ಹುಬ್ಬಳ್ಳಿ: ಮಂಡಿ ನೋವಿನಿಂದ ಬಲಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಳಗಾವಿಯ ಅಧಿವೇಶನದ ವೇಳೆ ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ ಟೆಕಲ್ ಎಂಬುವವರು ಚಿಕಿತ್ಸೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಮಂಡಿ ನೋವಿನ ಚಿಕಿತ್ಸೆಗಾಗಿ ಅಮೆರಿಕೆಗೆ ತೆರಳುತ್ತಿದ್ದಾರೆಂಬ ಗುಸು ಗುಸು ಮಧ್ಯೆಯೇ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದ ಟೇಕಲ್ ಎಂಬುವವರನ್ನು ಸಂಪರ್ಕಿಸಿ ಮಂಡಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಬ್ಲಾಕ್ ಫಂಗಸಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದು, ಈ ವಿಷಯವನ್ನು ಲಕ್ಷಣ ಸವದಿ ಮೊನ್ನೆ ಮೆಲ್ಮನೆಯಲ್ಲಿ ಪ್ರಸ್ತಾಪಿಸಿದ್ದಾರೆ.
ನಾಟಿ ವೈದ್ಯ ಲೋಕೇಶ ಈಗಾಗಲೇ ಕ್ಯಾನ್ಸರ್, ಬ್ಲಾಕ್ ಫಂಗಸ, ಕೊರೋನಾ ಸೇರಿದಂತೆ ವಿವಿಧ ಖಾಯಿಲೆಗಳಿಗೆ ವನಸ್ಪತಿ ಔಷಧ ನೀಡಿ ಯಶಸ್ವಿಯಾಗಿದ್ದಾರೆ. ಸಧ್ಯ ಮುಖ್ಯಮಂತ್ರಿಗಳು ಮಂಡಿ ನೋವಿನಿಂದ ಗುಣಮುಖರಾಗುತ್ತಿದ್ದು, ಅವರಿಗೆ ದಿನಕ್ಕೆ ಎರಡು ಬಾರಿ ಔಷಧದ ಜೊತೆಗೆ ಮೇಕೆ ಹಾಲು ಕುಡಿಯುವಂತೆ ಬೊಮ್ಮಯಿಯವರಿಗೆ ನಾಟಿ ವೈದ್ಯ ಸಲಹೆ ನೀಡಿದ್ದಾರೆ.
ಮೇಕೆ ಹಾಲಿನಲ್ಲಿ ವಿಟಮಿನ್ ಡಿ ಕೂಡಾ ಇರುವುದರಿಂದ ಅದು ಮೂಳೆಗಳು ಕ್ಯಾಲ್ಶಿಯಂ ಸೆಳೆದುಕೊಳ್ಳಲು ಸಹಾಯ ಮಾಡುತ್ತದೆ. ಆರ್ತ್ರೈಟಿಸ್ ಹೊಂದಿರುವ ರೋಗಿಗಳಲ್ಲಿ ಆಸ್ಟಿಯೋಪೋರೋಸಿಸ್ ತಡೆಯುವಲ್ಲಿ ಮೇಕೆ ಹಾಲು ಸಶಕ್ತವಾಗಿದೆ ಎನ್ನಲಾಗಿದೆ.
ಸ್ವತಃ ಸವದಿ ಚರ್ಮ ರೋಗದಿಂದ ಗುಣಮುಖರಾಗಿದ್ದು, ಅವರೇ ಮುಂದಾಗಿ ಮುಖ್ಯಮಂತ್ರಿಗಳಿಗೆ ನಾಟಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದು, ಬ್ಲಾಕ್ ಫಂಗಸನಿಂದಾಗಿ ಸಾವಿನ ಕದ ತಟ್ಟಿದ್ದ ಆನಂದ ಕುಲಾಲಿ ಎಂದಿನಂತೆ ಓಡಾಡುತ್ತಿದ್ದಾರೆ ಎಂದು ಡಾ. ಲೋಕೇಶ ಸಂಜೆ ದರ್ಪಣಕ್ಕೆ ತಿಳಿಸಿದರು.