ಹುಬ್ಬಳ್ಳಿ-ಧಾರವಾಡ ಸುದ್ದಿ
ಮೈಕ್ ವಿವಾದ :ಮತ್ತೆ ಗುಡುಗಿದ ಮುತಾಲಿಕ್

ಮೈಕ್ ವಿವಾದ :ಮತ್ತೆ ಗುಡುಗಿದ ಮುತಾಲಿಕ್

8 ರಿಂದ ಬಿಜೆಪಿ ಶಾಸಕರ ಕಚೇರಿ ಮುಂದೆ ಧರಣಿ

ಹುಬ್ಬಳ್ಳಿ: ಮಸೀದಿ, ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್‌ಸ್ಪೀಕರ್ ಬಳಕೆ ವಿಚಾರದಲ್ಲಿ ಸರ್ಕಾರಕ್ಕೆ ನೀಡಿದ ಗಡುವು ಮುಗಿದಿದ್ದು, ದಿ. 8 ರಿಂದ ಬಿಜೆಪಿಯ ಶಾಸಕರ ಕಚೇರಿ, ಮನೆ ಮುಂದೆ ಧರಣಿ, ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಕಟಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ವನಿವರ್ಧಕ ನಿರ್ಬಂಧ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಪ್ರಕಟಿಸಿ. ಮೈಕ್ ಬಳಸಲು ಧಾರ್ಮಿಕ ಕೇಂದ್ರಗಳು ಅನುಮತಿ ಪಡೆಯಬೇಕು. ರಾತ್ರಿ 10 ಗಂಟೆ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಯಮ ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಹದಿನೈದು ದಿನಗಳ ಗಡವು ನೀಡಿತ್ತು. ಆದರೆ ಈವರೆಗೆ ಯಾವುದೇ ನಿಯಮಗಳು ಜಾರಿಯಾಗಿಲ್ಲ. ಸರ್ಕಾರದ ಸುತ್ತೋಲೆ ಕಸದ ಬುಟ್ಟಿಗೆ ಸೇರಿವೆ ಹೀಗಾಗಿ ಶ್ರೀರಾಮ ಸೇನೆ ಸೇರಿದಂತೆ ಹತ್ತಕ್ಕಿಂತ ಹೆಚ್ಚು ಹಿಂದೂಪರ ಸಂಘಟನೆಗಳ ಸಹಯೋಗದಲ್ಲಿ ಈ ಮೈಕ್ ತೆರವಿನ ಹೋರಾಟ ನಡೆಯಲಿದೆ ಎಂದರು.


ಬಿಜೆಪಿ ಜಯಗಳಿಸಿದ್ದೆ ಹಿಂದೂಗಳಿಂದ ಆದರೆ ಹಿಂದೂಗಳು ನಿರಂತರವಾಗಿ ಹೋರಾಟ ಮಾಡುತ್ತಾ ಬರಲಾಗುತ್ತಿದ್ದರು ಯಾಕೆ ಕಿವಿ ಮುಚ್ಚಿ ಕುಳಿತುಕೊಂಡಿದ್ದಾರೆಂಬುದು ತಿಳಿಯುತ್ತಿಲ್ಲ. ದಿ. 8 ರೊಳಗೆ ಈಗಾಗಲೇ ಹೊರಡಿಸಿದ ಸುತ್ತೋಲೆಯನ್ನು ಜಾರಿಗೊಳಿಸಬೇಕು. ಇಲ್ಲದೇ ಹೋದರೆ ಹೋರಾಟ ನಿಶ್ಚಿತ ಎಂದು ಸರ್ಕಾರದ ವಿರುದ್ದ ಹರಿ ಹಾಯ್ದರು.

ಕಾಶ್ಮೀರದಲ್ಲಿ ಹಿಂದೂಗಳ ಮಾರಣಹೋಮ: ಕಾಶ್ಮೀರದಲ್ಲಿ 375 ನೇ ವಿಧಿ ರದ್ದು ಮಾಡಿ ಕೇಂದ್ರ ಸರ್ಕಾರ ಆಡಳಿತ ಮಾಡುತ್ತಿದ್ದರು ಸಹಿತ ಅಲ್ಲಿ ಹಿಂದೂಗಳ ಮಾರಣ ಹೋಮವಾಗುತ್ತಿವೆ. ಕಳೆದ ತಿಂಗಳಲ್ಲಿ 7 ಜನರ ಕೊಲೆಯಾಗಿದೆ. ಹಿಂದೂಗಳ ಕೊಲೆಯಾಗುತ್ತಿರುವುದು ನೋವಿನ ಸಂಗತಿ. ಹಿಂದೂಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ಇಲ್ಲದೇ ಹೋದಲ್ಲಿ ನಾವೇ ಕಾಶ್ಮೀರ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

administrator

Related Articles

Leave a Reply

Your email address will not be published. Required fields are marked *