ಹುಬ್ಬಳ್ಳಿ-ಧಾರವಾಡ ಸುದ್ದಿ

ಪರಿಷತ್ ಚುನಾವಣೆಗೆ ಡಿ.10ರ ಮಹೂರ್ತ!

ಬೆಂಗಳೂರು: 2022ಕ್ಕೆ ಮುಕ್ತಾಯಗೊಳ್ಳಲಿರುವಂತ ರಾಜ್ಯ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಇದೀಗ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದೆ. ಡಿಸೆಂಬರ್ ೧೦ರಂದು ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಿಗದಿಗೊಳಿಸಿದೆ.
ಈ ಕುರಿತಂತೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ವಿಧಾನ ಪರಿಷತ್ತಿಗೆ ವಿವಿಧ ಕ್ಷೇತ್ರಗಳಿಂದ ಆಯ್ಕೆಗೊಂಡಿದ್ದಂತ ೨೫ ಸದಸ್ಯರ ಕಾಲಾವಧಿ 2022ಕ್ಕೆ ಮುಕ್ತಾಯಗೊಳ್ಳಲಿದೆ.
ಆ ಸ್ಥಾನಗಳಿಗೆ ಡಿಸೆಂಬರ್ 10, 2021ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ, ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟಿಸಲಾಗು ತ್ತದೆ. ಈ ಸಂಬಂಧ ನವೆಂಬರ್ ೧೬ರಂದು ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸೋದಾಗಿ ತಿಳಿಸಿದೆ.
ಅಂದಹಾಗೇ, ರಾಜ್ಯದ ವಿಧಾನಪರಿಷತ್ತಿಗೆ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿ ದ್ದಂತ 25 ಸದಸ್ಯರ ಕಾಲಾವಧಿ 2022ಕ್ಕೆ ಮುಕ್ತಾಯಗೊಳ್ಳಲಿದೆ. ಆ ಸ್ಥಾನಗಳಿಗೆ ತಮ್ಮದೇ ಪಕ್ಷದ ಸದಸ್ಯರನ್ನು ಆಯ್ಕೆ ಮಾಡಿ, ತುಂಬಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತೆರೆ ಮರೆಯಲ್ಲಿ ಕಸರತ್ತು ನಡೆಸಿವೆ.
ವಿಧಾನ ಪರಿಷತ್‌ನಲ್ಲಿ 75 ಸದಸ್ಯರ ಬಲದೊಂದಿಗೆ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ, ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬೇಕಾಗಿರು ವಂತ ಸದಸ್ಯರ ಬೆಂಬಲವಿಲ್ಲ. ಯಾವುದೇ ವಿಧೇಯಕವನ್ನು ಅಂಗೀಕರಿಸಲು 38 ಸದಸ್ಯರ ಬಲವನ್ನು ಬಿಜೆಪಿ ಹೊಂದಲೇ ಬೇಕಿರೋ ಅನಿವಾರ್ಯತೆ ಇದೆ. ಇದರ ನಡುವೆ ಈಗ ವಿವಿಧ ಕ್ಷೇತ್ರಗಳಲ್ಲಿ ಆಯ್ಕೆಯಾಗಿರುವಂತ 25 ಸದಸ್ಯರು 2022ಕ್ಕೆ 6 ವರ್ಷ ಕೊನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಕಾಲಾವಧಿ ಮುಕ್ತಾಯಗೊಳ್ಳಲಿದೆ.

ಅವಧಿ ಮುಕ್ತಾಯಗೊಳ್ಳಲಿರುವವರ ಪಟ್ಟಿ
ಕೋಟಾ ಶ್ರೀನಿವಾಸ ಪೂಜಾರಿ – ದಕ್ಷಿಣ ಕನ್ನಡ
ಬಿ.ಜಿ.ಪಾಟೀಲ್ – ಕಲಬುರ್ಗಿ
ಪ್ರದೀಪ್ ಶೆಟ್ಟರ್ – ಧಾರವಾಡ
ಎಂ.ಕೆ.ಪ್ರಾಣೇಶ್ ( ಉಪ ಸಭಾಪತಿ ) – ಚಿಕ್ಕಮಗಳೂರು
ಸುನೀಲ್ ಸುಬ್ರಹ್ಮಣಿ – ಬಳ್ಳಾರಿ
ಮಹಂತೇಶ್ ಕವಟಗಿಮಠ – ಬೆಳಗಾವಿ
ಅಭಯ್ ಪಾಟೀಲ್ ( ಪಕ್ಷೇತರ ) – ಬೆಳಗಾವಿ
ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಟ್ಟಿ
ಎಸ್ ಆರ್ ಪಾಟೀಲ್ ( ಪ್ರತಿಪಕ್ಷ ನಾಯಕ ) – ವಿಜಯಪುರ
ಪ್ರತಾಪ್ ಚಂದ್ರಶೆಟ್ಟಿ – ದಕ್ಷಿಣ ಕನ್ನಡ
ಶ್ರೀಕಾಂತ ಲಕ್ಷ್ಮಣ್ ಘೋಟ್ನೇಕರ್ – ಉತ್ತರ ಕನ್ನಡ
ಆರ್ ಧರ್ಮಸೇನ – ಮೈಸೂರು
ವಿಜಯ್ ಸಿಂಗ್ – ಬೀದರ್
ಬಸವರಾಜ ಪಾಟೀಲ್ ಇಟಗಿ – ರಾಯಚೂರು
ಕೆ.ಸಿ.ಕೊಂಡಯ್ಯ – ಬಳ್ಳಾರಿ
ಆರ್.ಪ್ರಸನ್ನ ಕುಮಾರ್ – ಶಿವಮೊಗ್ಗ
ಎಂ.ಎ.ಗೋಪಾಲಸ್ವಾಮಿ – ಹಾಸನ
ಎಂ.ನಾರಾಯಣಸ್ವಾಮಿ ( ಪ್ರತಿಪಕ್ಷ ಸಚೇತಕ ) – ಬೆಂಗಳೂರು
ಎಸ್.ರವಿ – ಬೆಂಗಳೂರು ಗ್ರಾಮಾಂತರ
ಜೆಡಿಎಸ್ ಬೆಂಬಲಿತ ಸದಸ್ಯರ ಪಟ್ಟಿ
ಸಂದೇಶ್ ನಾಗರಾಜ್ – ಮೈಸೂರು
ಬಸವರಾಜ ಹೊರಟ್ಟಿ ( ಸಭಾಪತಿ ) – ಪಶ್ಚಿಮ ಶಿಕ್ಷಕರ ಕ್ಷೇತ್ರ
ಸಿ.ಆರ್.ಮನೋಹರ್ – ಕೋಲಾರ
ಕಾಂತರಾಜು – ತುಮಕೂರು
ಇವರಲ್ಲದೇ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಪರಿಷತ್ ಸದಸ್ಯರ ಕಾಲಾವಧಿ ಕೂಡ ಮುಕ್ತಾಯಗೊಳ್ಳಲಿದೆ.

 

administrator

Related Articles

Leave a Reply

Your email address will not be published. Required fields are marked *