ಹುಬ್ಬಳ್ಳಿ-ಧಾರವಾಡ ಸುದ್ದಿ
ರಾಮನಗರದ ಮನೆ ಮನೆಗೂ ಕೌತಾಳ ಕಿಟ್

ರಾಮನಗರದ ಮನೆ ಮನೆಗೂ ಕೌತಾಳ ಕಿಟ್

ಹುಬ್ಬಳ್ಳಿ: ಕೊರೋನಾ ಮಹಾಮಾರಿಯಿಂದ ಲಾಕ್‍ಡೌನ್ ಜಾರಿಯಲ್ಲಿದ್ದು, ಬಡವರ ಬದುಕು ದುಸ್ತರವಾಗಿರುವುದನ್ನು ಮನಗಂಡು ರಾಮನಗರ ಮತ್ತು ಜನತಾ ಕಾಲನಿ ಪ್ರದೇಶದಲ್ಲಿ ಬಿಜೆಪಿ ಯುವ ಮುಖಂಡ ಮಹೇಂದ್ರ ಕೌತಾಳ ಸುಮಾರು 1400 ಆಹಾರ ಧಾನ್ಯಗಳ ಕಿಟ್‍ನ್ನು ಮನೆ ಮನೆಗೆ ತಲುಪಿಸಲು ಮುಂದಾಗಿದ್ದಾರೆ.
ಸಿದ್ದಪಡಿಸಿರುವ ಪ್ರತಿ ಕಿಟ್‍ನಲ್ಲಿ 5ಕೆಜಿ ಅಕ್ಕಿ, 1ಕೆಜಿ ಜೋಳ, 1ಕೆಜಿ ಸಕ್ಕರಿ, 1 ಕೆಜಿ ರವಾ, 1 ಕೆಜಿ ಅವಲಕ್ಕಿ, ಅರ್ಧ ಕೆಜಿ ಎಣ್ಣಿ, ಅರ್ಧ ಕೆಜಿ ತೊಗರಿ ಬ್ಯಾಳಿ, 100 ಗ್ರಾಂ. ಅರಿಷಣಪುಡಿ, ಜಿರಗಿ, ಸಾಸಿವೆ ಮುಂತಾದವುಗಳಿದ್ದು,
ಅನೇಕ ಕುಟುಂಬಗಳು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವುದನ್ನು ಮನಗಂಡು ಕಿಟ್ ವಿತರಿಸಿ ಅವರಿಗೆ ನೆರವು ಮಾಡುವ ಯತ್ನ ಮಾಡಿದ್ದಾರೆ.
ಕಷ್ಟ ಕಾಲದಲ್ಲಿ ನೆರವಿಗೆ ಧಾವಿಸಿರುವ ಕೌತಾಳರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

administrator

Related Articles

Leave a Reply

Your email address will not be published. Required fields are marked *