ಹುಬ್ಬಳ್ಳಿ-ಧಾರವಾಡ ಸುದ್ದಿ
ವಾಲ್ವಮನ್ ಆಗಿ ಕಾರ್ಯ ನಿರ್ವಹಿಸಿದ ಕಾಪೋರೇಟರ್!

ವಾಲ್ವಮನ್ ಆಗಿ ಕಾರ್ಯ ನಿರ್ವಹಿಸಿದ ಕಾಪೋರೇಟರ್!

ಪಕ್ಷೇತರ ಸದಸ್ಯನ ಮಾದರಿ ಕೆಲಸ

ಹುಬ್ಬಳ್ಳಿ: ಮಹಾನಗರಪಾಲಿಕೆ ಮತ್ತು ಜಲಮಂಡಳಿ ಗುತ್ತಿಗೆ ನೌಕರರ ನಡುವಣ ಸಂಘರ್ಷದ ಪರಿಣಾಮ ನೀರಿನ ಸಮಸ್ಯೆ ಕಳೆದ ೮-೧೦ ದಿನಗಳಿಂದ ಉಲ್ಬಣಗೊಂಡಿದ್ದು ಅನೇಕ ಮಹಾನಗರ ಪಾಲಿಕೆ ಸದಸ್ಯರಂತೂ ಪಡಬಾರದ ಕಷ್ಟ ಅನುಭವಿಸಿದರು. ಬಹುತೇಕ ವಾರ್ಡಗಳಲ್ಲಿ ಜನ ನೀರಿಗಾಗಿ ಪರದಾಡುವಂತಾಯಿತು. ಒಂದೆಡೆ ಬಿಸಿಲಿನ ಜಳ, ಇನ್ನೊಂದೆಡೆ ಬಸವಜಯಂತಿ, ಇನ್ನೊಂದೆಡೆ ರಂಜಾನ್ ಹಬ್ಬದ ಹೊಸ್ತಿಲಲ್ಲಿ ಜನತೆ ಹಿಡಿ ಶಾಪ ಹಾಕುವಂತಾಯಿತು. ಹೀಗಿರುವಾಗ ಪಾಲಿಕೆಯ ನೂತನ ಆಯುಕ್ತರಾಗಿರುವ ಡಾ.ಗೋಪಾಲಕೃಷ್ಣ ಅವರು ಬಹುತೇಕ ಎಲ್ಲ ಪಾಲಿಕೆ ಸದಸ್ಯರ ಬೇಡಿಕೆಗೆ ಸ್ಪಂದಿಸಿ ’ಇಲ್ಲ’ವೆನ್ನುವ ಮಾತನಾಡದೇ ಸಾಧ್ಯವಾದಷ್ಟು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಗೆ ಸ್ಪಂದಿಸಿ ತಾವು ಹಿಂದಿನ ಡಾ. ಸುರೇಶ ಇಟ್ನಾಳರಂತೆ ಜನ ಸ್ನೇಹಿ ಎಂಬುದನ್ನು ನಿರೂಪಿಸಿದರು.
ಹೊಸದಾಗಿ ಆಯ್ಕೆಯಾದ ಅನೇಕ ಕಾರ್ಪೋರೇಟರ್‌ಗಳಂತೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ವಾಲ್ವಮನ್‌ಗಳು ಕೆಲಸ ಸ್ಥಗಿತಗೊಳಿಸಿದುದು ಅಕ್ಷರಶಃ ದೊಡ್ಡ ತಲೆ ನೋವಾಗಿ ಪರಿಣಮಿಸಿತು.ಪ್ರಸಕ್ತ ಸಂದರ್ಭದಲ್ಲಿ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ೪೮ನೇ ವಾರ್ಡಿನ ಪಕ್ಷೇತರ ಸದಸ್ಯ ಕಿಶನ್ ಬೆಳಗಾವಿ ಕಾರ್ಯವೈಖರಿ ವಾರ್ಡಿನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ನಾಲ್ಕೈದು ದಿನದಿಂದ ಹಗಲಿರುಳೆನ್ನದೆ ಶ್ರಮಿಸಿ ತಾವೇ ವಾರ್ಡ್‌ನ ವಾಲ್ವ್‌ಗಳನ್ನು ಪತ್ತೆ ಹಚ್ಚಿ ವಾಲ್ವಮನ್ ಕೆಲಸವನ್ನು ತಾವೇ ಮಾಡಿ ಜನತೆಗೆ ನೀರಿನ ಕೊರತೆಯಾದಂತೆ ಪ್ರಾಮಾಣಿಕವಾಗಿ ಶ್ರಮಿಸಿ ಸೈ ಎನಿಸಿಕೊಂಡಿದ್ದಾರೆ. ಇದೇ ರೀತಿ ೫೩ನೇ ವಾರ್ಡಿನ ಪಾಲಿಕೆ ಸದಸ್ಯ ಆರೀಫ್ ಭದ್ರಾಪುರ ಸಹಿತ ಹಲವರು ನೀರಿನ ಹಾಹಾಕಾರಕ್ಕೆ ಸ್ಪಂದಿಸಿ ತಮ್ಮ ನೈಜ ಸಾಮಾಜಿಕ ಕಳಕಳಿಯನ್ನು ತೋರಿಸಿದ್ದಾರೆ.
ಕೊನೆಗೂ ನಿನ್ನೆ ಸಾಯಂಕಾಲ ಜಿಲ್ಲಾಡಳಿತ ಜಲಮಂಡಳಿ ಗುತ್ತಿಗೆ ಸಿಬ್ಬಂದಿಯ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗಿದ್ದು ಅನೇಕ ಪಾಲಿಕೆ ಸದಸ್ಯರು ಸಣ್ಣ ನಿಟ್ಟುಸಿರು ಬಿಟ್ಟಿದ್ದಾರೆ,

administrator

Related Articles

Leave a Reply

Your email address will not be published. Required fields are marked *