ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;                   ಸಾಂದ್ರವಾಗಿ ಹರಗಣಭಕ್ತಿ

ವಚನ ಬೆಳಕು; ಸಾಂದ್ರವಾಗಿ ಹರಗಣಭಕ್ತಿ

ಸಾಂದ್ರವಾಗಿ ಹರಗಣಭಕ್ತಿ

ಸಾಂದ್ರವಾಗಿ ಹರಗಣಭಕ್ತಿಯ ಮಾಳ್ಪನೆಂತೊ
ಮಾದಲಾಂಬಿಕಾನಂದನನು?
ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ
ಮಾದರಸನ ಮೋಹದ ಮಗನು?
ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ
ಗಂಗಾಪ್ರಿಯ ಕೂಡಲಸಂಗನ ಶರಣ ಚೆನ್ನ?
-ಗಂಗಾಂಬಿಕೆ

ಬಸವಣ್ಣನವರ ಹಿರಿಯ ಸತಿ ಗಂಗಾಂಬಿಕೆಯ ಈ ವಚನ ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯದ ಔನ್ನತ್ಯವನ್ನು ಅರಿತುಕೊಳ್ಳುವಲ್ಲಿ
ಬಹು ಮುಖ್ಯವಾಗಿದೆ. ಬಸವಣ್ಣನವರ ತಾಯಿ ಮಾದಲಾಂಬಿಕೆ; ತಂದೆ
ಮಾದರಸ. ಬಸವಣ್ಣನವರು ಉತ್ಕಟ ದಾಸೋಹಂ ಭಾವದಿಂದ ಶಿವಶರಣರ ಸೇವೆಯನ್ನು ಮಾಡುತ್ತಿದ್ದರು. ಪ್ರಧಾನಿಯಾಗಿ ಬಿಜ್ಜಳನ
ಅರಮನೆಯಲ್ಲಿ ನ್ಯಾಯನಿಷ್ಠುರತೆಯಿಂದ ಮತ್ತು ಉತ್ಕಟ ಕಾರ್ಯತತ್ಪರತೆ
ಯಿಂದ ಸೇವೆ ಸಲ್ಲಿಸುತ್ತಿದ್ದರು. ಉತ್ಕಟ ಭಕ್ತಿಭಾವದಿಂದ ಲಿಂಗಾರ್ಚನೆ ಮಾಡುತ್ತಿದ್ದರು. ಅತ್ಯುನ್ನತವಾದ ಲಿಂಗಾಂಗಸಾಮರಸ್ಯದ ಆನಂದವನ್ನು ಅನುಭಾವಿಸುತ್ತಿದ್ದರು.
ಬಸವಣ್ಣನವರು ಇದನ್ನೆಲ್ಲ ಏಕಕಾಲಕ್ಕೆ ಅದುಹೇಗೆ ಸಾಧಿಸುತ್ತಾರೆ ಎಂದು ಸತಿಯದ ಗಂಗಾಂಬಿಕೆ ಆಶ್ಚರ್ಯಾನಂದವನ್ನು ವ್ಯಕ್ತಪಡಿಸು
ತ್ತಿದ್ದಾಳೆ. ಅಲ್ಲಮಪ್ರಭುಗಳು ಬಸವಣ್ಣನವರಿಗೆ ‘ಯುಗದ ಉತ್ಸಾಹ’ ಎಂದು ಕರೆದಿದ್ದಾರೆ. ತಮಗೆ ಆಯಾಸವಿಲ್ಲ ಎಂದು ಬಸವಣ್ಣನವರು ತಿಳಿಸಿದ್ದಾರೆ. ತಮ್ಮನ್ನು ಲೋಕಕ್ಕೆ ಅರ್ಪಿಸಿಕೊಂಡವರು ಹೇಗೆ ಇರುತ್ತಾರೆ ಎಂಬುದಕ್ಕೆ ಬಸವಣ್ಣನವರು ಬಹುದೊಡ್ಡ ಉದಾಹರಣೆಯಾಗಿದ್ದಾರೆ. ಬಸವಣ್ಣನವರು ಕರ್ತವ್ಯ ಪ್ರಜ್ಞೆಯೊಂದಿಗೆ ಪ್ರಫುಲ್ಲವಾದ ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ಮತ್ತು