ಹುಬ್ಬಳ್ಳಿ-ಧಾರವಾಡ ಸುದ್ದಿ

ಭಾರತ ಕೆನಡಾ ಮತ್ತು ಖಲೀಸ್ಥಾನ ಚಳವಳಿ

ಕೆನಡಾ ಹಾಗೂ ಭಾರತದ ಸಂಬಂಧದಲ್ಲಿ ತೀವ್ರ ಬಿರುಕುಮೂಡಿದೆ. ಕೆನಡಾದಲ್ಲಿ ಜೂನ್‌ನಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಭಾರತೀಯ ಗೂಢಾಚಾರಿ ಏಜೆಂಟರು ಪಾತ್ರ ವಹಿಸಿರುವ ಕುರಿತು ವಿಶ್ವಾಸಾರ್ಹ ದಾಖಲೆಗಳಿವೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ಟ್ರುಡೊ ಸೋಮವಾರ ಹೇಳಿದ ನಂತರ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಹತ್ಯೆಗೆ ಗುರಿಯಾದ ಸಿಖ್ ಪ್ರತ್ಯೇಕತವಾದಿ ನಾಯಕ ಸಿಖ್ರ ಪ್ರತ್ಯೇಕ ಸ್ವಾತಂತ್ರ ದೇಶ ಖಲೀಸ್ಥಾನ್‌ಕ್ಕಾಗಿ ತೀವ್ರ ಬೇಡಿಕೆಯಿಟಿದ್ದವನಾಗಿದ್ದ ಎಂಬುದು ವಿಶೇಷ.

 

ಏನಿದು ಖಲೀಸ್ಥಾನ ಚಳವಳಿ
ಖಲೀಸ್ಥಾನ ಎಂದರೆ ಪರಿಶುದ್ಧರ ನಾಡು ಎಂಬ ಅರ್ಥ ಬರುತ್ತದೆ. 15ನೇ ಶತಮಾನದಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಸಿಖ್ ಧರ್ಮ ಸ್ಥಾಪನೆಯಾಯಿತು. ಆನಂತರ ಭಾರತ ಬ್ರಿಟೀಷರಿಂದ 1947 ರಲ್ಲಿ ಸ್ವಾತಂತ್ಯ ಪಡೆದು ಭಾರತ, ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ದೇಶ ರಚನೆಯಾದವು. ಆ ಸಂದರ್ಭದಲ್ಲಿ ಪಂಜಾಬ್ ಪ್ರಾಂತ್ಯವನ್ನು ಭಾರತ ಹಾಗೂ ಪಾಕಿಸ್ತಾನ ಹಂಚಿಕೊಂಡವು. ಆ ಸಂದರ್ಭದಲ್ಲಿ ಸಿಕ್ರು ತಮ್ಮದೇ ಒಂದು ಸ್ವತಂತ್ರ್ಯ ದೇಶಕ್ಕಾಗಿ ಆಗ್ರಹಿಸಿ ಚಳವಳಿ ಆತಂಭಿಸಿದರು. ಇದೇ ಖಲೀಸ್ಥಾನ್ ಚಳವಳಿ. ಭಾರತ 1947ರ ಸಮಯದಲ್ಲಿ ಈ ಆಗ್ರಹವನ್ನು ತಿರಸ್ಕರಿಸಿತ್ತು.


1970-80ರ ದಶಕದಲ್ಲಿ ಮತ್ತೆ ಮುನ್ನಲೆಗೆ ಬಂದ ಈ ವಿಷಯ ಆ ದಶಕಗಳಲ್ಲಿ ತೀವ್ರ ರಕ್ತದ ಓಕುಳಿಯನ್ನೇ ಹರಿಸಿತ್ತು. ಖಲೀಸ್ಥಾನ್ವಿಚಾರವನ್ನು ದೇಶದ ಭದ್ರತೆಗೆ ಬೆದರಿಕೆ ಎಂದು ಭಾರತ ಸರ್ಕಾರ ಪರಿಗಣಿಸಿತು.
1970 ನಂತರ ಸಿಕ್ ಪ್ರತ್ಯೇಕತಾವಾದಿ ನಾಯಕ ಖಲೀಸ್ಥಾನ ದೇಶಕ್ಕಾಗಿ ತೀವ್ರ ಹೋರಾಟ ಪ್ರಾರಂಭಿಸಿದ ಸಿಕ್ರ ಪವಿತ್ರ ದೇವಾಲಯ ಆ ಸಂದರ್ಭದಲ್ಲಿ ಭಯೋತ್ಪಾದಕರ ನೆಲೇವೀಡಾಗಿತ್ತು. ಆಗೀನ ಭಾರತದ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿರವರು 1984ರಲ್ಲಿ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ನಡೆಸಿ ಸಿಕ್ಕರ ಪವಿತ್ರ ದೇವಾಲಯಕ್ಕೆ ಸೈನ್ಯ ಕಳುಹಿಸಿ ಭಯೋತ್ಪಾದಕರನ್ನು ಸದೆ ಬಡಿದಿದ್ದರು.


