ಹುಬ್ಬಳ್ಳಿ-ಧಾರವಾಡ ಸುದ್ದಿ
ರಾಜ್ಯ ಬಿಜೆಪಿ ಟಿಕೆಟ್ : ಮುಂದುವರಿದ ಸಸ್ಪೆನ್ಸ್

ರಾಜ್ಯ ಬಿಜೆಪಿ ಟಿಕೆಟ್ : ಮುಂದುವರಿದ ಸಸ್ಪೆನ್ಸ್

ಮೊದಲ ಪಟ್ಟಿಯಲ್ಲಿ ಒಬ್ಬರ ಹೆಸರೂ ಇಲ್ಲ – ಕಳೆಗಟ್ಟುತ್ತಿರುವ ಲೆಕ್ಕಾಚಾರ

ಬೆಂಗಳೂರು : ಚುನಾವಣಾ ಆಯೋಗ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಮೊದಲೇ 195 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೂ ಕರ್ನಾಟಕದ ಒಂದೇ ಒಂದು ಕ್ಷೇತ್ರಕ್ಕೂ ಟಿಕೆಟ್ ಪ್ರಕಟಿಸದೇ ಇರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.


ಕಳೆದ ಲೋಕಸಭಾ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆದ್ದ ಕಮಲ ಪಡೆ 28 ಸ್ಥಾನಗಳ ಪೈಕಿ ಒಂದಕ್ಕೂ ಅಂತಿಮಗೊಳಿಸದೇ ಇದ್ದು ಹಾಲಿ ಸದಸ್ಯರನೇಕರ ಎದೆ ಬಡಿತ ಹೆಚ್ಚಳಕ್ಕೆ ಕಾರಣವಾಗಿದೆ. ವಿವಾದಾತ್ಮಕ ಹೇಳಿಕೆ ಮೂಲಕ ಹೆಸರು ಮಾಡಿದ್ದ ಸಾದ್ವಿ ಪ್ರಜ್ಞಾ, ಮೀನಾಕ್ಷಿ ಲೇಖಿಯಂತಹವರಿಗೆ ಟಿಕೆಟ್ ನಿರಾಕರಿಸಲಾಗಿದೆಯಲ್ಲದೇ ಮದ್ಯಪ್ರದೇಶದ ಹಾಲಿ 6 ಸಂಸದರಿಗೆ ಟಿಕೆಟ್ ನಿಕಾಕರಣೆ ಮಾಡಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ , ಕೇರಳ, ರಾಜಸ್ತಾನ, ಗುಜರಾತ, ಮುಂತಾದೆಡೆ ಟಿಕೆಟ್ ಹಂಚಿಕೆ ಮಾಡಲಾಗಿದ್ದು ಕರ್ನಾಟಕ ಮತ್ತು ಮಹಾರಾಷ್ಟ್ರದ ಸಸ್ಪೆನ್ಸ್ ಮುಂದುವರಿದಿದೆ.


ಮೊದಲ ಪಟ್ಟಿಯಲ್ಲಿ ಧಾರವಾಡ ಸಂಸದ ಅಲ್ಲದೇ ಮೋದಿ ಕ್ಯಾಬಿನೆಟ್ ನಂ. 3 ಆಗಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಒಂದೆರಡು ಹೆಸರುಗಳು ಪ್ರಕಟವಾಗಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು ಕಳೆದ ವಿಧಾನಸಭಾ ಚುನಾವಣೆ ನಂತರ ರಾಜ್ಯ ಬಿಜೆಪಿಯ ಮೇಲಿನ ಭರವಸೆಯನ್ನೇ ಕಳೆದುಕೊಂಡಿರುವ ಹೈಕಮಾಂಡ್ ತನ್ನದೇ ಆದ ವರದಿ ಆದರಿಸಿ ಟಿಕೆಟ್ ಘೋಷಣೆ ಮಾಡಬಹುದೆನ್ನಲಾಗಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತೆ ಕಮಲ ಮುಡಿದಿದ್ದು ಧಾರವಾಡ, ಹಾವೇರಿ ಅಥವಾ ಬಾಗಲಕೋಟ ಮೂರು ಕ್ಷೇತ್ರಗಳಲ್ಲೊಂದರಿಂದ ಅವರನ್ನು ಕಣಕ್ಕಿಳಿಸುವ ಚಿಂತನೆ ಇದೆ ಎನ್ನುವ ಗುಸು ಗುಸು ಮೊದಲ ಪಟ್ಟಿಯ ಬಿಡುಗಡೆಯ ನಂತರ ಮತ್ತಷ್ಟು ಜೋರಾಗಿದೆ.


ಒಂದು ಅಂದಾಜಿನ ಪ್ರಕಾರ ಹಾಲಿ 26 ಸಂಸದರ ಪೈಕಿ ಅರ್ಧಕ್ಕಿಂತ ಹೆಚ್ಚು ಸ್ಥಳಗಳಿಗೆ ಹೊಸಬರನ್ನು ಕಣಕ್ಕಿಳಿಸುವ ಸಾಧ್ಯತೆಗಳೂ ದಟ್ಟವಾಗಿವೆ ಎಂದು ಹೇಳಲಾಗುತ್ತಿದ್ದು ಯಡಿಯೂರಪ್ಪ ಬಣ, ಬಿ.ಎಲ್.ಸಂತೋಷ ಬಣಗಳು ತಮ್ಮ ತಮ್ಮ ಹಿಂಬಾಲಕರಿಗೆ ಲೋಕ ಟಿಕೆಟ್ ಕೊಡಿಸಲು ತೀವ್ರ ಯತ್ನ ನಡೆಸಿದ್ದು ಸಂತೋಷ ಬಣದವರೇ ಆದ ಹಾಲಿ ಸಚಿವ ರಾಜೀವ ಚಂದ್ರಶೇಖರಗೆ( ತಿರುವನಂತಪುರ) ಕೇರಳದ ದಾರಿ ತೋರಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಜೈಶಂಕರ ಹೆಸರುಗಳು ರಾಜ್ಯದ ಅಭ್ಯರ್ಥಿಗಳ ಪಟ್ಟಿಯಲ್ಲಿವೆ ಎನ್ನಲಾಗಿದೆ. ಆದರೆ ಕ್ಷೇತ್ರ ಇನ್ನೂ ನಿಗೂಢವಾಗಿದೆ.
ನಿನ್ನೆ ಪ್ರಕಟಗೊಂಡ ಪಟ್ಟಿಯಲ್ಲಿ 28 ಮಹಿಳೆಯರು, 47 ಮಂದಿ ಯುವಕರಿಗೆ ಮಣೆ ಹಾಕಲಾಗಿದ್ದು 195ರಲ್ಲಿ 150ಕ್ಕೂ ಹೆಚ್ಚು ಗೆಲುವಿನ ಲೆಕ್ಕಾಚಾರದೊಂದಿಗೆ ಬಿಡುಗಡೆ ಮಾಡಿದೆ.

administrator

Related Articles

Leave a Reply

Your email address will not be published. Required fields are marked *