ಹುಬ್ಬಳ್ಳಿ-ಧಾರವಾಡ ಸುದ್ದಿ

ಧರ್ಮ ಒಡೆಯುವ ಕೆಲಸ ಮಾಡಿಲ್ಲ

ಹುಬ್ಬಳ್ಳಿ : ನಾವು ಯಾವುದೇ ಧರ್ಮ ಒಡೆದಿಲ್ಲ. ಶೈಕ್ಷಣಿಕ ವಿಚಾರವಾಗಿ ಪ್ರಯತ್ನ ಮಾಡಿದ್ದೇವು. ಸೈದ್ಧಾಂತಿಕ ವಿಚಾರಗಳು ಎಲ್ಲವೂ ಸರಿಯಿಲ್ಲ. ಈಗ ರಾಜ್ಯದಲ್ಲಿ ಉಪ ಪಂಗಡಗಳು ಬೇರೆ ಬೇರೆಯಾಗುತ್ತಿದೆ. ಹೀಗಾಗಿ ನಾವು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಚುನಾವಣೆ ನಂತರ ಎಲ್ಲ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.

ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಉಭಯ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವರಾದ ಸಂತೋಷ ಲಾಡ್, ಆಲ್ಕೋಡ ಹನುಮಂತಪ್ಪ, ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಪಿ.ವಿ.ಮೋಹನ, ದೀಪಕ ಚಿಂಚೋರೆ,ವಿವಿಧ ಬ್ಲಾಕ್ ಅಧ್ಯಕ್ಷರು, ಇಮ್ರಾನ್ ಯಲಿಗಾರ ಇತರರಿದ್ದರು.

ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಂಭಾಪುರಿ ಶ್ರೀಗಳ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತಾಪ ವಿಚಾರಕ್ಕೆ ಸಂಬಂಧಿಸಿದಂತೆ, ಶ್ರೀಗಳ ನಡುವೆ ಹಾಗೂ ಸಿದ್ದರಾಮಯ್ಯ ಅವರ ನಡುವೆ ಯಾವ ಸಂಭಾಷಣೆ ನಡೆದಿದೆ. ಅವರನ್ನೇ ಕೇಳಬೇಕು. ರಾಜ್ಯದಲ್ಲಿ ಲಿಂಗಾಯತ ಸಮಾಜದ ೯೯ ಉಪಪಂಗಡಗಳಿಗೆ ಸೌಲಬ್ಯ ಸಿಗುತ್ತಿಲ್ಲ. ಲಿಂಗಾಯತ ಉಪಪಂಗಡಗಳಿಗೆ ಶೈಕ್ಷಣಿಕ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಯತ್ನ ಮಾಡಲಾಗಿತ್ತು ಎಂದರು.

ಮೂರುಸಾವಿರಮಠದಲ್ಲಿ ಎಂಬಿಪಿ ಸನ್ಮಾನ

ಹುಬ್ಬಳ್ಳಿ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ. ಪಾಟೀಲ ಅವರು ಇಂದು ಬೆಳಿಗ್ಗೆ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದು ಭಕ್ತಿ ಸಮರ್ಪಿಸಿದರು.


ಜಗದ್ಗುರುಗಳಾದ ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಈ ಸಂದರ್ಭದಲ್ಲಿ ಸನ್ಮಾನಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳಾದ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಕರ್ನಾಟಕ ರಾಜ್ಯ ಘಟಕ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಧಾರವಾಡ ಜಿಲ್ಲಾ ಘಟಕ ಸೇರಿದಂತೆ ವಿವಿಧ ಸಂಘಟನೆಗಳು ಸನ್ಮಾನಿಸಿದವು.


ಶಾಸಕರಾದ ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ್ ಮಾನೆ, ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ, ಮಾಜಿ ಶಾಸಕ ಅಜ್ಜಂ ಪೀರ ಖಾದ್ರಿ, ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಶರಣಪ್ಪ ಕೋಟಗಿ, ಸುರೇಶ್ ಸವಣೂರ ಪ್ರಕಾಶ್ ಗೌಡ ಪಾಟೀಲ್ ಆರ್ ಕೆ ಪಾಟೀಲ್, ಎಂ.ಎಸ್.ಅಕ್ಕಿ, ಅರವಿಂದ ಕಟಗಿ, ಚಂಬಣ್ಣ ಹಾಳದೋಟರ, ಅಲ್ತಾಫ್ ಹಳ್ಳೂರ, ಅನಿಲ್ ಪಾಟಿಲ್, ಕುಮಾರ್ ಕುಂದನಹಳ್ಳಿ, ಸತೀಶ್ ಮೆಹರ್‌ವಾಡೆ,ರಜತ್ ಉಳ್ಳಾಗಡ್ಡಿ ಮಠ, ಆನಂದ್ ಗಡ್ಡದೇವರ್‌ಮಠ, ವರುಣ್ ಸಂಕನಗೌಡರ್ ಸೇರಿದಂತೆ ಅನೇಕರಿದ್ದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನವಲಗುಂದ ತಾಲೂಕಿಗೆ ಪ್ರಪ್ರಥಮವಾಗಿ ಆಗಮಿಸಿದ ಎಂಬಿ ಪಾಟೀಲ್ ರವರನ್ನು ನವಲಗುಂದ ನಗರದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತ ಕೋರಲಾಯಿತು. ಮಾಜಿ ಶಾಸಕ ಎನ್‌ಎಚ್ ಕೋನರೆಡ್ಡಿ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬಾಪು ಗೌಡ್ರು ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ. ಗುರುಶಾಂತ್ ಗೌಡ್ರು ದೇಸಾಯಿಗೌಡ ಪಾಟೀಲ್( ಶಲವಡಿ) ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

 

ಇಂಡಿ ಪಂಪ್ ಬಳಿಯ ಹಜರತ್ ಸೈಯದ್ ಫತೇಶಾ ವಲಿ(ರಾ) ದರ್ಗಾಕ್ಕೆ ಇಂದು ಭೇಟಿ ನೀಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರನ್ನು ಮಾಜಿ ಪಾಲಿಕೆ ಹಿರಿಯ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರ ಅವರು ಸನ್ಮಾನಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮುಖಂಡರಾದ ಅನಿಲಕುಮಾರ ಪಾಟೀಲ್, ಅಲ್ತಾಫ್ ಹಳ್ಳೂರು, ಅಜೀಂ ಪೀರಾನ್ ಖಾದ್ರಿ, ಬಶೀರ ಗೂಡಮಾಲ್ ಈ ಸಂದರ್ಭದಲ್ಲಿ ಇದ್ದರು.

 

 

administrator

Related Articles

Leave a Reply

Your email address will not be published. Required fields are marked *