ಹುಬ್ಬಳ್ಳಿ-ಧಾರವಾಡ ಸುದ್ದಿ
ಪವರ್‌ಪುಲ್ ಪಿಡಬ್ಲ್ಯುಡಿಗೆ ಪ್ರಹ್ಲಾದ ಕೃಪೆ! ನೆಗೆಟಿವ್ ಹೇಳಿದ್ದೇ ಪಾಸಿಟಿವ್ ಆಯ್ತು

ಪವರ್‌ಪುಲ್ ಪಿಡಬ್ಲ್ಯುಡಿಗೆ ಪ್ರಹ್ಲಾದ ಕೃಪೆ! ನೆಗೆಟಿವ್ ಹೇಳಿದ್ದೇ ಪಾಸಿಟಿವ್ ಆಯ್ತು

ಹುಬ್ಬಳ್ಳಿ: ಯಡಿಯೂರಪ್ಪ ಸಂಪುಟದಿ0ದ ಹೊರ ಹೋಗುವವರ ಪಟ್ಟಿಯಲ್ಲಿದ್ದ ಮೊದಲಿಂದಲೂ ಕೇಳಿ ಬರುತ್ತಿದ್ದ ನರಗುಂದ ಶಾಸಕ ಸಿ.ಸಿ. ಪಾಟೀಲರಿಗೆ ಬೊಮ್ಮಾಯಿ ಮಂತ್ರಿ ಮಂಡಳದಲ್ಲಿ ಜಾಕ್‌ಪಾಟ್ ಹೊಡೆಯಿತಲ್ಲದೇ ಪವರಪುಲ್ ಪಿಡಬ್ಲ್ಯುಡಿ (ಲೋಕೊಪಯೋಗಿ) ಖಾತೆ ಲೆಕ್ಕಾಚಾರದಲ್ಲಿ ಪ್ರಹ್ಲಾದ ಕೃಪೆಯಾಗಿದೆ ಎನ್ನಲಾಗುತ್ತಿದೆ.
ಬಿಎಸ್‌ವೈ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ಸಚಿವರಾಗಿದ್ದ ಸಿ.ಸಿ. ಪಾಟೀಲರಿಗೆ ಅದೇ ಖಾತೆ ಮುಂದುವರಿಯುವ ಲೆಕ್ಕಾಚಾರ ನಡೆದಿತ್ತಲ್ಲದೇ ಪ್ರಭಲ ಲೋಕೋಪಯೋಗಿ ಇಲಾಖೆಗಾಗಿ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಅಲ್ಲದೇ ಆರ್. ಅಶೋಕ ಮುಂತಾದವರ ಹೆಸರು ಕೇಳಿ ಬಂದಿತ್ತು.
ಬೊಮ್ಮಾಯಿ ಸಂಪುಟದ ಖಾತೆಗಳ ಪಟ್ಟಿ ಪ್ರಕಟಿಸಿದಾಗ ಸಿ.ಸಿ. ಪಾಟೀಲರಿಗೆ ಪಿಡಬ್ಲ್ಯುಡಿ ಇಲಾಖೆ ದಕ್ಕಿತ್ತು. ಈ ಮಹತ್ವದ ಖಾತೆ ದೊರೆಯುವ ಹಿಂದೆ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಎರಡು ಸಾರಿ ಸಚಿವರಾಗಿ ಅನುಭವವಿರುವ ಸಿ.ಸಿ. ಪಾಟೀಲರು ಖಾತೆಯನ್ನು ದಕ್ಷ ಬಲ್ಲವರಾದರೂ ಫಲವತ್ತಾದ ಪಿಡಬ್ಲ್ಯುಡಿ ಮೇಲೆ ಅನೇಕ ಘಟಾನುಘಟಿಗಳ ಕಣ್ಣಿದ್ದರೂ ಮೋದಿ-ಶಾ ಎಡ ಬಲದಲ್ಲೇ ಕಾಣಿಸಿಕೊಳ್ಳುವ ಜೋಶಿಯವರು ಯಶ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿದ ಸಿ.ಸಿ. ಪಾಟೀಲ ದಿಲ್ಲಿಗೂ ತೆರಳಿ ಕೃತಜ್ಞತೆ ಹೇಳಿದ್ದಾರೆ. ಬಹುಸಂಖ್ಯಾತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಸಿ.ಸಿ. ಪಾಟೀಲರಿಗೆ ಸಮಾಜದ ಮೇಲೆಯೂ ಹಿಡಿತವಿದ್ದು, ಮೀಸಲಾತಿ ಕೂಗಿನ ಕುರಿತು ಸಕಾರಾತ್ಮಕವಾಗಿ ಅವರು ಸ್ಪಂದಿಸುವುದಾಗಿ ಹೇಳಿದ್ದಾರೆ.

ನೆಗೆಟಿವ್ ಹೇಳಿದ್ದೇ ಪಾಸಿಟಿವ್ ಆಯ್ತು

ಗದಗ: ಮಾಧ್ಯಮದವರು ಎರಡು ವರ್ಷಗಳಿಂದ ಸಿ.ಸಿ.ಪಾಟೀಲರನ್ನ ಕೈ ಬಿಡ್ತಾರೆ ಎಂದು ನೆಗೆಟಿವ್ ಆಗಿ ಹೇಳುತ್ತಿದ್ದೀರಿ, ನೀವು ನೆಗೆಟಿವ್ ಆಗಿ ಹೇಳಿದಷ್ಟು ನನಗೆ ರಾಜಕೀಯದಲ್ಲಿ ಪಾಸಿಟಿವ್ ಆಗಿದೆ ಎಂದು ಲೋಕೋಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಹೊಸ ಖಾತೆಯೊಂದಿಗೆ ಆಗಮಿಸಿದ ಅವರು ಮಾತನಾಡಿ, ನನ್ನ ಹಾಗೂ ಸಿ.ಎಂ.ಬಸವರಾಜ ಬೊಮ್ಮಾಯಿ ಅವರ ಸ್ನೇಹ ಇವತ್ತಿನದಲ್ಲ
ಆ ಸ್ನೇಹದ ಗುಟ್ಟು ನನಗೆ ಹಾಗೂ ನನ್ನ ಪಕ್ಷದ ವರಿಷ್ಟರಿಗೆ ಮಾತ್ರ ಗೊತ್ತು
ಆ ಸ್ನೇಹದ ಗುಟ್ಟು ಬಿಟ್ಟುಕೊಟ್ಟಲ್ಲಿ ಅದನ್ನೂ ಮಾಧ್ಯಮದವರು ರಟ್ಟು ಮಾಡುತ್ತೀರಿ ಎಂದರು.

administrator

Related Articles

Leave a Reply

Your email address will not be published. Required fields are marked *