ಹುಬ್ಬಳ್ಳಿ : ನಾವು ಯಾವುದೇ ಧರ್ಮ ಒಡೆದಿಲ್ಲ. ಶೈಕ್ಷಣಿಕ ವಿಚಾರವಾಗಿ ಪ್ರಯತ್ನ ಮಾಡಿದ್ದೇವು. ಸೈದ್ಧಾಂತಿಕ ವಿಚಾರಗಳು ಎಲ್ಲವೂ ಸರಿಯಿಲ್ಲ. ಈಗ ರಾಜ್ಯದಲ್ಲಿ ಉಪ ಪಂಗಡಗಳು ಬೇರೆ ಬೇರೆಯಾಗುತ್ತಿದೆ. ಹೀಗಾಗಿ ನಾವು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಚುನಾವಣೆ ನಂತರ ಎಲ್ಲ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.

ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಂಭಾಪುರಿ ಶ್ರೀಗಳ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತಾಪ ವಿಚಾರಕ್ಕೆ ಸಂಬಂಧಿಸಿದಂತೆ, ಶ್ರೀಗಳ ನಡುವೆ ಹಾಗೂ ಸಿದ್ದರಾಮಯ್ಯ ಅವರ ನಡುವೆ ಯಾವ ಸಂಭಾಷಣೆ ನಡೆದಿದೆ. ಅವರನ್ನೇ ಕೇಳಬೇಕು. ರಾಜ್ಯದಲ್ಲಿ ಲಿಂಗಾಯತ ಸಮಾಜದ ೯೯ ಉಪಪಂಗಡಗಳಿಗೆ ಸೌಲಬ್ಯ ಸಿಗುತ್ತಿಲ್ಲ. ಲಿಂಗಾಯತ ಉಪಪಂಗಡಗಳಿಗೆ ಶೈಕ್ಷಣಿಕ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಯತ್ನ ಮಾಡಲಾಗಿತ್ತು ಎಂದರು.
ಮೂರುಸಾವಿರಮಠದಲ್ಲಿ ಎಂಬಿಪಿ ಸನ್ಮಾನ
ಹುಬ್ಬಳ್ಳಿ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ. ಪಾಟೀಲ ಅವರು ಇಂದು ಬೆಳಿಗ್ಗೆ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದು ಭಕ್ತಿ ಸಮರ್ಪಿಸಿದರು.
ಜಗದ್ಗುರುಗಳಾದ ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಈ ಸಂದರ್ಭದಲ್ಲಿ ಸನ್ಮಾನಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳಾದ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಕರ್ನಾಟಕ ರಾಜ್ಯ ಘಟಕ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಧಾರವಾಡ ಜಿಲ್ಲಾ ಘಟಕ ಸೇರಿದಂತೆ ವಿವಿಧ ಸಂಘಟನೆಗಳು ಸನ್ಮಾನಿಸಿದವು.
ಶಾಸಕರಾದ ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ್ ಮಾನೆ, ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ, ಮಾಜಿ ಶಾಸಕ ಅಜ್ಜಂ ಪೀರ ಖಾದ್ರಿ, ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಶರಣಪ್ಪ ಕೋಟಗಿ, ಸುರೇಶ್ ಸವಣೂರ ಪ್ರಕಾಶ್ ಗೌಡ ಪಾಟೀಲ್ ಆರ್ ಕೆ ಪಾಟೀಲ್, ಎಂ.ಎಸ್.ಅಕ್ಕಿ, ಅರವಿಂದ ಕಟಗಿ, ಚಂಬಣ್ಣ ಹಾಳದೋಟರ, ಅಲ್ತಾಫ್ ಹಳ್ಳೂರ, ಅನಿಲ್ ಪಾಟಿಲ್, ಕುಮಾರ್ ಕುಂದನಹಳ್ಳಿ, ಸತೀಶ್ ಮೆಹರ್ವಾಡೆ,ರಜತ್ ಉಳ್ಳಾಗಡ್ಡಿ ಮಠ, ಆನಂದ್ ಗಡ್ಡದೇವರ್ಮಠ, ವರುಣ್ ಸಂಕನಗೌಡರ್ ಸೇರಿದಂತೆ ಅನೇಕರಿದ್ದರು.

