ಹುಬ್ಬಳ್ಳಿ-ಧಾರವಾಡ ಸುದ್ದಿ

‘ರನ್ ಮಶೀನ್’ ಜಾಯ್, ಎಡಗೈ ಸ್ಪಿನ್ನರ್ ವಿಶ್ವೇಶ್ ರಾಜ್ಯ ಕಿರಿಯರ ತಂಡಕ್ಕೆ ಆಯ್ಕೆ

ಹುಬ್ಬಳ್ಳಿ: ಹದಿನಾಲ್ಕು ವರ್ಷದ ವಯೋಮಿತಿಯ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ ಟೀಮ್ ಇಂಡಿಯಾದ ನಾಯಕ ರೋಹಿತ ಶರ್ಮಾ ಪ್ರಾಯೋಜಕತ್ವದ ನಗರದ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯ ಜಾಯ್ ಜೇಮ್ಸ್ ಸುಳ್ಳದ ಹಾಗೂ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್‌ನ ಎಡಗೈ ಸ್ಪಿನ್ನರ್ ವಿಶ್ವೇಶ್ ಅಳಗುಂಡಗಿ 14 ವಯೋಮಿತಿಯ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.


ಗೋವಾದಲ್ಲಿ ಜ.23ರಿಂದ ಫೆ.೪ರವರೆಗೆ ನಡೆಯಲಿರುವ 14 ವಯೋಮಿತಿಯ ದಕ್ಷಿಣ ವಲಯ ಮಟ್ಟದ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯ್ಕೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.
ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಒದುತ್ತಿರುವ ಮಾಡುತ್ತಿರುವ ಜಾಯ್, ಎಡಗೈಯ ಬ್ಯಾಟಮನ್ ಮತ್ತು ವಿಕೇಟ್ ಕೀಪರ್ ಆಗಿ ಎಳೆಯ ವಯಸ್ಸಿನಲ್ಲೆ ತನ್ನದೇ ಆದ ಛಾಪು ಮೂಡಿಸಿದ್ದಾರೆ.


ಕೆಎಸ್ ಸಿಎ ನಡೆಸಿದ 14 ವರ್ಷ ವಯೋಮಿತಿಯ ಲೀಗ್‌ನಲ್ಲಿ ಜಾಯ್,555 ರನ್ ಗಳನ್ನು ಗಳಿಸುವ ಮೂಲಕ ರನ್ ಮಶೀನ್ ಎಂದೂ ಖ್ಯಾತಿಗೊಂಡಿದ್ದಾನೆ.ಬೆಂಗಳೂರಿನಲ್ಲಿ ನಡೆದ ಅಂತರವಲಯ ಪಂದ್ಯಾವಳಿಯ ಒಟ್ಟು 4 ಪಂದ್ಯಗಳಲ್ಲಿ 457 ರನ್ ಗಳನ್ನು ಕಲೆ ಹಾಕಿದ್ದರೆ ಈ ಪೈಕಿ 3 ಶತಗಳನ್ನು ಬಾರಿಸಿದ್ದು ವಿಶೇಷ. ಈತನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದೇ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ. ಫೆ.4 ರಿಂದ ಗೋವಾದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಈತ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.


ಬೆಂಗಳೂರಿನಲ್ಲಿ ಈಚೆಗೆ ನಡೆದ ಅಂತರ್ ವಲಯ ಕ್ರಿಕೆಟ್ ಪಂದ್ಯಾವಳಿಯ 4ಪಂದ್ಯಗಳಲ್ಲಿ ವಿಶ್ವೇಶ್ 17ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇವರು ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್.ಸಾಕ್ರೆ ಸಿಬಿಎಸ್‌ಇ ಶಾಲೆಯಲ್ಲಿ ೮ನೇ ತರಗತಿ ಓದುತ್ತಿದ್ದಾರೆ. ಇವರಿಗೆ ಅಕಾಡೆಮಿಯ ಕೋಚ್ ಜೈರಾಜ್ ನೂಲ್ವಿ ತರಬೇತಿ ನೀಡಿದ್ದಾರೆ.

ಕಠಿಣ ಪರಿಶ್ರಮದಿಂದ ಸಾಧನೆ

ಅಕಾಡೆಮಿಗೆ ನಾಲ್ಕು ವರ್ಷಗಳ ಹಿಂದೆ ಪ್ರ್ಯಾಕ್ಟೀಸ್ ಗೆ ಸೇರಿಕೊಂಡ ಜಾಯ್, ಕಠಿಣ ಪರಿಶ್ರಮ ಹಾಗೂ ನುರಿತ ಕೋಚ್ ಗಳ ರ್ಮರ್ಗದರ್ಶನದಲ್ಲಿ ನಿತ್ಯ ೫ ಗಂಟೆ ಮೈದಾನದಲ್ಲಿ ಬೆವರಿಳಿಸುವ ಮೂಲಕ ಇಂದು ಅಪರೂಪದ ಸಾಧನೆ ಮಾಡಿದ್ದು, ಅಲ್ಲದೇ ತಾವು ನೀಡಿದ ಸಹಕಾರ ಆತ ಸಾರ್ಥಕಪಡಿಸಿಕೊಂಡಿದ್ದು ನಿಜಕ್ಕೂ ಸಂತಸ ಮೂಡಿಸಿದೆ. ರಾಷ್ಟ್ರದ ತಂಡವನ್ನೂ ಆತ ಪ್ರತಿನಿಧಿಸುವಂತಾಗಲಿ


ವಿರೇಶ ಉಂಡಿ, ಸಂಸ್ಥಾಪಕರು,
ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ

ರಾಜ್ಯ ಮಟ್ಟದ ಕ್ರಿಕೆಟ್ ಜಾಯ್ ಆಯ್ಕೆಯಾಗಿದ್ದು, ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಮಾತ್ರವಲ್ಲದೇ ಸಮಸ್ತ ಮಹಾನಗರದ ಜನತೆಗೂ ಸಂತಸತಂದಿದೆ. ಇದಕ್ಕೆ ಸಹಕರಿಸಿದಸಂಸ್ಥೆಯ ಸಂಸ್ಥಾಪಕರು ಹಾಗೂ ಕೋಚ್ ಗಳಿಗೆ ಹಾರ್ದಿಕ ಅಭಿನಂದನೆಗಳು.

ಜ್ಯೋತಿ ಯರ್ಲಗಟ್ಟಿ ಸಂಯೋಜಕಿ,
ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ

14ರ ಪ್ರಾಯದಲ್ಲಿ ಶತಕ ಹೊಡೆಯುವುದು ಸಾಮಾನ್ಯ ಮಾತಲ್ಲ. ಜಾಯ್ ಸತತ ೩ ಶತಗಳನ್ನು ಬಾರಿಸಿದ್ದು ಅದ್ಭುತ. ಭವಿಷ್ಯದಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಲಿ


-ವೀರಣ್ಣ ಸವಡಿ,
ಕೆಎಸ್ ಸಿಎ ಧಾರವಾಡ ವಲಯ ಅಧ್ಯಕ್ಷ

 

administrator

Related Articles

Leave a Reply

Your email address will not be published. Required fields are marked *