ಕೆಲವು ತಿಂಗಳುಗಳ ನಂತರ ಇಂದಿರಾ ಗಾಂಧಿಯವರು ಅವರ ಮನೆಯಲ್ಲಿ ಅವರ ಸಿಕ್ ಅಂಗರಕ್ಷಕರಿಂದ ಹತ್ಯೆಗೆ ಒಳಗಾದರು. 1986ರಿಂದ 1988 ರವರೆಗೆ ಸಿಕ್ ಉಗ್ರರನ್ನು ಹೊರ ಹಾಕುವ ಕಾರ್ಯಾಚರಣೆಯನ್ನು ಸೇನೆಯು ಆರಂಭಿಸಿತ್ತು.
1985ರಲ್ಲಿ ಖಲೀಸ್ಥಾನೀ ಉಗ್ರಬಾಬರ್ ಖಲ್ಸ ಕೆನಡಾದಿಂದ ಭಾರತಕ್ಕೆ ಬರುತ್ತಿದ್ದ ಏರ್ ಇಂಡಿಯಾ ಬೋಯಿಂಗ್ ೭೪೭ ವಿಮಾನದ ಮೇಲೆ ದಾಳಿ ನಡೆಸಿ 3.29 ಪ್ರಯಾಣಿಕರ ಮರಣಕ್ಕೆ ಕಾರಣವಾದನು. ಇದು ಜಾಗತಿಕವಾಗಿ ತೀವ್ರ ಟೀಕೆಗೆ ಗುರಿಯಾಯಿತು. ಖಲೀಸ್ಥಾನ್ ಬಂಡಾಯವು ನೂರಾರು ಜನ ಅಮಾಯಕರ ಮರಣಕ್ಕೆ ಕಾರಣವಾಯಿತು. ಇದರ ಗಾಯದ ಗುರುತು ಪಂಜಾಬ್ ಪ್ರಾಂತ್ಯದಲ್ಲಿ ಹೇರಳವಾಗಿದೆ.
ಭಾರತದಲ್ಲಿ ಖಲೀಸ್ಥಾನ ಚಳವಳಿಗೆ ಬೆಂಬಲ ಕಡಿಮೆ ಇದ್ದರು. ಅಮೇರಿಕಾ, ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಕೆನಡಾಗಳಲ್ಲಿ ನೆಲಿಸಿರುವ ಸಿಕ್ಕರು ಭಾರತದಲ್ಲಿ ಖಲೀಸ್ಥಾನ ಚಳವಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅದರಲ್ಲೂ ಭಾರತದ ಗುಪ್ತಚರ ವಿಭಾಗ ಗುರುತಿಸಿರುವಂತೆ ಕೆನಡಾದಲ್ಲಿ ಖಲೀಸ್ಥಾನೀ ಉಗ್ರರಿಗೆ ಸರ್ಕಾರದ ಬೆಂಬಲ ಹಾಗೂ ಸಹಕಾರ ದೊರೆಯುತ್ತಿದೆ.

