ಹುಬ್ಬಳ್ಳಿ-ಧಾರವಾಡ ಸುದ್ದಿ
ಜು.2ಕ್ಕೆ ನಗರದಲ್ಲಿ ಬೃಹತ್ ’ಧರ್ಮ ಸಮಾರಂಭ’

ಜು.2ಕ್ಕೆ ನಗರದಲ್ಲಿ ಬೃಹತ್ ’ಧರ್ಮ ಸಮಾರಂಭ’

3ರಂದು ಕೇದಾರ ಜಗದ್ಗುರುಗಳಿಂದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ

ಹುಬ್ಬಳ್ಳಿ : ಶ್ರೀ ಕೇದಾರ ಜಗದ್ಗುರುಗಳ ಪೂಜಾ ಕೇಂದ್ರ ಸೇವಾ ಸಮಿತಿಯ ಆಶ್ರಯದಲ್ಲಿ ಗೋಕುಲ ರಸ್ತೆಯ ಕೋಟಿಲಿಂಗ ನಗರದ ಶ್ರೀ ರಾಜೇಶ್ವರ ಸಮುದಾಯ ಭವನದಲ್ಲಿ ರಂಭಾಪುರಿ ಜಗದ್ಗುರುಗಳಾದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಕೇದಾರ ಜಗದ್ಗುರುಗಳಾದ ರಾವಲ್ ಪದವಿಭೂಷಿತ ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ಬೃಹತ್ ’ ಪರಂಪರೆ ಪುನರ್ ಮನನ ಧರ್ಮಸಮಾರಂಭ ’ ಜು.2ರಂದು ಶನಿವಾರ ನಡೆಯಲಿದೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖ್ಯಸ್ಥರಾದ ಸಿಎ ಡಾ.ಎನ್ .ಎ.ಚರಂತಿಮಠ ದಿ.2 ರ ಸಂಜೆ 6 ಗಂಟೆಗೆ ಧರ್ಮ ಸಭೆಯ ಸಾನಿಧ್ಯವನ್ನು ಉಭಯ ಶ್ರೀಗಳು ವಹಿಸಲಿದ್ದು, ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆಂದರು.


ಕೈಮಗ್ಗ ಮತ್ತು ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಮಖಂಡಿಯ ಪ್ರಭುಲಿಂಗೇಶ್ವರ ಶುಗರ್ಸ ಸಿಎಂಡಿ ಜಗದೀಶ ಗುಡಗುಂಟಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಪ್ರಗತಿ ಪರ ರೈತ ಬಸಯ್ಯಾ ಹಿರೇಮಠ, ಕೆ.ಎಲ್.ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ರಾಜೇಶ್ವರ ಭವನ ಅಧ್ಯಕ್ಷರಾದ ಸೋಪಾರಾಮ್ ಚೌದರಿ ಹಾಗೂ ಕಾರ್ಯದರ್ಶಿ ವಾಗ್ತಾರಾಮ ಚೌದರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು, ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಹಾಗೂ ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಸ್ವಾಮೀಜಿಗಳು ಉಪಸ್ಥಿತರಿರುವರೆಂದರು.


ಇದಕ್ಕೂ ಮೊದಲು ಅಂದು ಮಧ್ಯಾಹ್ನ3.30ಕ್ಕೆ ಬಸವೇಶ್ವರ ನಗರದಲ್ಲಿರುವ ಸಂಗಮೇಶ್ವರ ದೇವಸ್ಥಾನದಿಂದ ಪೂರ್ಣ ಕುಂಭ ಮತ್ತು ಜನಪದ ಕಲಾ ಮೇಳದೊಂದಿಗೆ ಶೋಭಾ ಯಾತ್ರೆ ಹೊರಡಲಿದ್ದು ರಾಜೇಶ್ವರ ಸಮುದಾಯ ಭವನದಲ್ಲಿ ಮುಕ್ತಾಯಗೊಳ್ಳಲಿದೆ. 5.30ಕ್ಕೆ ಧರ್ಮ ಕಂಕಣ ಧಾರಣೆ, 5.45ಕ್ಕೆಗೆ ಧರ್ಮ ಧ್ವಜ ಅಭಿನಂದನೆ ನಡೆಯಲಿದೆ. 2ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಹಾಗೂ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವೂ ನಡೆಯಲಿದೆ ಎಂದು ವಿವರಿಸಿದರು.
ದಿ.3ರಂದು ಬೆಳಿಗ್ಗೆ 7.45 ಗಂಟೆಗೆ ಭಕ್ತರ ದೇಹ- ಮನಸ್ಸು – ಬುದ್ದಿಗಳನ್ನು ಪವಿತ್ರಗೊಳಿಸುವ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಿಮವತ್ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳಿಂದ ನಡೆಯಲಿದೆ ಎಂದರು.
ಈಗಾಗಲೇ ವಿವಿಧ ಸಮಿತಿಗಳನ್ನು ಮಾಡಲಾಗಿದ್ದು ಸಿದ್ದತೆಗಳು ಭರದಿಂದ ಸಾಗಿದ್ದು ಸಮಾರಂಭವನ್ನು ಹೊರಗಿನಿಂದ ನೋಡಲು ದೊಡ್ಡ ಎಲ್‌ಎಡಿ ಸ್ಕ್ರೀನ್ ಅಳವಡಿಸಲಾಗಿದೆ. ಎರಡೂ ದಿನಗಳ ಕಾಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿಯ ಕೃಷ್ಣಾ ಉರಣಕರ, ಗಂಗಾಧರ ಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಕುರಗುಂದ, ಶಿವಯೋಗಿ ಕಂಬಾಳಿಮಠ ಮುಂತಾದವರಿದ್ದರು.

 

administrator

Related Articles

Leave a Reply

Your email address will not be published. Required fields are marked *