ಹುಬ್ಬಳ್ಳಿ-ಧಾರವಾಡ ಸುದ್ದಿ
ನೀತಿ ಸಂಹಿತೆ ಬಗ್ಗೆ ಸಂಜೆ ಡಿಸಿ ಸಭೆ;     ಚುನಾವಣಾಧಿಕಾರಿಗಳ ತರಬೇತಿ ಆರಂಭ

ನೀತಿ ಸಂಹಿತೆ ಬಗ್ಗೆ ಸಂಜೆ ಡಿಸಿ ಸಭೆ; ಚುನಾವಣಾಧಿಕಾರಿಗಳ ತರಬೇತಿ ಆರಂಭ

ಹುಬ್ಬಳ್ಳಿ : ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯುವುದು ಪಕ್ಕಾ ಆಗಿದ್ದು ಈಗಾಗಲೇ ಚುನಾವಣಾ ಆಯೋಗ ಘೋಷಿಸಿರುವಂತೆ ನೀತಿ ಸಂಹಿತೆ ದಿ.16ರಿಂದಲೇ ಜಾರಿಗೆ ಬರಲಿದೆ.
ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿಗಳ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ತರಭೇತಿ ಆರಂಭಗೊAಡಿದೆ.ಅಲ್ಲದೇ ಚುನಾವಣಾ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸಂಜೆ 5 ಗಂಟೆಗೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಭೆ ನಡೆಸಲಿದ್ದು ತದನಂತರ ಚುನಾವಣೆ ಕುರಿತು ಮಾಹಿತಿ ನೀಡುವರೆನ್ನಲಾಗಿದೆ.
ನಿನ್ನೆ ಹೈಕೋರ್ಟಗೆ ಚುನಾವಣಾ ಆಯೋಗದ ಪರ ವಕೀಲರು ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿ, ಮಹಾನಗರಪಾಲಿಕೆ,ದೊಡ್ಡಬಳ್ಳಾಪುರ ನಗರಸಭೆ,ತರಿಕೆರೆ ಪುರಸಭೆ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಎಲ್ಲ ಸಿದ್ದತೆಗಳು ನಡೆದಿವೆ ಎಂದು ತಿಳಿಸಿದ್ದಾರೆ.ಇದನ್ನು ದಾಖಲಿಸಿಕೊಂಡಿರುವ ಕೋರ್ಟ ಪ್ರಗತಿಯ ವರದಿಯನ್ನು ಸೆ.14ರೊಳಗೆ ಸಲ್ಲಿಸುವಂತೆ ಸೂಚಿಸಿ ಸೆ.16ಕ್ಕೆ ಮುಂದೂಡಿದ್ದು ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲದಂತಾಗಿದೆ.
ಈಗಾಗಲೇ ನಾಮಪತ್ರ ಸಲ್ಲಿಕೆಗೆ ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ 5 ಕಡೆ, ಧಾರವಾಡದಲ್ಲಿ 3 ಕಡೆ ಕೇಂದ್ರ ತೆರೆಯಲು ಪ್ರಸ್ತಾವನೆಯನ್ನು ಮಹಾನಗರ ಆಯುಕ್ತ ಡಾ.ಸುರೇಶ ಇಟ್ನಾಳ ಸಲ್ಲಿಸಿದ್ದಾರೆ.
ಎಲ್ಲ ರಾಜಕೀಯ ಪಕ್ಚಗಳು ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ಪಕ್ಷ ಉಸ್ತುವಾರಿ ನೋಡಿಕೊಳ್ಳಲು, ಮಾಜಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ಸಮಿತಿ ರಚಿಸಿದ್ದು, ಬಿಜೆಪಿಯು ಉಸ್ತುವಾರಿಗಳನ್ನು ಪ್ರಕಟಿಸಿದೆ.ಎರಡೂ ಪಾಳೆಯದಲ್ಲೂ ಭರದಿಂದ ಚಟುವಟಿಕೆಗಳು ನಡೆದಿದ್ದು, ಜಾತ್ಯತೀತ ಜನತಾದಳದ ಸಭೆಯೂ ಇಂದು ನಡೆದಿದೆ. ಆಪ್ ಹಾಗೂ ಎಐಎಂಐಎAಗಳು ತಮ್ಮ ಕೆಲಸ ಆರಂಭಿಸಿವೆ.

 

administrator

Related Articles

Leave a Reply

Your email address will not be published. Required fields are marked *