ಭಾರತಕ್ಕೇಕೆ ಚಿಂತೆ
2023ರ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಖಲೀಸ್ಥಾನದ ಕುರಿತಾದ ಚಟುವಟಿಕೆಗಳನ್ನು ಗುಪ್ತಚರ ಇಲಾಖೆ ಗುರುತಿಸಿತ್ತು ಅದಕ್ಕೆ ಸಂಬಂಧಿಸಿದಂತೆ ಸ್ವಯಂಘೋಶಿತ ಸಿಕ್ ಬೋಧಕ ಹಾಗೂ ಪ್ರತ್ಯೇಕತಾವಾದಿ ಅಮೃತ್ ಪಾಲ್ನನ್ನು ಬಂಧಿಸಲಾಗಿತ್ತು
ಇದೇ ವರ್ಷ ಪ್ರಾರಂಭದಲ್ಲಿ ಕೆನಡದಲ್ಲಿ ಪ್ರತ್ಯೇಕತಾವಾದಿಗಳು ಆಯೋಜಿಸಿದ್ದ ಇಂದಿರಾ ಗಾಂಧಿ ಹತ್ಯೆಯ ಚಿತ್ರದ ಮೆರವಣಿಗೆಗೆ ಅವಕಾಶ ನೀಡಿದ್ದ ಕೆನಡಾದ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿತ್ತು, ಇದು ಸಿಕ್ ಪ್ರತ್ಯೇಕತಾವಾದದ ವೈಭವೀಕರಣ ಎಂದು ಕೆನಾಡ ರಾಯಭಾರಿಗೆ ಪ್ರತಿಭಟನೆಯನ್ನು ದಾಖಲಿಸಿತ್ತು.


ಕೆನಡಾ, ಬ್ರಿಟನ್, ಯುಎಸ್ಮ ತ್ತು ಆಸ್ಟ್ರೇಲಿಯಾದಲ್ಲಿನ ಭಾರತೀಯ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಸಿಖ್ಪ್ರ ತ್ಯೇಕತಾವಾದಿಗಳು ಮತ್ತು ಅವರ ಬೆಂಬಲಿಗರು ಆಗಾಗ್ಗೆ ಪ್ರದರ್ಶನಗಳು, ಹಿಂದೂಗಳ ಮೇಲೆ ಹಲ್ಲೆಗಳು, ದೇವಸ್ಥಾನದ ಮೇಲೆ ದಾಳಿ ಮತ್ತು ವಿಧ್ವಂಸಕ ಕೃತ್ಯಗಳ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿ ಸ್ಥಳೀಯ ಸರ್ಕಾರಗಳಿಂದ ಉತ್ತಮ ಭದ್ರತೆಯನ್ನು ಕೋರಿದೆ.
ಅದರಲ್ಲೂ ಭಾರತ ಕೆನಾಡದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಕೆನಡಾದೋಂದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಭಾರತ ಕೆನಡಾ ಸಂಬಂಧದಲ್ಲಿ ಬಿರುಕು
ಕೆನಡಾ ಸಿಕ್ ಉಗ್ರವಾದ ನಿಭಾಯಿಸಲು ವಿಫಲವಾಗಿದೆ, ಕೆನಡಾದಲ್ಲಿ ಇರುವ ಭಾರತೀಯ ರಾಯಭಾರಿಗಳು ನಿರ್ಭೀತೀಯಿಂದ ಕೆಲಸು ನಿರ್ವಹಿಸಲು ಸಿಕ್ ಉಗ್ರವಾದಿ ತೊಂದರೆ ನೀಡುತ್ತಿದ್ದು ಇದು ವಿದೇಶಾಂಗ ನೀತಿಯ ಉಲ್ಲಂಘನೆಯ ಪ್ರಮುಕ ಅಂಶವಾಗಿದೆ.


ಕೆನಾಡದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಕೃತ್ಯಗಳ ಬಗ್ಗೆ ಜಿ20 ಸಮ್ಮೇಳನದಲ್ಲಿ ಮೋದಿರವರು ಕೆನಡಾ ಪ್ರಧಾನಿ ಟ್ರುಡೋರವರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಕನಡಾ ಭಾರತದ ಪ್ರಮುಖ ರಾಯಭಾರಿಯನ್ನು ಉಚ್ಚಾಟಿಸಿದರೆ, ಭಾರತ ಕೆನಡಾದ ರಾಯಭಾರಿಯನ್ನು ಉಚ್ಚಾಟಿಸಿ ಕೆನಡಾ ಪ್ರಜೆಗಳಿಗೆ ವೀಸಾ ಸೇವೆ ಸ್ಥಗಿತಗೊಳಿಸಿದೆ.

ವಿನಯ ಹೆಬ್ಬೂರು

 

administrator

Related Articles

Leave a Reply

Your email address will not be published. Required fields are marked *