ಹುಬ್ಬಳ್ಳಿ-ಧಾರವಾಡ ಸುದ್ದಿ

ನೇಹಾಗೆ ನ್ಯಾಯಕ್ಕಾಗಿ ಮಿಡಿದ ಹುಬ್ಬಳ್ಳಿ-ಧಾರವಾಡ ಅವಳಿನಗರ ಮುಸ್ಲಿಂ ಸಮುದಾಯ

ಹುಬ್ಬಳ್ಳಿಯಲ್ಲಿ ಶಾಲಾ ಕಾಲೇಜ ವಿದ್ಯಾರ್ಥಿಗಳ ಮೆರವಣಿಗೆ
ಧಾರವಾಡ ಅಂಜುಮನ್ ಬೃಹತ್ ಮೌನ ಪ್ರತಿಭಟನೆ

ಹುಬ್ಬಳ್ಳಿ : ಹು.ಧಾ.ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾಳ ಬರ್ಬರ ಹತ್ಯೆ ಖಂಡಿಸಿ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸಿ ಕೊಡುವಂತೆ ಆಗ್ರಹಿಸಿ ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆಯ ಎಲ್ಲ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಇಂದು ಬೃಹತ್ ಮೌನ ಪ್ರತಿಭಟನೆ ನಡೆಸಿದರು.


ಪ್ರತಿಭಟನೆ ನೇತೃತ್ವವನ್ನು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಎ.ಎಂ.ಹಿಂಡಸಗೇರಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫಹುಸೇನ ಹಳ್ಳೂರ ವಹಿಸಿದ್ದರು,
ಪ್ರತಿಭಟನೆಯಲ್ಲಿ ಅಂಜುಮನ್ ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ,ಕಾರ್ಯದರ್ಶಿ ಬಶೀರ ಹಳ್ಳೂರ,ಖಜಾಂಚಿ ದಾದಾಹಯಾತ್ ಖೈರಾತಿ, ಸಹ ಕಾರ್ಯದರ್ಶಿ ರಫೀಕ ಬಂಕಾಪೂರ, ಅಂಜುಮನ್ ಆಸ್ಪತ್ರೆ ಮಂಡಳಿ ಕಾರ್ಯದರ್ಶಿ ಇರ್ಶಾದ ಬಳ್ಳಾರಿ, ಅಂಜುಮನ್ ಶಿಕ್ಷಣ ಮಂಡಳಿ ಸದಸ್ಯರಾದ ಮಹೆಮೂದ ಕೊಳೂರ, ಇಲಿಯಾಸ್ ಮನಿಯಾರ, ಬಶೀರ ಗುಡಮಾಲ್, ಸಲೀಂ ಸುಂಡಕೆ, ನವೀದ್ ಮುಲ್ಲಾ, ರಿಯಾಜ್ ಖತೀಬ್, ಶಮಶೇರ್ ನಾಯಕವಾಡಿ ಅಲಹಾಜ್ ಎಂ.ಎಂ.ಕಂಚಿಸಾಬ್ ಸೇರಿದಂತೆ ಅಂಜುಮನ್ ಶಿಕ್ಷಣ ಮಂಡಳಿ ಕಾರ್ಯಕಾರಿ ಸದಸ್ಯರು, ಜಮಾತಿನ ಮುತವಲ್ಲಿಗಳು, ಕಾಲೇಜಿನ ಎಲ್ಲಾ ಪ್ರಾಂಶುಪಾಲರು ಮತ್ತು ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.
ಘಟನೆ ಖಂಡಿಸಿ ಶಹಾ ಬಜಾರ ಸೇರಿದಂತೆ ಅನೇಕ ವಾಣಿಜ್ಯ ಸಂಕೀರ್ಣಗಳೂ ಇಂದು ಮುಚ್ಚಿ ನೇಹಾ ಹತ್ಯೆಯನ್ನು ಖಂಡಿಸಲಾಯಿತು.

ಧಾರವಾಡ ಅಂಜುಮನ್ ಬೃಹತ್ ಮೌನ ಪ್ರತಿಭಟನೆ

ಧಾರವಾಡ: ವಿದ್ಯಾರ್ಥಿನಿ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಇಂದು ಅಂಜುಮನ್ ಸಂಸ್ಥೆ ನೀಡಿದ್ದ ಪ್ರತಿಭಟನೆಗೆ ಧಾರವಾಡದ ಇಡೀ ಮುಸ್ಲಿಂ ಸಮುದಾಯ ಬೆಂಬಲ ನೀಡಿದರು.
ಈ ಕಾರಣದಿಂದ ನಗರದ ಬಹುತೇಕ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ನಗರದ ತರಕಾರಿ, ಹಣ್ಣು, ಬಟ್ಟೆ, ಮಾಂಸ ಮಾರಾಟ ಮಾಡುತ್ತಿದ್ದ ಎಲ್ಲ ಮುಸ್ಲಿಂ ವ್ಯಾಪಾರಿಗಳು ಮುಂಜಾನೆಯಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.


ಬಂದ್ ಮಾಡಿದ ಅಂಗಡಿಗಳಿಗೆ ಜಸ್ಟಿಸ್ ಫಾರ್ ಎಂಬ ನೇಹಾ ಭಾವಚಿತ್ರ ಇರುವ ಪೋಸ್ಟ್‌ರಗಳನ್ನು ಅಂಟಿಸಲಾಗಿತ್ತು.
ಅಂಜುಮನ್ ಸಂಸ್ಥೆ ಸದಸ್ಯರು ಅಂಜುಮನ್ ಕಾಲೇಜು ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮಧ್ಯಾಹ್ನ ಮೌನ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಆರೋಪಿ ಫಯಾಜ್‌ಗೆ ಉಗ್ರ ಶಿಕ್ಷೆಯಾಗುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.
ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಬಶೀರಅಹ್ಮದ ಜಾಗೀರದಾರ, ಪ್ರೊ.ಎಸ್.ಎ.ಸರಗೀರೋ, ರಫೀಕಅಹ್ಮದ ಶಿರಹಟ್ಟಿ, ಮಹ್ಮದಶಫಿ ಕಳ್ಳಿಮನಿ, ಇರ್ಷಾದ ಬಿಸ್ತಿ, ಮಹಮ್ಮದಅಲಿ ಗೂಡುಬಾಯಿ, ರಿಯಾಜ್ ಹಾವೇರಿಪೇಟ, ಶಾಜಮಾನ್ ಮುಜಾಹೀದ್ ಸೇರಿದಂತೆ ಅನೇಕ ಮುತುವಲ್ಲಿಗಳು, ಹಿರಿಯರು ಭಾಗವಹಿಸಿದ್ದರು.

 

administrator

Related Articles

Leave a Reply

Your email address will not be published. Required fields are marked *