ಆತ್ಮಿಕ ಆನಂದವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದವರಾಗಿದ್ದರು ಎಂಬುದಕ್ಕೆ ಮೇಲಿನ ವಚನ ಸಾಕ್ಷಿಯಾಗಿದೆ. ಬಸವಣ್ಣನವರು ಬಿಜ್ಜಳನ ಪ್ರಧಾನಿಯಾಗಿ ರಾಜ್ಯಭಾರದ ಹೊಣೆಯನ್ನು ಹೊತ್ತುಕೊಂಡು ನ್ಯಾಯನಿಷ್ಠೆಯಿಂದ ಕರ್ತವ್ಯ ನಿಭಾಯಿಸಿದರು. ‘ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ’ ಎಂದು ಜನ ಉದ್ಗಾರ ತೆಗೆಯುವ ಹಾಗೆ ಆರ್ಥಿಕ ವ್ಯವಸ್ಥೆಯನ್ನು ಸುಬಧ್ರಗೊಳಿಸಿದರು.
ಬಿಜ್ಜಳನ ಸಮಾಜ ವ್ಯವಸೆ, ವರ್ಣ ಮತ್ತು ಜಾತಿಗಳಿಂದ ಕೂಡಿದ
ವ್ಯವಸ್ಥೆ ಆಗಿತ್ತು. ‘ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾ
ಸೋಹಕ್ಕೆಂದು’ ಎಂದು ಹೇಳುವ ಬಸವಣ್ಣನವರು ಸಮಾಜಸೇವೆಯ ಉದ್ದೇಶದಿಂದಲೇ ಪ್ರಧಾನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಮ್ಮದೆಲ್ಲ
ವನ್ನೂ ಶರಣಸಂಕುಲಕ್ಕಾಗಿಯೇ ಅರ್ಪಿಸಿದ್ದರು. ವರ್ಗ, ವರ್ಣ, ಜಾತಿ
ಮತ್ತು ಲಿಂಗಭೇದಗಳಿಲ್ಲದ ಅನುಪಮವಾದ ಶರಣಸಂಕುಲವು ಲೋಕಕ್ಕೇ ಮಾದರಿಯಾದ ನವಮಾನವರ ಸಮಾಜವಾಗಿತ್ತು. ಕಲ್ಯಾಣ
ರಾಜ್ಯದ ಪ್ರಧಾನಿ ಬಸವಣ್ಣನವರು ಈ ನವಸಮಾಜದ ನೇತಾರರೂ ಆಗಿದ್ದರು. ಹೀಗೆ ಹಳೆಯ ಸಾಮಾಜಿಕ ವ್ಯವಸ್ಥೆಯಲ್ಲಿ ಸೇವೆಸಲ್ಲಿಸುತ್ತ ಹೊಸ ಸಮಜ ವ್ಯವಸ್ಥೆಗಾಗಿ ತನುಮನಧನಗಳನ್ನು ಅರ್ಪಿಸುತ್ತಿದ್ದರು. ‘ಕಳ್ಳನಾಣ್ಯ ಸಲುಗೆಗೆ ಸಲ್ಲದು’ ಎಂದು ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸುವುದರ ಜೊತೆಗೇ ಹೊಸ ಸಮಾಜ ನಿರ್ಮಿಸುವ ಬಸವಣ್ಣನವರ ವ್ಯಕ್ತಿತ್ವ ಅತ್ಯುನ್ನತವಾಗಿದೆ. ಏಕೆಂದರೆ ಪ್ರಧಾನಿಯೊಬ್ಬ ಇಷ್ಟು ಸಮರ್ಪಕವಾಗಿ ಹಳೆಯ ವ್ಯವಸ್ಥೆಯನ್ನು ನಿಭಾಯಿಸುತ್ತ ಹೊಸ ವ್ಯವಸ್ಥೆಯನ್ನು ರೂಪಿಸಿದ ಉದಾಹರಣೆ ಇನ್ನೊಂದಿಲ್ಲ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *