಹೆಯೊಳಗೆ ಹೊಕ್ಕ ಅಲ್ಲಿ ಜೇಡರ ಹುಳ ಮತ್ತೆ ಮತ್ತೆ ಹತ್ತಲು ಪ್ರಯತ್ನಿಸುತ್ತಿತ್ತು ಹೀಗೆ ಹತ್ತಾರು ಬಾರಿ ಸಾಧ್ಯವಾಗದಿದ್ದರೂ ಜೇಡರ ಹುಳ ಮತ್ತೆ ಮತ್ತೆ ಪ್ರಯತ್ನವನ್ನು ಮಾಡಿ ಒಮ್ಮೆ ಅದು ಯಶಸ್ವಿಯು ಆಯಿತು. ಅದನ್ನು ಕಂಡ ರಾಜ ಆಶ್ಚರ್ಯ ಚಿಕಿತನಾದ. ಜೇಡರ ಹುಳುವಿನ ಅವಿರತ ಶ್ರಮ ಮತ್ತು ಪ್ರಯತ್ನಗಳಿಂದ ಪ್ರಭಾವಿತನಾದ ರಾಜ ಮತ್ತೆ ತನ್ನ ರಾಜ್ಯಕ್ಕೆ ತೆರಳಿ ಸೈನಿಕರನ್ನೆಲ್ಲ ಒಟ್ಟುಗೂಡಿಸಿ ಅವರನ್ನ ಮತ್ತೆ ಉತ್ಸಾಹಿಸಿ, ಈ ಸಲ ಅವನು ರಾಜ್ಯವನ್ನು ಗೆದ್ದೇಬಿಟ್ಟ. ಯಶಸ್ವಿಯಾದ. ‘ಈಶಾವಾಸ್ಯಂಮಿದಂ ಸರ್ವಂ ಯತ್ಮಿಂಚ ಜಗತ್ಯಾಂ ಜಗತ್’- ಪ್ರತಿಯೊಂದು ವಸ್ತುವಿನಲ್ಲೂ ಪ್ರತಿಯೊಂದು ಜೀವಿಯಲ್ಲೂ ಅದರದೇ ಸ್ಥಾನ ಪ್ರಾಮುಖ್ಯತೆ ಇದ್ದೇ ಇರುತ್ತದೆ.ಅಷ್ಟೇ ಅಲ್ಲ ‘ಇದು ಅಸಾಧ್ಯ’ ಎಂಬುದನ್ನು ‘ಸಾಧ್ಯ’ ಮಾಡುವದೇ ಪ್ರೀತಿ.2023 ನ್ನು ಪ್ರೀತಿಯಿಂದ ಬರಮಾಡಿಕೊಂಡು ಜೀವನ ಬೆಳೆಗಿಸೋಣ.

ಡಾ.ಭಾಗ್ಯಜ್ಯೋತಿ ಕೋಟಿಮಠ, ಮುಖ್ಯಶಿಕ್ಷಕಿ, ಶಿರೂರು, ತಾ.ನವಲಗುಂದ

 

ಡಾ.ಭಾಗ್ಯಜ್ಯೋತಿ ಕೋಟಿಮಠ,

ಮುಖ್ಯಶಿಕ್ಷಕಿ,

ಶಿರೂರು, ತಾ.ನವಲಗುಂದ

 

administrator

Related Articles

Leave a Reply

Your email address will not be published. Required fields are marked *